ಭಾರತ ಸಿನಿಮಾ ರಂಗದಲ್ಲಿ ವಿಲನ್ ಎಂದರೆ ಥಟ್ಟನೆ ನೆನಪಾಗುವುದು ಅಮರೀಶ್ ಪುರಿ. ಇಂದು ಅವರ 87 ನೇ ಹುಟ್ಟುಹಬ್ಬ. ಗೂಗಲ್ ಡೂಡಲ್ ಅವರನ್ನಿಂದು ಸ್ಮರಿಸಿಕೊಂಡಿದೆ. ಹುಟ್ಟುಹಬ್ಬವನ್ನು ಸೆಲಬ್ರೇಟ್ ಮಾಡಿದೆ. 

ಅಣ್ಣಾವ್ರ 89ನೇ ಹುಟ್ಟುಹಬ್ಬದ ಸಂಭ್ರಮ: ನಟ ಸಾರ್ವಭೌಮನ ವರ್ಣಚಿತ್ರ ಪ್ರಕಟಿಸಿ ಗೂಗಲ್ ಗೌರವ

ಅಮರೀಶ್ ಪುರಿ ವಿಲನ್ ಪಾತ್ರದಲ್ಲೇ ಹೆಸರು ಮಾಡಿದವರು. ಸುಮಾರು 400 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ, ಹಿಂದಿ, ಮಲಯಾಳಂ, ತಮಿಳು, ತೆಲುಗು, ಇಂಗ್ಲೀಷ್, ಪಂಜಾಬಿ ಸೇರಿದಂತೆ ಸಾಕಷ್ಟು ಭಾಷೆಗಳಲ್ಲಿ ನಟಿಸಿದ್ದಾರೆ. 

1987 ರಲ್ಲಿ ತೆರೆ ಕಂಡ ಮಿಸ್ಟರ್ ಇಂಡಿಯಾ ಸಿನಿಮಾದಲ್ಲಿ ಮೊಗ್ಯಾಂಬೊ ಪಾತ್ರ ಇವರ ಐಕಾನಿಕ್ ಪಾತ್ರ. ಮೊಗ್ಯಾಂಬೋ ಖುಷ್ ಹುವಾ ಎನ್ನುವ ಡೈಲಾಗ್ ಸಿಗ್ನೇಚರ್ ಡೈಲಾಗ್ ಆಗಿದೆ. 

ರಸಋಷಿ ಕುವೆಂಪುಗೆ ಗೂಗಲ್ ಡೂಡಲ್ ಗೌರವ: ಯಾರ ಕಲೆಯಿದು?

ಮೊದಲ ಪ್ರಯತ್ನದಲ್ಲಿ ನೀವು ಯಶಸ್ಸನ್ನು ಪಡೆಯದಿದ್ದರೆ ಮತ್ತೆ ಮತ್ತೆ ಪ್ರಯತ್ನಿಸಿ. ಕೊನೆಗೆ ನೀವು ಅಮರೀಶ್ ಪುರಿಯಂತಾಗುತ್ತೀರಿ. ಎಲ್ಲಾ ವೈಫಲ್ಯಗಳನ್ನು ಮೆಟ್ಟಿ ನಿಂತು ದೊಡ್ಡ ನಟನಾಗಿ ಬೆಳೆದವರು ಅಮರೀಶ್ ಪುರಿ ಎಂದು ಗೂಗಲ್ ಹೇಳಿದೆ. 

ರಾಜ್ ಹುಟ್ಟುಹಬ್ಬದಂದು ಅವರನ್ನೂ ಕೂಡಾ ಗೂಗಲ್ ಡೂಡಲ್ ನೆನೆಸಿಕೊಂಡಿತ್ತು. ಅದೇ ರೀತಿ ಕುವೆಂಪು ಅವರನ್ನು ನೆನೆಸಿಕೊಂಡಿದೆ.