ನುಡಿದಂತೆ ನಡೆದದ್ದು ಸಿದ್ದರಾಮಯ್ಯ ಸರ್ಕಾರ: ಹುನಗುಂದ ಶಾಸಕ ಕಾಶಪ್ಪನವರ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ನೀಡಿದ್ದ ಐದು ಗ್ಯಾರಂಟಿಗಳನ್ನು ಈಡೇರಿಸಿ ಕೊಟ್ಟ ಮಾತಿನಂತೆ ನುಡಿದಂತೆ ನಡೆದ ಸರ್ಕಾರ ಅದು ನಮ್ಮ ಸಿದ್ದರಾಮಯ್ಯನವರ ಕಾಂಗ್ರೆಸ್ ಸರಕಾರ: ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ
ಇಳಕಲ್ಲ(ಮೇ.02): ಕಳೆದ ವಿಧಾನಸಭಾ ಚುನಾವಣೆಯಲ್ಲಿ ನೀಡಿದ್ದ ಐದು ಗ್ಯಾರಂಟಿಗಳನ್ನು ಈಡೇರಿಸಿ ಕೊಟ್ಟ ಮಾತಿನಂತೆ ನುಡಿದಂತೆ ನಡೆದ ಸರ್ಕಾರ ಅದು ನಮ್ಮ ಸಿದ್ದರಾಮಯ್ಯನವರ ಕಾಂಗ್ರೆಸ್ ಸರಕಾರ ಎಂದು ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ಇಳಕಲ್ಲ ತಾಲೂಕಿನ ಗುಡೂರ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿಯ ಮುರಡಿ, ಚಿಕನಾಳ, ವಡಗೇರಿ, ಗುಡೂರ ಸೂಳೇಭಾವಿ ಕೆಲೂರ ಗ್ರಾಮಗಳಲ್ಲಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಹಮ್ಮಿಕೊಳ್ಳಲಾದ ಲೋಕಸಭಾ ಚುನಾವಣೆ ಪ್ರಚಾರ ಸಭೆಯಲ್ಲಿ ಲೋಕಸಭೆ ಚುನಾವಣಾ ಅಭ್ಯರ್ಥಿ ಸಂಯುಕ್ತ ಪಾಟೀಲ ಪರ ಮತ ಯಾಚನೆ ಮಾಡುತ್ತ ಅವರು ಮಾತನಾಡಿದರು.
BAGALKOTE LOK SABHA CONSTITUENCY: 4 ಬಾರಿ ವಿನ್ನರ್ ಗದ್ದಿಗೌಡರಿಗೆ ಹೊಸ ಮುಖ ಸಂಯುಕ್ತಾ ಸವಾಲ್!
ಈ ಸಂದರ್ಭದಲ್ಲಿ ಇಳಕಲ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ರಜಾಕ್ ತಟಗಾರ, ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ವಿಜಯಮಹಾಂತೇಶ ಗದ್ದನಕೇರಿ, ಮುಖಂಡರಾದ ಖಾಜೇಸಾಬ ಬಾಗವಾನ, ಇಳಕಲ್ಲ ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಸರಸ್ವತಿ ಈಟಿ, ತಾಲೂಕ ಪಂಚಾಯತ್ ಮಾಜಿ ಅಧ್ಯಕ್ಷೆ ಶಾರದಾ ಗೋಡಿ, ಚಿಕನಾಳ ಗ್ರಾಮ ಪಂಚಾಯತ್ ಅಧ್ಯಕ್ಷ ರತ್ನವ್ವ ತಿಪ್ಪನವರ, ಮುಖಂಡರಾದ ಅಪ್ಪಾಸಾಹೇಬ ನಾಡಗೌಡ್ರ ಸೇರಿದಂತೆ ಬೂತ್ ಮಟ್ಟದ ಅಧ್ಯಕ್ಷರು ಮುಖಂಡರು, ಕರ‍್ಯಕರ್ತರು ಉಪಸ್ಥಿತರಿದ್ದರು.