'ನೋಡಿ ಮಿಸ್ಟರ್ ಕಮಲ್ ಹಾಸನ್, ಮಾತು ಮನೆ ಕೆಡಿಸ್ತು, ತೂತು ಒಲೆ ಕೆಡಿಸ್ತು ಅಂತ ಅಂತಾರೆ.. ಮಾತು ಎಷ್ಟು ತೊಂದ್ರೆ ಕೊಡುತ್ತೆ ನೋಡಿ..ಮಿಸ್ಟರ್ ತಮಿಳು ಹಾಸನ್, ನೀವು ಮಿಸ್ಟರ್ ತಮಿಳು ಹಾಸನ್ ಅಂತ ಹೆಸರು ಬದಲಾಯಿಸಿಕೊಳ್ಳಿ..' ಎಂದಿದ್ದಾರೆ..
ಮಿಸ್ಟರ್ ತಮಿಳು ಹಾಸನ್, ನೀವು ಮಿಸ್ಟರ್ ತಮಿಳು ಹಾಸನ್ ಅಂತ ಹೆಸರು ಬದಲಾಯಿಸಿಕೊಳ್ಳಿ..' ಎಂದಿದ್ದಾರೆ ಸಂಗೀತ ನಿರ್ದೇಶಕ ಹಂಸಲೇಖ. ಆದರೆ, ಈ ಮಾತನ್ನು ಅವರು ಸ್ವತಃ ಹೇಳುತ್ತಿಲ್ಲ, ಅವರ ಸಂಗೀತ ಶಾಲೆಯ (ಮ್ಯೂಸಿಕ್ ಸ್ಕೂಲ್) ಸ್ಟೂಡೆಂಡ್ ಹೇಳಿದ್ದಾರೆ ಎನ್ನು ವ ಮೂಲಕ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ ಹಂಸಲೇಖ. 'ನೋಡಿ ಮಿಸ್ಟರ್ ಕಮಲ್ ಹಾಸನ್, ಮಾತು ಮನೆ ಕೆಡಿಸ್ತು, ತೂತು ಒಲೆ ಕೆಡಿಸ್ತು ಅಂತ ಅಂತ ನಮ್ ಕಡೆ ಒಂದು ಗಾದೆ ಇದೆ. ಮಾತು ಎಷ್ಟು ತೊಂದ್ರೆ ಕೊಡುತ್ತೆ ನೋಡಿ..
ತಮಿಳುನಾಡು ಸಿಎಂ ಸ್ಟಾಲಿನ್ ಅವರು ಇಡೀ ದಕ್ಷಿಣ ಭಾರತವನ್ನು ಒಂದುಗೂಡಿಸಬೇಕು ಅಂತ ಕನಸು ಕಟ್ತಿದಾರೆ, ತೆಂಕಣವನ್ನು ಕಟ್ಟಬೇಕು ಎನ್ನೋದು ಅವರ ಕನಸು. ಅವ್ರ ಕನಸಿಗೆ ನಮ್ಮ ಮಾತು ಸಹಾಯ ಮಾಡ್ಬೇಕು.. ನೀವು ಆ ಪಕ್ಷದ ಮಿತ್ರ ಪಕ್ಷ. ನೀವು ಒಳ್ಳೆಯ ಮಾತಾಡಬೇಕು, ಯೋಚಿಸಿ ಮಾತಾಡಬೇಕು.. ನೋಡಿ ನಾವು ಕನ್ನಡಿಗರು, ಭಾಷಾ ಪ್ರಿಯರು, ಭಾಷಾಂಧತೆ ನಮಗಿಲ್ಲ. ನಮ್ಮ ಕನ್ನಡ ರಾಜ್ಯದ ಸಾಂಸ್ಕ್ರತಿಕ ರಾಯಭಾರಿ ಬಸವಣ್ಣ. ಬಸವಣ್ಣ ನಮಗೆ ಕೊಟ್ಟಿದ್ದು ವಚನಗಳು. ನಾವು ವಚನಗಳಗೆ ಯಜಮಾನ್ರು.. ವಚನಗಳು ಅಂದ್ರೆ ಮಾತುಗಳು ಸ್ವಾಮೀ.. ಮಾತನ್ನು ಎಚ್ಚರಿಕೆಯಿಂದ ಆಡ್ಬೇಕು..
