ದುಬೈನ ನೋವಾ ಸಿನಿಮಾಸ್'ಗಳಲ್ಲಿ ಹೆಬ್ಬುಲಿಯು ದಿನಕ್ಕೆ 16 ಶೋಗಳು ಪ್ರದರ್ಶನಗೊಳ್ಳುತ್ತಿದೆ.
ಬೆಂಗಳೂರು(ಮಾ. 31): ಕಿಚ್ಚ ಸುದೀಪ್ ನಟನೆಯ "ಹೆಬ್ಬುಲಿ" ಸಿನಿಮಾ ಅರಬ್ ನಾಡಿನಲ್ಲೂ ಸದ್ದು ಮಾಡುತ್ತಿದೆ. ಒಮಾನ್ ದೇಶದ ಐತಿಹಾಸಿಕ ನಗರಿ ಮಸ್ಕಟ್'ನಲ್ಲಿ ಇವತ್ತಿನ ಸಂಜೆ 6ಗಂಟೆಯ ಶೋ ಸಂಪೂರ್ಣ ಹೌಸ್'ಫುಲ್ ಆಗಿದೆ ಎಂಬ ಮಾಹಿತಿ ಸಿಕ್ಕಿದೆ. ಇನ್ನೂ ಹಲವು ಶೋಗಳು ಬಹುತೇಕ ಭರ್ತಿಯಾಗಿವೆಯಂತೆ. ಮೂರು ದಿನಗಳ ಹೆಬ್ಬುಲಿ ಶೋಗಳು ಸೋಲ್ಡ್ ಔಟ್ ಆಗಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಮಸ್ಕಟ್ ಅಷ್ಟೇ ಅಲ್ಲ, ಇನ್ನೂ ಅನೇಕ ನಗರಗಳಲ್ಲೂ ಹೆಬ್ಬುಲಿಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ.
ದುಬೈ, ಶಾರ್ಜಾ, ಅಬುಧಾಬಿ, ಒಮಾನ್, ಕತಾರ್, ಕುವೇತ್ ಮತ್ತು ಬಹ್ರೇನ್ ದೇಶಗಳಲ್ಲಿ ಹೆಬ್ಬುಲಿ ಸಿನಿಮಾ ಮಾ. 30ರಂದು ಬಿಡುಗಡೆಯಾಗಿದೆ.
ದುಬೈನ ನೋವಾ ಸಿನಿಮಾಸ್'ಗಳಲ್ಲಿ ಹೆಬ್ಬುಲಿಯು ದಿನಕ್ಕೆ 16 ಶೋಗಳು ಪ್ರದರ್ಶನಗೊಳ್ಳುತ್ತಿದೆ.
ಹೆಬ್ಬುಲಿ ಎಲ್ಲೆಲ್ಲಿ ರಿಲೀಸ್?

