ಡಾಕ್ಟರ್ ರಾಜ್​ ಕುಮಾರ್ ಜನ್ಮ ದಿನ ಬಂದೇ ಬಿಡ್ತು. ಅಭಿಮಾನಿ ದೇವರುಗಳು ಆಚರಣೆಗೆ ಸಜ್ಜಾಗಿಯೇ ಬಿಟ್ಟರು. ಹೌದು ರಾಜ್ ಜನ್ಮ ದಿನ ಬಂದರೆ ಅಭಿಮಾನಿಗಳಿಗೆ ದೊಡ್ಡ ಹಬ್ಬವೇ ಸರಿ. ರಾಜ್ ಈಗಲೂ ಅಭಿಮಾನಿಗಳಲ್ಲಿ ಎಂದೆಂದೂ ಆಚರಿಸಲ್ಪಡುವ ಉತ್ಸವ ಮೂರ್ತಿ.

ಬೆಂಗಳೂರು(ಎ.24): ಡಾಕ್ಟರ್ ರಾಜ್​ ಕುಮಾರ್ ಜನ್ಮ ದಿನ ಬಂದೇ ಬಿಡ್ತು. ಅಭಿಮಾನಿ ದೇವರುಗಳು ಆಚರಣೆಗೆ ಸಜ್ಜಾಗಿಯೇ ಬಿಟ್ಟರು. ಹೌದು ರಾಜ್ ಜನ್ಮ ದಿನ ಬಂದರೆ ಅಭಿಮಾನಿಗಳಿಗೆ ದೊಡ್ಡ ಹಬ್ಬವೇ ಸರಿ. ರಾಜ್ ಈಗಲೂ ಅಭಿಮಾನಿಗಳಲ್ಲಿ ಎಂದೆಂದೂ ಆಚರಿಸಲ್ಪಡುವ ಉತ್ಸವ ಮೂರ್ತಿ.

Add Asianetnews Kannada as a Preferred SourcegooglePreferred

ರಾಜಕುಮಾರ ಎಲ್ಲರ ಅಕ್ಕರೆ ನಾಯಕ ನಟ. ನಮ್ಮಣ್ಣನವರು ಅಂತ ಕರೆಯುವ ಅದೆಷ್ಟೋ ಹೆಣ್ಮಕ್ಕಳು ಈಗಲೂ ಇದ್ದಾರೆ. ರಾಜ್ ನಮ್ಮ ದೇವರು ಅನ್ನೋರ ಸಂಖ್ಯೆನೂ ದೊಡ್ಡಿದೆ ಇದೆ ಬಿಡಿ. ಅದರಂತೆ ಕಂಠೀರವ ಸ್ಟುಡಿಯೋ ಸದಾ ರಾಜ್​ ಭಕ್ತರಿಂದ ತುಂಬಿರುತ್ತದೆ. ಪ್ರತಿ ಸಲದಂತೆ ಈ ಬಾರಿಗೆ ಜನಸಾಗರ ಕಂಠೀರವ ಸ್ಟುಡಿಯೋಗೆ ಹರಿದು ಬರಲಿದೆ.

ಇನ್ನು ಈ ಬಾರಿ ರಾಜ್ ಹುಟ್ಟು ಹಬ್ಬಕ್ಕೆ ತುಂಬಾ ಗಮನ ಸೆಳೆದಿರೋದು ರಾಜಕುಮಾರ ಚಿತ್ರದ ವಿಚಾರ. ರಾಜ್ ಕುಮಾರ್ ಹುಟ್ಟುಹಬ್ಬಕ್ಕೇನೆ ಚಿತ್ರದ ನಿರ್ಮಾಪಕರು ರಾಜ್ಯದ ಅಷ್ಟೂ ಸಿಂಗಲ್​ ಥಿಯೇಟರ್ ನಲ್ಲಿ ಶೇಕಡ 50 ರಷ್ಟು ರಿಯಾತಿ ದರಲ್ಲಿ ಚಿತ್ರ ಪ್ರದರ್ಶನ ಮಾಡಲಿದ್ದಾರೆ.

ಶಿವರಾಜಕುಮಾರ್ ಅಭಿನಯದ ಬಂಗಾರ ಸನ್ ಆಫ್ ಬಂಗಾರದ ಮನುಷ್ಯ ಚಿತ್ರದ ಹಾಡು ಕೂಡ ಇದೇ ದಿನ ರಿಲೀಸ್ ಆಗುತ್ತಿವೆ. ಇದರ ಹೊರತಾಗಿ ರಾಜ್ಯ ಸರ್ಕಾರ ರಾಜ್​ ಕುಮಾರ್ ಅವರ 89 ನೇ ಜನ್ಮ ದಿನವನ್ನ ರವೀಂದ್ರ ಕಲಾಕ್ಷೇತ್ರದಲ್ಲಿ ಬೆಳಗ್ಗೆ 11 ಗಂಟೆಗೆ ಆಚರಿಸುತ್ತಿದೆ. ರಾಜ್ ಪುತ್ರರಾದ ಶಿವರಾಜ್ ಕುಮಾರ್,ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜಕುಮಾರ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿಲಿದ್ದಾರೆ.

ಇದೇ ಸಂದರ್ಭದಲ್ಲಿ ಸರ್ಚ್‌ ಇಂಜಿನ್‌ ಗೂಗಲ್‌ ತನ್ನ ಮುಖಪುಟದಲ್ಲಿ ರಾಜ್‌ ಅವರ ವರ್ಣಚಿತ್ರ ಪ್ರಕಟಿಸಿದೆ. ಕನ್ನಡದ ನಟರೊಬ್ಬರ ಛಾಯಾ ಚಿತ್ರವನ್ನು ಗೂಗಲ್ ಪ್ರಕಟಿಸಿರುವುದು ಇದೆ ಮೊದಲು. ಈ ಮೂಲಕ ಗೂಗಲ್ ವರನಟನಿಗೆ ಗೌರವ ಸೂಚಿಸಿದೆ. ಈ ಹಿಂದೆ ಕೆಲವು ಹಿಂದಿ ನಟರ ಫೋಟೋಗಳನ್ನು ಹಾಕಲಾಗಿತ್ತು ಎಂದು ಹೇಳಲಾಗುತ್ತಿದೆ.