ಸದ್ಯದ ಮಟ್ಟಿಗೆ ಬಾಲಿವುಡ್ ಬ ಮೋಸ್ಟ್ ರೋಮ್ಯಾಂಟಿಕ್ ಕಪಲ್ ಅಂದ್ರೆ ಅದು ಡೀಪಿಕಾ ಮತ್ತು ರಣವೀರ್ ಸಿಂಗ್. ಈ ಬಾಲಿವುಡ್ ಖ್ಯಾತ ಜೋಡಿ ಇದೇ ವರ್ಷ ನವೆಂಬರ್ ನಲ್ಲಿ ಮದುವೆಯಾಗಲು ಸಿದ್ಧತೆ ನಡೆಸಿರುವ ಸುದ್ದಿ ಗೊತ್ತೆ ಇದೆ.

ನವೆಂಬರ್ ನಲ್ಲಿ ಮದುವೆಯಾಗುವ ರೂಮರ್ ಗಳು ಇದ್ದರೂ ರಣವೀರ್ ಆಗಲಿ ದೀಪಿಕಾ ಆಗಲಿ ದೃಢಪಡಿಸಿಲ್ಲ. ಆದರೆ ಯುಎಸ್ ಎ ಯಲ್ಲಿ ಕೈ ಕೈ ಹಿಡಿದುಕೊಂಡು ಓಡಾಡುತ್ತಿದ್ದಾರೆ

ಸಾರ್ವಜನಿಕವಾಗಿ ಹಲವು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದ ದೀಪ್ ವೀರ್ ಎಂದೇ ಅಭಿಮಾನಿಗಳಿಂದ ಕರೆಸಿಕೊಳ್ಳುವ ಈ ಕ್ಯೂಟ್ ಜೋಡಿ ತಮ್ಮ ಸಂಬಂಧದ ಬಗ್ಗೆ ಇದುವರೆಗೆ ಒಪ್ಪಿಕೊಂಡಿಲ್ಲ. ಆದರೆ ಇಬ್ಬರ ಪ್ರೇಮ ಸಲ್ಲಾಪವನ್ನು ಅದ್ಯಾರೋ ಅಭಿಮಾನಿ ಚಿತ್ರೀಕರಣ ಮಾಡಿದ್ದು ಇನ್ ಸ್ಟಾಗ್ರಾಮ್ ನಲ್ಲಿ ಹರಿಯ ಬಿಟ್ಟಿದ್ದಾರೆ. 

ನೆಟ್ಟಿಗರ ಪಿತ್ತ ನೆತ್ತಿಗೇರಿಸಿದ ಶಾರುಖ್ ಪುತ್ರಿಯ ಅವತಾರ

ಬಾಲಿವುಡ್ ಜೋಡಿಯ ಓಡಾಟದ ವಿಡಿಯೋ ಸದ್ಯ ಸಖತ್ ವೈರಲ್ ಆಗ್ತಿದೆ.ಪದ್ಮಾವತ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಜೋಡಿ ಮೋಡಿ ಮಾಡಿದ್ದನ್ನು ಮರೆಯಲು ಸಾಧ್ಯವಿಲ್ಲ. 

View post on Instagram
View post on Instagram