ಬಿಗ್ ಬಾಸ್ ರಿಯಾಲಿಟಿ ಶೋ ವಿವಾದಗಳಿಂದಲೇ ಫೇಮಸ್ ಆದ ಶೋ. ಇಲ್ಲಿ ಆರಂಭವಾದ ವಿವಾದಗಳು ಬಿಗ್ ಹೌಸ್'ನಲ್ಲೇ ಕೊನೆಗಾಣದೆ ಸ್ಪರ್ಧಿಗಳ ನಿಜ ಜೀವನದ ಮೇಲೂ ಪರಿಣಾಮ ಬೀರುತ್ತವೆ. ಸದ್ಯ ಈ ಬಾರಿಯ ಬಿಗ್ ಬಾಸ್ ಪ್ರೇಮಿಗಳಿಗೊಂದು ಸಂತಸದ ಸುದ್ದಿ ಸಿಕ್ಕಿದೆ.

ಬಿಗ್ ಬಾಸ್ ರಿಯಾಲಿಟಿ ಶೋ ವಿವಾದಗಳಿಂದಲೇ ಫೇಮಸ್ ಆದ ಶೋ. ಇಲ್ಲಿ ಆರಂಭವಾದ ವಿವಾದಗಳು ಬಿಗ್ ಹೌಸ್'ನಲ್ಲೇ ಕೊನೆಗಾಣದೆ ಸ್ಪರ್ಧಿಗಳ ನಿಜ ಜೀವನದ ಮೇಲೂ ಪರಿಣಾಮ ಬೀರುತ್ತವೆ. ಸದ್ಯ ಈ ಬಾರಿಯ ಬಿಗ್ ಬಾಸ್ ಪ್ರೇಮಿಗಳಿಗೊಂದು ಸಂತಸದ ಸುದ್ದಿ ಸಿಕ್ಕಿದೆ.

ಸಿನಿಮಾ ಕ್ಷೇತ್ರದಲ್ಲಿ ಭಾರೀ ಸಾಧನೆ ಮಾಡಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತೊಮ್ಮೆ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಜನ್ 11 ರಲ್ಲಿ ಭರ್ಜರಿ ಕಮ್ ಬ್ಯಾಕ್ ಮಾಡಲಿದ್ದಾರೆ. ಅತ್ಯಂತ ವಿವಾದಿತ ಶೋ ಎಂದೇ ಖ್ಯಾತಿ ಗಳಿಸಿರುವ ಹಿಂದಿಯ ಬಿಗ್ ಬಾಸ್'ನ 11 ಆವೃತ್ತಿಯಲ್ಲೂ ಅವರೇ ನಿರೂಪಕರಾಗಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ತಿಳಿದು ಬಂದಿದೆ.ಕಲರ್ಸ್ ಚಾನೆಲ್'ನ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ರಾಜ್ ನಾಯಕ್ ತನ್ನ ಟ್ವಿಟರ್ ಖಾತೆಯಲ್ಲಿ ವಿಡಿಯೋವೊಂದನ್ನು ಸೇರ್ ಮಾಡಿದ್ದು, ಇದರಲ್ಲಿ ಬಿಗ್ ಬಾಸ್'ನ ಮುಂದಿನ ಸೀಜನ್'ಗೆ ಅಡೀಷನ್ ಆರಂಭವಾಗಿರುವ ಮಾಹಿತಿ ಇದೆ. ಈ ವಿಡಿಯೋದಲ್ಲಿ ಮುಂದಿನ ಆವೃತ್ತಿಯಲ್ಲೂ ಸಲ್ಮಾನ್ ಖಾನ್ ನಿರೂಪಣೆ ಮಾಡುತ್ತಾರೆ ಎಂಬುವುದು ಸ್ಪಷ್ಟವಾಗಿ ತಿಳಿದು ಬರುತ್ತದೆ.

ಅಕ್ಟೋಬರ್ 8 ರಿಂದ ಬಿಗ್ ಬಾಸ್ ಸೀಜನ್ 11 ಪ್ರಸಾರವಾಗುತ್ತದೆಡ ಎಂಬ ಮಾತುಗಳು ಕೇಳಿ ಬಂದಿದೆ. ಇನ್ನು ಇದು ಸಲ್ಮಾನ್ ಹೋಸ್ಟ್ ಮಾಡುವ 8 ನೇ ಬಿಗ್ ಬಾಸ್ ಆವೃತ್ತಿಯಾಗಿದೆ. ಹಿಂದಿ ಬಿಗ್ ಬಾಸ್'ನ ಮೊದಲ 9 ಸೀಜನ್'ಗಳಲ್ಲಿ ಕೇವಲ ಸೆಲೆಬ್ರಿಟಿಗಳಷ್ಟೇ ಪಾಲ್ಗೊಂಡಿದ್ದರು. ಆದರೆ ಕಳೆದ ಸೀಜನ್'ನಲ್ಲಿ ಸಾಮಾನ್ಯ ವ್ಯಕ್ತಿಗೂ ಈ ರಿಯಾಲಿಟಿ ಶೋನಲ್ಲಿ ಪಾಲ್ಗೊಳ್ಳುವ ಅವಕಾಶ ನೀಡಲಾಗಿತ್ತು. ಇನ್ನು ವಿಡಿಯೋ ಹಾಗೂ ಪ್ರಚಾರ ಮಾಡುವ ಪರಿ ನೋಡಿದರೆ 11 ನೇ ಸೀಜನ್'ನಲ್ಲೂ ಜನ ಸಾಮಾನ್ಯರಿಗೆ ಭಾಗವಹಿಸುವ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿದು ಬರುತ್ತದೆ.