ರಾಮಾಯಣದ ರಾವಣ ರಾಕಿಂಗ್ ಸ್ಟಾರ್ ಯಶ್ ಅಲ್ಲ, ಶ್ರೀರಾಮ ರಣಬೀರ್ ಕಪೂರ್ ಅಲ್ಲ. ಈ ನಟನ ಸ್ಟೈಲ್, ಸ್ವಾಗ್, ನಟನೆಗೆ ಥೈಲ್ಯಾಂಡ್ ಜನ ಫಿದಾ ಆಗಿದ್ದಾರೆ. ರಾಮಾಯಣ ಸಿನಿಮಾದಲ್ಲಿ ಈ ನಟ ಪಾತ್ರ ಹೆಚ್ಚು ಸಮಯವಿಲ್ಲ, ಆದರೂ ಫಿದಾ ಆಗಿದ್ದಾರೆ.
ನವದೆಹಲಿ (ನ.14) ರಾಮಾಯಣ ಸಿನಿಮಾ ನೋಡಿದ ಪ್ರೇಕ್ಷಕರು ನಟನೆ, ಗ್ರಾಫಿಕ್ಸ್, ಪ್ರಸೆಂಟೇಶನ್ ಎಲ್ಲವೂ ಉತ್ತಮವಾಗಿದೆ ಅನ್ನೋ ಅಭಿಪ್ರಾಯ ವ್ಯಕ್ತವಾಗಿದೆ. ನಟ ನಟಿಯರ ಪೈಕಿ ರಾಮಾಯಣ ಪಾರ್ಟ್ 1ರಲ್ಲಿ ರಾವಣನಾಗಿ ಯಶ್ ಅಬ್ಬರವೇ ಹೆಚ್ಚಾಗಿದೆ. ಯಶ್ ನಟನೆಯಲ್ಲಿ ರಣಬೀರ್ ಕಪೂರ್ ಮೀರಿಸಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ಆದರೆ ಥೈಲ್ಯಾಂಡ್ ಜನರ ಹುಚ್ಚು ಹಿಡಿಸಿದ್ದ ಯಶ್ ಅಲ್ಲ, ರಣಬೀರ್ ಕಪೂರ್ ಅಲ್ಲ. ಆತ ಕುನಾಲ್ ಕಪೂರ್. ದೇವೇಂದ್ರನಾಗಿ ಅವತರಿಸಿರುವ ಕುನಾಲ್ ಕಪೂರ್ ಕೆಲವೆ ಕಲವೇ ಸೀನ್ನಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ. ಆದರೆ ಥೈಲ್ಯಾಂಡ್ ಜನ ಕುನಾಲ್ ಕಪೂರ್ ಸ್ಟೈಲ್, ನಟನೆ, ಸ್ವಾಗ್ಗೆ ಮನಸೋತಿದ್ದಾರೆ.
ಥೈಲ್ಯಾಂಡ್ ಅಭಿಮಾನಿಗಳ ಮನವಿಯೇನು
ಕುನಾಲ್ ಕಪೂರ್ ಅದ್ಭುತ ಸ್ಕ್ರೀನ್ ಪ್ರೆಸನ್ಸ್ ಹಾಗೂ ಆಕರ್ಷಕ ಲುಕ್ಗೆ ಥೈಲ್ಯಾಂಡ್ ಪ್ರೇಕ್ಷಕರು ಫಿದಾ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕುನಾಲ್ ಕಪೂರ್ಗೆ ಮೆಚ್ಚುಗೆಗಳ ಸುರಿಮಳೆ ವ್ಯಕ್ತವಾಗಿದೆ. ಥೈಲ್ಯಾಂಡ್ ಸಿನಿಮಾ ಪ್ರೇಕ್ಷಕರು ಕುನಾಲ್ ಕಪೂರ್ಗೆ ವಿಶೇಷ ಮನವಿ ಸಲ್ಲಿಸಿದ್ದಾರೆ. ಇನ್ಸ್ಟಾ ಮೂಲಕ ಅಭಿಮಾನಿಗಳು ಒಂದು ಬಾರಿ ಥೈಲ್ಯಾಂಡ್ಗೆ ಭೇಟಿ ನೀಡಬೇಕು, ನಿಮ್ಮನ್ನು ಭೇಟಿಯಾಗಬೇಕು ಎಂದು ಹಲವು ಅಭಿಮಾನಿಗಳು ಮನವಿ ಮಾಡಿದ್ದಾರೆ.
