Asianet Suvarna News Asianet Suvarna News

ಮೊದಲ ಬಾರಿ ಕನ್ನಡಕ್ಕೆ ಡಬ್‌ ಆಯ್ತು ಗುಜರಾತಿ ಚಿತ್ರ: ಜುಲೈ 7ಕ್ಕೆ ರಾಯರು ಬಂದರು ಮಾವನ ಮನೆಗೆ ತೆರೆಗೆ

ಕನ್ನಡಕ್ಕೆ ಡಬ್ ಆಗಿರುವ ಗುಜರಾತಿ ಸಿನಿಮಾ ‘ರಾಯರು ಬಂದರು ಮಾವನ ಮನೆಗೆ’ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಜುಲೈ 7ಕ್ಕೆ ಬಿಡುಗಡೆ ಆಗುತ್ತಿರುವ ಈ ಚಿತ್ರವನ್ನು ನಿರ್ಮಾಪಕ ಜಾಕ್ ಮಂಜು ವಿತರಣೆ ಮಾಡುತ್ತಿದ್ದಾರೆ.

gujarati movie rayaru bandaru mavana manege release in kannada on july 7th gvd
Author
First Published Jun 12, 2023, 9:43 AM IST | Last Updated Jun 12, 2023, 9:43 AM IST

ಮೊದಲ ಬಾರಿ ಕನ್ನಡಕ್ಕೆ ಡಬ್ ಆಗಿರುವ ಗುಜರಾತಿ ಸಿನಿಮಾ ‘ರಾಯರು ಬಂದರು ಮಾವನ ಮನೆಗೆ’ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಜುಲೈ 7ಕ್ಕೆ ಬಿಡುಗಡೆ ಆಗುತ್ತಿರುವ ಈ ಚಿತ್ರವನ್ನು ನಿರ್ಮಾಪಕ ಜಾಕ್ ಮಂಜು ವಿತರಣೆ ಮಾಡುತ್ತಿದ್ದಾರೆ. ಇದು ಮನೆ ಅಳಿಯನ ಕತೆಯನ್ನು ಹೇಳುವ ಸಿನಿಮಾ. ಹೀಗಾಗಿ ಫ್ಯಾಮಿಲಿ ಪ್ರೇಕ್ಷಕರು ನೋಡಬಹುದಾದ ಚಿತ್ರ ಎಂಬುದು ಚಿತ್ರತಂಡ ಕೊಡುವ ಭರವಸೆ. ‘ನಮ್ಮ ಕನ್ನಡ ಚಿತ್ರಗಳು ಬೇರೆ ಭಾಷೆಯಲ್ಲಿ ಸದ್ದು ಮಾಡುತ್ತಿವೆ. ಬೇರೆ ಭಾಷೆಯ ಚಿತ್ರಗಳು ಇಲ್ಲಿ ಬಿಡುಗಡೆ ಆಗುತ್ತಿವೆ. ಇದೊಂದು ಒಳ್ಳೆಯ ಬೆಳವಣಿಗೆ. 

ಸಿನಿಮಾಗಳು ಇಲ್ಲದೆ ಮುಚ್ಚುವ ಹಂತದಲ್ಲಿರುವ ಚಿತ್ರಮಂದಿರಗಳು ಉಳಿಯಬೇಕು ಎಂದರೆ ಎಲ್ಲ ಭಾಷೆಯ ಚಿತ್ರಗಳು ಎಲ್ಲ ಭಾಷೆ ಹಾಗೂ ರಾಜ್ಯಗಳಲ್ಲಿ ಪ್ರದರ್ಶನ ಕಾಣಬೇಕು’ ಎಂದು ವಿತರಕ ಜಾಕ್ ಮಂಜು ಹೇಳಿದರು. ವಿಫುಲ್ ಶರ್ಮಾ ನಿರ್ದೇಶನದ ಈ ಚಿತ್ರವನ್ನು ಶೈಲೇಶ್‌ ಧಮೇಲಿಯಾ, ಅನಿಲ್‌ ಸಂಘವಿ, ಭರತ್‌ ಮಿಸ್ತ್ರೀ ನಿರ್ಮಿಸಿದ್ದಾರೆ. ತುಷಾರ್ ಸಾಧು, ಕಿಂಜಲ್‌ ರಾಜಪ್ರಿಯಾ ತಮ್ಮ ಪಾತ್ರಗಳ ಬಗ್ಗೆ ಹೇಳಿಕೊಂಡರು. ರಾಗಿ ಜಾನಿ, ಕಾಮಿನಿ ಪಾಂಚಾಲ್‌, ಪ್ರಶಾಂತ್‌ ಬರೋಟ್, ಜಯ್‌ ಪಾಂಡ್ಯ, ಜೈಮಿನಿ ತ್ರಿವೇದಿ ತಾರಾಬಳಗದಲ್ಲಿದ್ದಾರೆ.

