Asianet Suvarna News Asianet Suvarna News

ಫುಟ್ಪಾತ್‌ನಿಂದ ಬಂದ ಹುಡುಗನಿಗೆ ಈ ಗೌರವ ನಿರೀಕ್ಷಿಸಿರಲಿಲ್ಲ: ನಟ ಮಿಥುನ್ ಚಕ್ರವರ್ತಿ ಭಾವುಕ

ಭೋಜ್‌ಪುರಿ ಹಾಗೂ ಬಾಲಿವುಡ್‌ ನಟ ಮಿಥುನ್ ಚಕ್ರವರ್ತಿ ಅವರಿಗೆ ಈ ಬಾರಿಯ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿಗೆ ಭಾಜನರಾಗಿರುವುದಕ್ಕೆ ಅವರು ಅಚ್ಚರಿ ಮತ್ತು ಸಂತಸ ವ್ಯಕ್ತಪಡಿಸಿದ್ದಾರೆ. ಅಕ್ಟೋಬರ್ 8 ರಂದು ನಡೆಯುವ ಸಮಾರಂಭದಲ್ಲಿ ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.

From Footpath to Fame: Mithun Chakraborty's Emotional Reaction to Dadasaheb Phalke Award
Author
First Published Sep 30, 2024, 3:36 PM IST | Last Updated Sep 30, 2024, 3:49 PM IST

ಭೋಜ್‌ಪುರಿ ಹಾಗೂ ಬಾಲಿವುಡ್‌ ಸಿನಿಮಾಗಳ ಹಿರಿಯ ನಟ ಮಿಥುನ್ ಚಕ್ರವರ್ತಿ ಅವರು ಈ ಬಾರಿಯ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ತಾವು ಈ ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ಅಚ್ಚರಿ ಹಾಗೂ ಖುಷಿ ವ್ಯಕ್ತಪಡಿಸಿದ ಅವರು ಈ ಪ್ರಶಸ್ತಿಯನ್ನು ತಮ್ಮ ಕುಟುಂಬ ಹಾಗೂ ಅಭಿಮಾನಿಗಳಿಗೆ ಅರ್ಪಣೆ ಮಾಡಿದ್ದಾರೆ. ಆಕ್ಟೋಬರ್ 8ರಂದು ನಡೆಯುವ 70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟ ಮಿಥುನ್ ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಿ ಪುರಸ್ಕರಿಸಲಾಗುತ್ತದೆ. 

ಮಿಥುನ್ ಚಕ್ರವರ್ತಿಯವರು ಭಾರತೀಯ ಸಿನಿಮಾದಲ್ಲಿ ಗಾಡ್‌ ಫಾದರ್ ಇಲ್ಲದೇ ತಳಮಟ್ಟದಿಂದ ಬೆಳೆದು ಬಂದಂತಹ ಪ್ರತಿಭೆ. ಅವರ ಐತಿಹಾಸಿಕ ಸಿನಿಮಾ ಡಿಸ್ಕೋ ಡಾನ್ಸರ್‌ನಲ್ಲಿನ ಅವರ ನಟನೆಯನ್ನು ಸಿನಿಮಾ ಅಭಿಮಾನಿಗಳು ಎಂದಿಗೂ ಮರೆಯಲಾರರು. ಇಂತಹ ನಟನಿಗೆ ಈಗ ಭಾರತೀಯ ಸಿನಿಮಾದ ಅತ್ಯುನ್ನತವೆನಿಸಿದ ಗೌರವವಾದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿರುವುದು ಸಿನಿಮಾ ಪ್ರಿಯರು ಗಾಗೂ ಚಕ್ರವರ್ತಿಯವರ ಅಭಿಮಾನಿಗಳಿಗೆ ಸಂತಸ ತಂದಿದೆ. 

116 ಶ್ವಾನ ಸಾಕಿ,45 ಕೋಟಿ ಆಸ್ತಿ ಮೀಸಲಿಟ್ಟ ಬಾಲಿವುಡ್ ಡ್ಯಾನ್ಸಿಂಗ್ ಸ್ಟಾರ್ ಮಿಥುನ್ ಚಕ್ರವರ್ತಿ!

