Asianet Suvarna News Asianet Suvarna News

Yash & Hamilton: ರೇಸಿಂಗ್‌ ಸ್ಟಾರ್‌ ಮೀಟ್ಸ್‌ ರಾಕಿಂಗ್‌ ಸ್ಟಾರ್‌!

ಅಮೆರಿಕದಲ್ಲಿ ರಾಕಿಂಗ್‌ ಸ್ಟಾರ್‌ ಯಶ್‌ ಹಾಗೂ ರೇಸಿಂಗ್‌ ಸ್ಟಾರ್‌ ಲೂಯಿಸ್‌ ಹ್ಯಾಮಿಲ್ಟನ್‌ ಭೇಟಿ ನಡೆದಿದೆ. ಇತ್ತೀಚೆಗೆ ಅಮೆರಿಕದ ಪ್ರವಾಸ ಮುಗಿಸಿ ತವರಿಗೆ ವಾಪಸಾಗಿರುವ ಯಶ್‌ ಹಾಗೂ ಲೂಯಿಸ್‌ ಹ್ಯಾಮಿಲ್ಟನ್‌ ಭೇಟಿಯಾಗಿರುವ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.
 

formula one world Champion Lewis hamilton Meets Rocking Star Yash in USA san
Author
First Published Oct 7, 2022, 4:53 PM IST

ಬೆಂಗಳೂರು (ಅ.7): ಇತ್ತೀಚೆಗೆ ಅಮೆರಿಕ ಪ್ರವಾಸದಲ್ಲಿದ್ದ ಸ್ಯಾಂಡಲ್‌ವುಡ್‌ ಸ್ಟಾರ್‌ ನಟ ರಾಕಿಂಗ್‌ ಸ್ಟಾರ್‌ ಯಶ್‌, ದಾಖಲೆಯ ಏಳು ಬಾರಿಯ ಫಾರ್ಮುಲಾ ಒನ್‌ ವಿಶ್ವ ಚಾಂಪಿಯನ್‌ ಬ್ರಿಟನ್‌ನ ಲೂಯಿಸ್‌ ಹ್ಯಾಮಿಲ್ಟನ್‌ ಅವರನ್ನು ಭೇಟಿ ಮಾಡಿದ್ದಾರೆ. ಮರ್ಸಿಡೀಸ್‌ ತಂಡದ ಎಫ್‌1 ಚಾಲಕರಾಗಿರುವ ಹ್ಯಾಮಿಲ್ಟನ್‌, ಈ ವಾರ ನಡೆಯಲಿರುವ ಜಪಾನ್‌ ಗ್ರ್ಯಾನ್‌ ಪ್ರೀಗೂ ಮುನ್ನ ಅಮೆರಿಕಕ್ಕೆ ತೆರಳಿದ್ದರು. ಈ ವೇಳೆ ಹ್ಯಾಮಿಲ್ಟನ್‌ ಹಾಗೂ ಯಶ್‌ ಅವರ ಭೇಟಿ ನಡೆದಿದೆ. ಈ ಫೋಟೋ ಈಗ ಸೋಷಿಯಲ್‌ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್‌ ಆಗಿದೆ. ಕೆಜಿಎಫ್‌ ಹಾಗೂ ಕೆಜಿಎಫ್‌2 ಚಿತ್ರದ ಬಳಿಕ ಯಶ್‌ ಅವರ ಪ್ರಖ್ಯಾತಿ ಇನ್ನೊಂದು ಹಂತಕ್ಕೇರಿದೆ. ಪ್ಯಾನ್‌ ಇಂಡಿಯಾ ಮಟ್ಟದ ಯಶಸ್ಸು ಯಶ್‌ ಅವರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲೂ ಗುರುತಿಸುವಂತೆ ಮಾಡಿದೆ.  ಕನ್ನಡ ಇಂಡಸ್ಟ್ರಿಯ ಗೌರವವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಯಶ್ ಪಣ ತೊಟ್ಟಿರುವಂತೆ ಕಾಣುತ್ತಿದೆ. ಇತ್ತೀಚೆಗೆ ಲಾಸ್ ಏಂಜಲೀಸ್‌ನಲ್ಲಿ ಪ್ರಸಿದ್ಧ ಅಮೇರಿಕನ್ ನಿರ್ದೇಶಕ, ಸಮರ ಕಲಾವಿದ ಮತ್ತು ಸ್ಟಂಟ್‌ಮ್ಯಾನ್ ಜೆಜೆ ಪೆರ್ರಿ ಅವರೊಂದಿಗೆ ತರಬೇತಿ ಪಡೆಯುತ್ತಿರುವುದನ್ನು ನೋಡಿದಾಗ ಇಂಥ ಭರವಸೆಗಳು ಎದ್ದು ಕಂಡಿವೆ.