ತಮಿಳಿಗೆ ಲಿಪಿಯನ್ನು ಕೊಟ್ಟಿದ್ದು ಕನ್ನಡ ಭಾಷೆ ಅಂತ ವಿದ್ವಾಂಸರು ಹೇಳ್ತಾರೆ. ಅದ್ರ ಬಗ್ಗೆ ಸ್ವಲ್ಪ ವಿಚಾರಿಸಿ ನೋಡಿ.. ನಾವು ಕಲಾವಿದರು, ತೆಂಕಣ ಕಟ್ಟೋ ಕನಸನ್ನು ಹೊತ್ತವರು. ಎಲ್ಲರೂ ಒಟ್ಟಾಗಿ ಬದುಕಬೇಕು ಅಂತ ಆಸೆ ಪಡೋ ಭಾರತೀಯರು. ಅದ್ರಿಂದ ನೀವು ದಯವಿಟ್ಟು ಕ್ಷಮೆ ಕೇಳಿ, ಏನೂ ತಪ್ಪಿಲ್ಲ. ನೀವು ಕ್ಷಮೆ ಕೇಳಿದ್ರೆ ಕ್ಷಮಾ ಹಾಸನ್ ಆಗ್ತೀರಿ, ಇಲ್ಲ ಅಂದ್ರೆ 'ಆ ಹಾಸನ್' ಆಗ್ತೀರಿ'. 'ಆ ಹಾಸನ್'ದಲ್ಲಿ ಭಾಷಾಂಧತೆ, ಮತಾಂಧತೆ ಎಂಬ ಕೊಳಕು ಬೀಜದ ಅನುಮಾನವಿದೆ' ಎಂದಿದ್ದಾರೆ 'ಸಂಗೀತ ಬ್ರಹ್ಮ' ಖ್ಯಾತಿಯ ಹಂಸಲೇಖ.
ಕಮಲ್ ಹಾಸನ್ ಸೃಷ್ಟಿಸಿದ ಭಾಷಾ ವಿವಾದಕ್ಕೆ ನಟಿ ರಮ್ಯಾ ಇದೀಗ ಎಂಟ್ರಿ ಕೊಟ್ಟಿದ್ದಾರೆ. ಕಮಲ್ ಪರ ಬ್ಯಾಟ್ ಬೀಸಿದ ಸ್ಯಾಂಡಲ್ವುಡ್ ಕ್ವೀನ್ ಈ ಬಗ್ಗೆ ಮಾತನ್ನಾಡಿದ್ದಾರೆ. 'ಬಹುಶಃ ಕಮಲ್ ಕನ್ನಡ, ತಮಿಳು, ತೆಲುಗು ಎಲ್ಲವೂ ಒಂದೇ ಮೂಲದಿಂದ ಬಂದಿವೆ ಅಂತ ಹೇಳಿದ್ದಾರೆ.
ಎಲ್ಲಾ ದ್ರಾವಿಡ ಭಾಷೆಗಳಿಗೆ ಒಂದೇ ಬೇರು ಅನ್ನೋದು ಅವರ ಮಾತಿನ ಅರ್ಥ. ಇದಕ್ಕಾಗಿ ಅವರ ಸಿನಿಮಾ ಥಗ್ ಲೈಫ್ ಬ್ಯಾನ್ ಮಾಡೋದು ತಪ್ಪು..' ಎಂದಿದ್ದಾರೆ. ಆದರೆ, ರಮ್ಯಾ ಬಳಸಿದ 'ಬಹುಶಃ' ಪದದ ಅರ್ಥವೇನು ಎಂಬುದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ನಟ ಕಮಲ್ ಹಾಸನ್ ಮಾತಿಗೆ ಕನ್ನಡದ ಹಿರಿಯ ನಟಿ ಹಾಗೂ ಮಾಜಿ ಸಂಸದೆ ಸುಮಲತಾ ಅಂಬರೀಷ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಕನ್ನಡದ ಬಗ್ಗೆ ಕಮಲ್ ಹಾಸನ್ ಹೇಳಿಕೆ ತಪ್ಪು ಎಂದ ಸುಮಲತಾ 'ಭಾಷೆಯ ಬಗ್ಗೆ ಮಾತನಾಡೋವಾಗ ಯೋಚಿಸಿ ಮಾತನಾಡಬೇಕು. ನಾವ್ಯಾರು ಪಂಡಿತರಲ್ಲ, ಯಾವ ಭಾಷೆಯಿಂದ ಯಾವ ಭಾಷೆ ಅಂತ ಹೇಳೋಕೆ ಬರಲ್ಲ. ಸೀನಿಯರ್ ನಟರಾಗಿ ಯೋಚಿಸಿ ಮಾತನಾಡಬೇಕು. ಯಾರೊಬ್ಬರ ಹೇಳಿಕೆಯಿಂದ ಕನ್ನಡದ ಘನತೆ ಕಡಿಮೆ ಆಗಲ್ಲ' ಎಂದಿದ್ದಾರೆ.