ಇನ್ನು ತಮಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಲಭ್ಯವಾದ ಬಗ್ಗೆ  ಪ್ರತಿಕ್ರಿಯಿಸಿದ ಮಿಥುನ್ ಚಕ್ರವರ್ತಿ ಈ ಬಗ್ಗೆ ನಂಬಲು ಸಾಧ್ಯವಾಗುತ್ತಿಲ್ಲ ಎಂದಿದ್ದಲ್ಲದೇ ತುಂಬು ಹೃದಯದ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಫೂಟ್‌ಪಾತ್‌ನಿಂದ ಬಂದ ಹುಡುಗನೋರ್ವ ಈ ರೀತಿಯ ದೊಡ್ಡ ಮಟ್ಟದ ಗೌರವ ಸಿಗುತ್ತದೆ ಎಂದು ನಾನು ಕಲ್ಪನೆಯೂ ಮಾಡಿರಲಿಲ್ಲ ಎಂದು ಮಿಥುನ್‌ ಚಕ್ರವರ್ತಿ ಹೇಳಿಕೊಂಡಿದ್ದಾರೆ. 

1960ರ ಜೂನ್ 16ರಂದು ಕೋಲ್ಕತ್ತಾದಲ್ಲಿ  ಜನಿಸಿದ ಮಿಥುನ್ ಚಕ್ರವರ್ತಿಯವರು ತುಂಬಾ ತಳಮಟ್ಟದಿಂದ ಬೆಳೆದು ಬಂದತಹ ಪ್ರತಿಭೆ ಅವರ ಜೀವನ ಹಲವರಿಗೆ ಸ್ಪೂರ್ತಿಯಾಗಿದೆ. ಈ ಪ್ರಶಸ್ತಿ ಬಂದಿರುವ ವಿಚಾರ ಕೇಳಿ ನಾನು ಸಂಪೂರ್ಣ ಮೂಕವಿಸ್ಮಿತನಾಗಿದ್ದೇನೆ. ನನ್ನನ್ನು ನಂಬಿ, ನನಗೆ ಖುಷಿಯಿಂದ ನಗಲೂ ಆಗುತ್ತಿಲ್ಲ, ಅಳಲು ಆಗುತ್ತಿಲ್ಲ, ಏಕೆಂದರೆ ಅಕ್ಷರಶಃ ಏನೂ ಅಲ್ಲದ, ಏನೂ ಇಲ್ಲದ ವ್ಯಕ್ತಿಯೊಬ್ಬ ಈ ಸಾಧನೆ ಮಾಡಿದ. ಇದನ್ನೇ ನಾನು ನನ್ನ ಆರ್ಥಿಕವಾಗಿ ಸಧೃಡರಲ್ಲಾದ ಅಭಿಮಾನಿಗಳಿಗೆ ಯಾವಾಗಲೂ ಹೇಳುತ್ತಿರುತ್ತೇನೆ. ನಾನು ಇದನ್ನು ಮಾಡಲು ಸಾಧ್ಯವಾಯ್ತು ಎಂದರೆ ನೀವು ಇದನ್ನೂ ಮಾಡುವಿರಿ ಎಂದು ಮಿಥುನ್ ಚಕ್ರವರ್ತಿ ಭಾವುಕರಾಗಿದ್ದಾರೆ. 

ಆ ನಟಿ ಕೈಕೊಟ್ಟಾಗ ಹೃದಯವೇ ಕಿತ್ತುಬಂತು, ಆಮೇಲೆ ಅದೃಷ್ಟದ ಬಾಗಿಲೇ ತೆರೆಯಿತು: ನಟ ಮಿಥುನ್​ ಚಕ್ರವರ್ತಿ

ಮಿಥುನ್ ಚಕ್ರವರ್ತಿಯವರನ್ನು ಅವರ ಅಭಿಮಾನಿಗಳು ಮಿಥುನ್ ದಾ ಎಂದು ಪ್ರೀತಿಯಿಂದ ಕರೆಯುತ್ತಾರೆ. ಮಿಥುನ್ ಅವರು 1976ರಲ್ಲಿ ತೆರೆಕಂಡ ತಮ್ಮ ಮೊದಲ ಸಿನಿಮಾ ಮ್ರಿಗಯಾದಲ್ಲಿನ ನಟನೆಗಾಗಿ ಅವರಿಗೆ ಉತ್ತಮ ನಟ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಲಭ್ಯವಾಯ್ತು. ಇದರ ಜೊತೆಗೆ 1992ರಲ್ಲಿ ತೆರೆಕಂಡ ತಹ್ದರ್‌ ಕಥಾ ಹಾಗೂ 1998ರಲ್ಲಿ ತೆರೆಕಂಡ ಸ್ವಾಮಿ ವಿವೇಕಾನಂದ ಪ್ರಶಸ್ತಗೂ ಅವರಿಗೆ ಉತ್ತಮ ನಟ ರಾಷ್ಟ್ರೀಯ ಪ್ರಶಸ್ತಿ ಲಭ್ಯವಾಗಿದೆ. 

 

Latest Videos
Follow Us:
Download App:
  • android
  • ios