ಕಳೆದ ಗುರುವಾರ, ಅವರು ಲಾಸ್‌ ಏಂಜಲಿಸ್‌ನಲ್ಲಿ ಎಫ್‌ ರೇಸಿಂಗ್ ದಂತಕಥೆ ಲೂಯಿಸ್‌ ಹ್ಯಾಮಿಲ್ಟನ್ ಅವರೊಂದಿಗೆ ಕಾಣಿಸಿಕೊಂಡರು. ಇದರ ಬೆನ್ನಲ್ಲಿಯೇ ಯಶ್‌ ಅವರ ಮುಂದಿನ ಚಿತ್ರದ ಭಾಗವಾಗಿ ಲೂಯಿಸ್‌ ಹ್ಯಾಮಿಲ್ಟನ್‌ ಅವರನ್ನು ಭೇಟಿಯಾಗಿರಬಹುದೇ ಎನ್ನುವ ಕುತೂಹಲಗಳು ಹುಟ್ಟಿಕೊಂಡಿವೆ. ಹಾಲಿವುಡ್ ನಿರ್ದೇಶಕ ಮತ್ತು ಈಗ ಲೂಯಿಸ್ ಹ್ಯಾಮಿಲ್ಟನ್ ಅವರೊಂದಿಗಿನ ಯಶ್ ಅವರ ಉಪಸ್ಥಿತಿಯು ಖಂಡಿತವಾಗಿಯೂ ಅವರು ಕನ್ನಡ ಉದ್ಯಮವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸಲು ಪ್ರಯತ್ನ ಮಡುತ್ತಿದ್ದಾರೆ. ಅದರ ಭಾಗವಾಗಿಯೇ ಈ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗಿದೆ.

ಸದ್ಯಕ್ಕಿಲ್ಲ ರಾಕಿಭಾಯ್ ಯಶ್-ಐ ಡೈರೆಕ್ಟರ್ ಶಂಕರ್ ಕಾಂಬಿನೇಷನ್ ಸಿನಿಮಾ!

 

ಯಶ್ ಅವರ ಮುಂದಿನ ಪ್ರಾಜೆಕ್ಟ್‌ನ ತಾತ್ಕಾಲಿಕವಾಗಿ ಯಶ್ 19 ಎಂಬ ಶೀರ್ಷಿಕೆಯಲ್ಲಿ ಕೆಲಸಗಳು ನಡೆಯುತ್ತಿವೆ. ಇನ್ನು ಲೂಯಿಸ್‌ ಹ್ಯಾಮಿಲ್ಟನ್‌ ಹಾಗೂ ಬೆಂಗಳೂರು ನಡುವೆಯೂ ಸಂಬಂಧಗಳಿವೆ.

ಯಾರು ಕಣ್ಣು ಹಾಕ್ಬೇಡಿ ಕಣ್ರೋ: Radhika Yash ಫೋಟೋಗಳಿಗೆ ನೆಟ್ಟಿಗರ ಮೆಚ್ಚುಗೆ

2011ರ ಸೆಪ್ಟೆಂಬರ್‌ ಸಮಯದಲ್ಲಿ ಬೆಂಗಳೂರಿಗೆ ಬಂದಿದ್ದ ಹ್ಯಾಮಿಲ್ಟನ್‌ ಅಂದು ನೈಸ್‌ ರೋಡ್‌ನಲ್ಲಿ ತಮ್ಮ ಚಾಲನಾ ಸಾಮರ್ಥ್ಯವನ್ನು ಜನರಿಗೆ ತೋರಿಸಿದ್ದರು. ಈ ವೇಳೆ ಮಾತನಾಡಿದ್ದ ಅವರು, ಎಫ್‌1 ಟ್ರ್ಯಾಕ್‌ನಲ್ಲಿ ನಾನು ಹೇಗೆ ಕಾರ್‌ಗಳನ್ನು ಓಡಿಸಿದರೂ, ಬೆಂಗಳೂರು ರಸ್ತೆಗಳಲ್ಲಿ ಕಾರ್‌ ಓಡಿಸೋದು ಕಷ್ಟ ಎಂದಿದ್ದರು.
 

Follow Us:
Download App:
  • android
  • ios