ಜೊತೆಗೆ, 'ಕನ್ನಡದ ಭಾಷೆಗೆ ಅದರದ್ದೆ ಆದ ಘನತೆ ಇದೆ. ಅಪಮಾನ ಮಾಡೋದು ಸರಿಯಲ್ಲ. ಹೇಳಿಕೆ ನೀಡೋವಾಗ ಎಚ್ಚರಿಕೆಯಿಂದ ನೀಡಬೇಕು. ಯಾವ ಭಾಷೆಯಿಂದ ಯಾವ ಭಾಷೆ ಬಂದಿದೆ ಅನ್ನೊದು ಯಾರಿಗು ತಿಳಿದಿಲ್ಲ. ಕನ್ನಡಕ್ಕೆ ಅಪಮಾನವಾದರೆ ಕನ್ನಡಿಗರು ಸಹಿಸಲ್ಲ. ರಾಜಕಾರಣಿಗಳು ಈ ಬಗ್ಗೆ ಮಾತನಾಡಬಾರದು ಅನ್ನೋದು ಅವರವರ ಅಭಿಪ್ರಾಯ' ಎಂದು ಹೇಳಿಕೆ ನೀಡುವ ಮೂಲಕ ನಟ ಕಮಲ್ ಹಾಸನ್ ಕನ್ನಡ ಭಾಷೆ ಬಗ್ಗೆ ಅವಮಾನ ಮಾಡಿದ್ದು ತಪ್ಪು ಎಂದಿದ್ದಾರೆ.
ಇನ್ಜು ಈ ಬಗ್ಗೆ ನಿನ್ನೆ ಕನ್ನಡದ ಹಿರಿಯ ನಟ ಶ್ರೀನಾಥ್ ಅವರು ರಿಯಾಕ್ಟ್ ಮಾಡಿದ್ದಾರೆ. ಕಮಲ್ ಹಾಸನ್ ಗೆ ತಿರುಗೇಟು ಕೊಟ್ಟು ಹಿರಿಯ ನಟ ಶ್ರೀನಾಥ್ ಮಾತನ್ನಾಡಿದ್ದಾರೆ. 'ಕನ್ನಡ ಎಲ್ಲಿಂದಲೂ ಹುಟ್ ಬೇಕಾಗಿಲ್ಲ, ಅದು ಎಲ್ಲಿಂದ ಹುಟ್ಟಬೇಕೋ ಅಲ್ಲಿಂದ ಹುಟ್ಟಿದೆ. ಬೇಕಾದಷ್ಟು ಭಾಷೆನ ಬೆಳಸಿದೆ ಕನ್ನಡ.
ಅದು ಎಲ್ಲಿಂದ ಹುಟ್ಟಿತ್ತು ಎಂಬುದು ಕನ್ನಡಿಗರಿಗೆ ಗೊತ್ತಿದೆ, ಅದನ್ನು ಬೆರೆಯವರಿಂದ ತಿಳ್ಕೊಬೇಕಾಗಿಲ್ಲ . ಯಾವ ವ್ಯಕ್ತಿನೂ 'ನಾನು ಗ್ರೇಟ್' ಅಂದ್ಕೋಬಾರ್ದು, 'ನಾವು' ಅಂತ ಅಂದ್ಕೋಬೇಕು. ನನ್ನ ಭಾಷೆ ಬಗ್ಗೆ ನನಗೆ ಹೆಮ್ಮೆ ಇದೆ, ನಮ್ಮ ಭಾಷೆ ಬಗ್ಗೆ ಯಾರೋ ಬೇರೆಯವರು ಬಂದು ಹೇಳ್ಬೇಕಾಗಿಲ್ಲ, ನಮ್ಮ ಭಾಷೆ ಬಗ್ಗೆ ನಮಗೆ ಗೊತ್ತಿದೆ' ಎಂದಿದ್ದಾರೆ ನಟ ಶ್ರೀನಾಥ್.