ಕಿರುತೆರೆಯಿಂದ ದೂರ ಸರಿದ್ರಾ ಚಂದನ‌ ಅನಂತಕೃಷ್ಣ? ಈವಾಗ ಏನ್ ಮಾಡ್ತಿದ್ದಾರೆ?

ಕನ್ನಡದಲ್ಲಿ ಮಾತು ಆರಂಭಿಸಿದ ನಾಯಕ ತುಷಾರ್ ಸಾಧು, 'ಇದೊಂದು ಅದ್ಭುತ ಅನುಭವ. ನಾನು ಬೆಂಗಳೂರಿಗೆ ಎರಡನೇ ಬಾರಿ ಬಂದಿದ್ದೇನೆ. ಜಾಕ್ ಮಂಜು ಸರ್ ಇಲ್ಲದೇ ಈ ಕೆಲಸ ಆಗುತ್ತಿರಲಿಲ್ಲ' ಎಂದು ತಿಳಿಸಿದರು. ಒಂದೇ ಗುಣಗಳಿರುವ ಜೋಡಿ ಪ್ರೀತಿಸಿ ಮದುವೆಯಾಗುತ್ತಾರೆ. ಮದುವೆಯಾದ ಹುಡುಗಿ ಗಂಡನ ಮನೆಗೆ ಬರುವುದು ಕಾಮನ್. ಕೆಲವೊಮ್ಮೆ ಮನೆ ಅಳಿಯನಾಗಿ ಹೋಗುವುದು ಅಪರೂಪ.‌ ಇಲ್ಲಿ ಮನೆ ಅಳಿಯನಾಗಿ ಹೋಗುವ ನಾಯಕನ ವ್ಯಥೆ ಕಥೆ ಸುತ್ತಾ ಇಡೀ ಸಿನಿಮಾ ಸಾಗುತ್ತದೆ. ಕೌಟುಂಬಿಕ ಕಥಾಹಂದರವುಳ್ಳ 'ರಾಯರು ಬಂದರು ಮಾವನ ಮನೆಗೆ' ಸಿನಿಮಾ ಜುಲೈ 7ರಂದು ಕನ್ನಡ ಪ್ರೇಕ್ಷಕರ ಎದುರು ಬರಲಿದೆ.

ಚಿರು ಸಹಿ ಇನ್ನೂ ಉಳಿದಿದೆ; ಬೆಡ್‌ರೂಮ್‌ ವಿಡಿಯೋ ರಿವೀಲ್ ಮಾಡಿದ ಮೇಘನಾ ರಾಜ್!

ರೇವ್ ಪಾರ್ಟಿ ಚಿತ್ರೀಕರಣ ಪೂರ್ಣ: ರಾಜು ಬೋನಗಾನಿ ನಿರ್ದೇಶನ ಮತ್ತು ನಿರ್ಮಾಣದ ‘ರೇವ್ ಪಾರ್ಟಿ’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಕ್ರಿಶ್ ಸಿದ್ದಿಪಲ್ಲಿ, ರಿತಿಕಾ ಚಕ್ರವರ್ತಿ, ಐಶ್ವರ್ಯಾ ಗೌಡ, ಸುಚೇಂದ್ರ ಪ್ರಸಾದ್, ತಾರಕ್ ಪೊನ್ನಪ್ಪ ಚಿತ್ರದ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರೇವ್ ಪಾರ್ಟಿ ಕುರಿತ ಕಥಾಹೊಂದಿರುವ ಸಿನಿಮಾ ಇದು. ‘ರೇವ್ ಪಾರ್ಟಿ ನಡೆಯುವುದು ಹೇಗೆ, ಅದರಿಂದಾಗುವ ದುಷ್ಪರಿಣಾಮಗಳೇನು ಎಂಬುದರ ಕುರಿತು ಸಿನಿಮಾ ತಿಳಿಸುತ್ತದೆ. ಹಾಗಾಗಿ ಯುವಜನರಿಗೆ ಇಷ್ಟವಾಗಲಿದೆ’ ಎಂದು ನಿರ್ದೇಶಕ ರಾಜು ಬೋನಗಾನಿ ತಿಳಿಸಿದ್ದಾರೆ. ದಿಲೀಪ್ ಭಂಡಾರಿ ಸಂಗೀತ ಸಂಯೋಜನೆ, ವೆಂಕಟ್ ಮನ್ನಂ ಛಾಯಾಗ್ರಹಣ, ರವಿಕುಮಾರ್ ಸಂಕಲನ ಚಿತ್ರಕ್ಕಿದೆ. ಇದೊಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.

Latest Videos
Follow Us:
Download App:
  • android
  • ios