ನವದೆಹಲಿ (ಅ. 25): ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇವರಿಬ್ಬರ ವಿವಾಹಕ್ಕೆ ಸಾಕ್ಷಿಯಾಗಲು ಇಡೀ ಬಾಲಿವುಡ್ ಕಾತರದಿಂದ ಕಾಯುತ್ತಿದೆ. 

ರಣವೀರ್ ಜೊತೆ ಡೇಟಿಂಗ್ ಮಾಡುವುದಕ್ಕೂ ಮುನ್ನ ದೀಪಿಕಾ ಯಾರ್ಯಾರ ಜೊತೆ ಡೇಟಿಂಗ್ ಮಾಡಿದ್ರು ಎನ್ನುವ ವಿಚಾರ ಬಹಿರಂಗವಾಗಿದೆ. ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ. 

ಡಿಪ್ಪಿ-ರಣ್‌ವೀರ್ ಮದ್ವೆ ಪತ್ರಿಕೆ ನೋಡಿದ್ರಾ?

ನಿಹಾರ್ ಪಾಂಡ್ಯ - ಸಿನಿಮಾ ಕನಸನ್ನು ಹೊತ್ತು ಬೆಂಗಳೂರಿನಿಂದ ದೀಪಿಕಾ ಮುಂಬೈಗೆ ಹೋದ ದಿನಗಳವು. ಆ ವೇಳೆ ದೀಪಿಕಾ ಹಾಗೂ ನಿಹಾರ್ ಲವ್ವಲ್ಲಿ ಬಿದ್ದಿದ್ದರು ಎನ್ನುವ ಮಾತು ಕೇಳಿ ಬಂದಿತ್ತು. 

ಉಪೇನ್ ಪಟೇಲ್ - ದೀಪಿಕಾ, ಉಪೇನ್ ಬಗ್ಗೆ ಗುಸು ಗುಸು ಕೇಳಿ ಬಂದರೂ ಅದಕ್ಕೆ ಪ್ರೂಫ್ ಸಿಗಲಿಲ್ಲ. ಇವರಿಬ್ಬರೂ ಒಟ್ಟಿಗಿರುವ ಹಾಟ್ ಹಾಟ್ ಫೊಟೋಗಳು ಮಾತ್ರ ಬೇರೇಯದ್ದೇ ಕಥೆ ಹೇಳುತ್ತೆ. 

ಕ್ಯಾಮರಾದಲ್ಲಿ ಸೆರೆಯಾದ ರಣವೀರ್-ದೀಪಿಕಾ ಪ್ರೇಮ ಸಲ್ಲಾಪ

ಸಿದ್ ಮಲ್ಯ - ದೀಪಿಕಾ ಪಡುಕೋಣೆ ಉದ್ಯಮಿ ವಿಜಯ್ ಮಲ್ಯ ಮಗನ ಜೊತೆ ಸಾಕಷ್ಟು ಪಾರ್ಟಿಗಳಲ್ಲಿ, ಐಪಿಎಲ್ ಮ್ಯಾಚ್ ಗಳಲ್ಲಿ ಕಾಣಿಸಿಕೊಂಡಿದ್ದರು. 

ರಣಬೀರ್ ಕಪೂರ್ - ದೀಪಿಕಾ, ರಣವೀರ್ ತಮ್ಮ ಸಂಬಂಧವನ್ನು ಪಬ್ಲಿಕ್ ಮಾಡಿದಾಗ ಬಾಲಿವುಡ್ ನ ಹಾಟೆಸ್ಟ್ ಕಪಲ್ ಗಳು ಎನಿಸಿಕೊಂಡರು. ಕೆಲವು ಸಿನಿಮಾಗಳಲ್ಲಿ ಒಟ್ಟಿಗೆ ಅಭಿನಯಿಸಿದರು. ಕೊನೆಗೆ ಅದೇನಾಯ್ತೋ ಏನೋ ಬ್ರೇಕ್ ಅಪ್ ಆದರು. 

ಇನ್ನು ರಣವೀರ್ ಕಪೂರ್ ಕೂಡಾ ಡೇಟಿಂಗ್ ನಲ್ಲಿ ಹಿಂದುಳಿದಿಲ್ಲ. ನೇಹಾ ಡಿಯೋಲ್ ಎನ್ನುವವರೊಡನೆ ಡೇಟಿಂಗ್ ನಡೆಸಿದ್ದರು.  ಅನುಷ್ಕಾ ಶರ್ಮ ಜೊತೆನೂ  ಕುಚ್ ಕುಚ್ ನಡೆದಿತ್ತು.