ಚೆನ್ನೈನಲ್ಲಿ ನಡೆದ ಇವೆಂಟ್ನಲ್ಲಿ ಕನ್ನಡ ಭಾಷೆ ಹುಟ್ಟಿದ್ದು ತಮಿಳಿನಿಂದ ಎಂದಿದ್ದರು ಕಮಲ್ ಹಾಸನ್. ಕರ್ನಾಟಕದಲ್ಲಿ ಕಮಲ್ ಹಾಸನ್ ವಿರುದ್ದ ಕನ್ನಡ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಅಷ್ಟೆ ಅಲ್ಲ, ಕ್ಷಮೆ ಕೇಳದೇ ಹೋದರೇ ಥಗ್ ಲೈಫ್ ಚಿತ್ರದ ಬಿಡುಗಡೆಗೆ ಅನುಮತಿ ಇಲ್ಲ ಎಂದು ಕೂಡ ಸಂಘಟನೆಗಳು ಹೇಳಿವೆ. ಆದರೆ, ಈ ಬೆನ್ನಲ್ಲೇ ನಟ ಕಮಲ್ ಹಾಸನ್ ಇದೀಗ ಹೇಳಿರುವ ಹೇಳಿಕೆ ಭಾರೀ ಮುಖ್ಯವಾಗಿದೆ.
ಅಂದಹಾಗೆ, ನಟ ಕಮಲ್ ಹಾಸನ್ ಅವರು ಕೇರಳದ ತಿರುವನಂತಪುರಂ ನಲ್ಲಿ ನಡೆಯುತ್ತಿರುವ ಥಗ್ ಲೈಫ್ ಚಿತ್ರದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತ 'ನಾನು ಕ್ಷಮೆ ಕೇಳೋದಿಲ್ಲ' ಎಂದಿದ್ದಾರೆ. ಕರ್ನಾಟಕದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ಕಮಲ್ ಹಾಸನ್ ಅವರಿಗೆ ಅಲ್ಲಿ ಪ್ರಶ್ನೆ ಎದುರಾಗಿದೆ. ಆ ಬಗ್ಗೆ ಮಾತನಾಡುತ್ತ ನಟ ಕಮಲ್ ಹಾಸನ್ 'ಕ್ಷಮೆ ಕೇಳುವಂಥದ್ದು ನಾನೇನು ಹೇಳಿಲ್ಲ' ಎಂದಿದ್ದಾರೆ ಕಮಲ್ ಹಾಸನ್..!
ಸದ್ಯ ನಟ ಶಿವರಾಜ್‌ಕುಮಾರ್ ಅವರು ಕಮಲ್ ಹಾಸನ್ ಮಾತಿಗೆ ವಿರೋಧ ವ್ಯಕ್ತಪಡಿಸದೇ, ತಾವೊಬ್ಬರು ಕಮಲ್ ಹಾಸನ್ ಅಭಿಮಾನಿ ಹಾಗೂ ಕನ್ನಡದ ಅಪ್ಪಟ ಅಭಿಮಾನಿ ಕೂಡ ಎಂದಿದ್ದಾರೆ. ನಟಿ ರಮ್ಯಾ ಅವರು ಕಮಲ್ ಹಾಸನ್ ಪರ ಬ್ಯಾಟ್ ಬೀಸಿ, ‘ಥಗ್ ಲೈಫ್’ ಸಿನಿಮಾ ಬ್ಯಾನ್ ಮಾಡೋದು ತಪ್ಪು' ಎಂದಿದ್ದಾರೆ.
ಆದರೆ, ನಾಗತಿಹಳ್ಳಿ ಚಂದ್ರಶೇಖರ್, ನಟ ಶ್ರೀನಾಥ್, ಜಗ್ಗೇಶ್, ಸುಮಲತಾ ಅಂಬರೀಷ್ ಹಾಗೂ ಇದೀಗ ಹಂಸಲೇಖ ಅವರು ಕಮಲ್ ಹಾಸನ್ ಮಾಡಿರುವ ಕನ್ನಡದ ಬಗೆಗಿನ ಅವಮಾನವನ್ನು ಖಂಡಿಸಿ ಮಾತನ್ನಾಡಿದ್ದಾರೆ.
