ಕಿಚ್ಚ ಸುದೀಪ್​ ಅಭಿನಯದ ಹೆಬ್ಬುಲಿ ಚಿತ್ರ ರಾಜ್ಯಾದ್ಯಂತ ರಿಲೀಸ್​ ಆಗಿದೆ. ಬೆಳಗ್ಗೆ 7 ಗಂಟೆಗೇ ಹಲವೆಡೆ ಪ್ರದರ್ಶನ ಕಾಣುತ್ತಿದೆ.

ಬೆಂಗಳೂರು(ಫೆ.23): ಕಿಚ್ಚ ಸುದೀಪ್​ ಅಭಿನಯದ ಹೆಬ್ಬುಲಿ ಚಿತ್ರ ರಾಜ್ಯಾದ್ಯಂತ ರಿಲೀಸ್​ ಆಗಿದೆ. ಬೆಳಗ್ಗೆ 7 ಗಂಟೆಗೇ ಹಲವೆಡೆ ಪ್ರದರ್ಶನ ಕಾಣುತ್ತಿದೆ.

ಕರ್ನಾಟಕದಲ್ಲಿ ಕನ್ನಡ ಚಿತ್ರಗಳು ಹೆಚ್ಚೆಂದರೆ 250ರಿಂದ 300 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತವೆ. ಆದರೆ, ಸುದೀಪ್ ಅಭಿನಯದ 'ಹೆಬ್ಬುಲಿ' ಕನ್ನಡ ಚಿತ್ರರಂಗದ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ. ಏಕೆಂದರೆ, 'ಹೆಬ್ಬುಲಿ' ಚಿತ್ರ ಕರ್ನಾಟಕವೊಂದರಲ್ಲೇ ಸುಮಾರು 435 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. 'ಹೆಬ್ಬುಲಿ' ಬಿಡುಗಡೆಯ ಒಂದು ವಿಶೇಷವೆಂದರೆ, ಮೈಸೂರು, ಮಂಡ್ಯ, ಕೊಳ್ಳೇಗಾಲ ಸೇರಿದಂತೆ ಹಲವು ನಗರಗಳಲ್ಲಿ ಎರಡೆರೆಡು ಚಿತ್ರಮಂದಿರಗಳಲ್ಲಿ ತೆರೆಕಂಡಿದೆ.

'ಹೆಬ್ಬುಲಿ' ಚಿತ್ರದಲ್ಲಿ ಸುದೀಪ್ ಪ್ಯಾರಾಕಮಾಂಡೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರವಿಚಂದ್ರನ್ ಸುದೀಪ್ ಅಣ್ಣನಾಗಿ ನಟಿಸಿದ್ದಾರೆ. ಉಳಿದಂತೆ ರವಿಕಿಶನ್, ರವಿಶಂಕರ್, ಚಿಕ್ಕಣ್ಣ ಹಾಗೂ 'ವೇದಾಳಂ' ಚಿತ್ರದಲ್ಲಿ ವಿಲನ್ ಆಗಿ ನಟಿಸಿರುವ ಕಬೀರ್ ದುಹಾನ್ ಸಿಂಗ್ ಕೂಡಾ ನಟಿಸಿದ್ದಾರೆ. ಅಮಲಾ ಪೌಲ್ ಈ ಚಿತ್ರದ ನಾಯಕಿ.