ಪ್ರಥಮ್ ತಮ್ಮ ಅಭಿಮಾನಿಗಳಿಗೆ ಮತ್ತೊಂದು ಬ್ರೇಕಿಂಗ್ ನ್ಯೂಸ್ ನೀಡಲು ಹೊರಟಿದ್ದಾರೆ.

ಸಾಮಾನ್ಯ ಸ್ಪರ್ಧಿಯಾಗಿ ಬಿಗ್'ಬಾಸ್ ಮನೆ ಪ್ರವೇಶಿಸಿ ಫೈನಲ್'ನಲ್ಲಿ ಟ್ರೋಪಿ ಮುಡಿಗೇರಿಸಿಕೊಂಡು ಅಚ್ಚರಿ ಸೃಷ್ಟಿಸಿದ ಪ್ರಥಮ್ ತಮ್ಮ ಅಭಿಮಾನಿಗಳಿಗೆ ಮತ್ತೊಂದು ಬ್ರೇಕಿಂಗ್ ನ್ಯೂಸ್ ನೀಡಲು ಹೊರಟಿದ್ದಾರೆ. ಅದೇನು ಅಂತೀರಾ ಕನ್ನಡದ 4 ಚಿತ್ರಗಳಲ್ಲಿ ಅಭಿನಯಿಸುತ್ತಿದ್ದು, ಅದರಲ್ಲಿ 3 ಚಿತ್ರಗಳಲ್ಲಿ ಅವರೆ ನಾಯಕರಂತೆ. ನಾಗತಿಹಳ್ಳಿ ಚಂದ್ರಶೇಖರ್, ಎಸ್. ನಾರಾಯಣ್ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದು ಚಿತ್ರಗಳು ಕೂಡ ಬುಕ್ ಆಗಿವೆಯಂತೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈಗಾಗಲೆ ಆ್ಯಂಕರ್ ಅಕುಲ್ ಬಾಲಾಜಿ ಅಭಿನಯದ 'ದೇವ್ರವ್ನೆ ಬುಡ್ ಗುರು' ಎಂಬ ಚಿತ್ರವನ್ನು ನಿರ್ದೇಶಿಸಲು ಹೊರಟಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಅಲ್ಲದೆ ಸಿನಿಮಾಗಳಲ್ಲಿ ಬಂದ ಹಣವನ್ನು ಸಮಾಜ ಸೇವೆಗೆ ನೀಡಲು ನಿರ್ಧರಿಸಿದ್ದು, ಅದಕ್ಕಾಗಿಯೇ ಟ್ರಸ್ಟ್ ಕೂಡ ನಿರ್ಮಿಸಲಿದ್ದಾರಂತೆ.

(ಗಾಂಧಿ ನಗರದ ಗಾಳಿಸುದ್ದಿ)