ಸಿದ್ಧಗಂಗಾ ಮಠದ ಮಕ್ಕಳ ಆಸ್ತಿಯೇ ಭಯ, ಭಕ್ತಿ ಹಾಗೂ ಶ್ರದ್ಧೆ. ಜತೆಗೆ ಅವರಿಗೆ ಅನ್ನ ಹಾಗೂ ಭೂಮಿ ಬೆಲೆಯನ್ನು ಕಲಿಸಿ, ಅತ್ಯುತ್ತಮ ಸಂಸ್ಕಾರ ನೀಡಿದ ಸಿದ್ಧಗಂಗಾ ಶ್ರೀಗಳು 'ನಡೆದಾಡುವ ದೇವರು' ಎಂಬ ಕೀರ್ತಿಗೆ ಪಾತ್ರರಾದರು. ಮಠದ ಮಕ್ಕಳಿಗಿರೋ ಅನ್ನಬ್ರಹ್ಮದ ಮೇಲಿನ ಪ್ರೀತಿ ಇತ್ತೀಚೆಗೆ ವೈರಲ್ ಆದ ವೀಡಿಯೋ ಮೂಲಕ ಜಗಜ್ಜಾಹೀರವಾಗಿತ್ತು. ಆ ಮೂಲಕ ಸಿದ್ಧಗಂಗೆ ಮೇಲಿನ ಗೌರವ ಮತ್ತಷ್ಟು ಹೆಚ್ಚುವಂತಾಯಿತು. ಈ ವಿದ್ಯಾರ್ಥಿಯ ನಡೆಗೆ ಎಲ್ಲೆಡೆ ಪ್ರಶಂಸೆಯಾದ ಬೆನ್ನಲ್ಲೇ, ಗೋಲ್ಡನ್ ಸ್ಟಾರ್ ಗಣೇಶ್ ಸಹ ಶ್ಲಾಘಿಸಿದ್ದಾರೆ.

ಅನ್ನ ಚೆಲ್ಲಬೇಡಿ...ಮಠದ ಆವರಣದಲ್ಲಿ ಆಹಾರದ ಮಹತ್ವ ಸಾರಿದ ಬಾಲಕ

'ಅನ್ನದ ಬೆಲೆ ಸಿದ್ಧಗಂಗಾ ಮಠದ ಮಕ್ಕಳಿಗೆ ಗೊತ್ತು. ಇಂದು ದಾಸೋಹದಲ್ಲಿ ಕಂಡ ದೃಶ್ಯ,' ಎಂದು ಬಾಲಕ ಹಿರಿಯರೊಬ್ಬರಿಗೆ ಅನ್ನದ ಬೆಲೆಯನ್ನು ತಿಳಿಸಿರುವ ವೀಡಿಯೋವನ್ನು ಅಪ್‌ಲೋಡ್ ಮಾಡಿದ್ದಾರೆ.

 

ಇದನ್ನು ನಟ ರವಿಶಂಕರ್ ಗೌಡ ಕೂಡ ಟ್ವೀಟ್ ಮಾಡಿ, 'ಶ್ರೀಗಳ ಮಠದಲ್ಲಿ ಅನ್ನದ ಬೆಲೆಯನ್ನು ಹೇಗೆ ತಿಳಿಸುತ್ತಾರೆ ಮಕ್ಕಳು....ನೀವೇ ನೋಡಿ..." ಎಂದಿದ್ದಾರೆ.