ಕುನಾಲ್ ಕಪೂರ್ ದೇವೇಂದ್ರ ಪಾತ್ರಕ್ಕೆ ಮೆಚ್ಚುಗೆ ಸುರಿಮಳೆ ವ್ಯಕ್ತವಾಗಿದೆ. ಕುನಾಲ್ ಕಪೂರ್ ಅವರನ್ನು ಥೈಲ್ಯಾಂಡ್ ಜನ ದೇವೇಂದ್ರ ಎಂದೇ ಕರೆಯುತ್ತಿದ್ದಾರೆ. ದಯವಿಟ್ಟು ಥೈಲ್ಯಾಂಡ್ಗೆ ಬನ್ನಿ ಎಂದು ಕಮೆಂಟ್ಸ್ ಮಾಡಿದ್ದಾರೆ. ಕುನಾಲ್ ಕಪೂರ್ ಮೇಲೆ ಕ್ರಶ್ ಆಗಿದೆ. ಅವರ ಲುಕ್, ನೋಟ, ಫಿಟ್ನೆಸ್, ನಟನೆ ಎಲ್ಲವೂ ಸೂಪರ್. ಹಿಂದೊಮ್ಮೆ ನಮ್ಮ ಕಾಲೇಜಿನ ಟ್ಯಾಲೆಂಟ್ ಶೋಗೆ ಜಡ್ಜ್ ಆಗಿ ಬಂದಿದ್ದಾಗ ಅವರು ನನ್ನತ್ತ ಕೈ ಬೀಸಿದ್ದರು ಎಂದು ಥೈಲ್ಯಾಂಡ್ ಅಭಿಮಾನಿ ಹಳೆಯ ನೆನಪನ್ನು ಹಂಚಿಕೊಂಡಿದ್ದಾರೆ.
ದೇವೇಂದ್ರನ ಪಾತ್ರ ಆಧಿರಿಸಿ ಸಿನಿಮಾ
ಕುನಾಲ್ ಕಪೂರ್ ಅವರು ದೇವೇಂದ್ರನ ಪಾತ್ರದ ಮೂಲಕ ಥೈಲ್ಯಾಂಡ್ ಪ್ರೇಕ್ಷಕರ ಮನಗೆದ್ದಿರುವ ರೀತಿ ನೋಡಿದರೆ, ಇಂದ್ರನ ಪಾತ್ರವನ್ನೇ ಆಧರಿಸಿ ಅವರ ಮೇಲೆ ಒಂದು ಸೋಲೋ ಸಿನಿಮಾ ಮಾಡಿದರೆ ಅದು ಖಂಡಿತವಾಗಿಯೂ ಬ್ಲಾಕ್ಬಸ್ಟರ್ (Blockbuster) ಆಗುವುದರಲ್ಲಿ ಸಂಶಯವಿಲ್ಲ ಎಂದಿದ್ದಾರೆ. ನಿಜಕ್ಕೂ ತುಂಬಾ ಸುಂದರವಾಗಿದ್ದಾರೆ. ಸ್ವರ್ಗಲೋಕದ ದೇವ ನಿಜವಾಗಿ ಭೂಮಿಗೆ ಇಳಿದು ಬಂದಂತಿದೆ ಎಂದು ಹೊಗಳಿದ್ದರೆ . ರಣಬೀರ್ ಅಲ್ಲ, ಯಶ್ ಕೂಡ ಅಲ್ಲ; ಥೈಲ್ಯಾಂಡ್ ಮಂದಿ ರಾಮಾಯಣದ ಬೇರೊಬ್ಬ ನಟನ ಹಿಂದೆ ಹುಚ್ಚರಾಗಿದ್ದಾರೆ. ಇಂದ್ರನ ಪಾತ್ರದಲ್ಲಿ ಕುನಾಲ್ ಕಪೂರ್ ಮಿಂಚಿದ್ದು, ಅಭಿಮಾನಿಗಳು ಅವರಿಗಾಗಿ ಪ್ರೇಮಕವಿತೆಗಳನ್ನೇ ಬರೆಯುತ್ತಿದ್ದಾರೆ" ಎಂದು ಕಾಮೆಂಟ್ ಮಾಡಿದ್ದಾರೆ.
ಕುನಾಲ್ ಕಪೂರ್ ಹೇಳಿದ್ದೇನು?
ರಾಮಾಯಣ ಪಾತ್ರದ ಕುರಿತು ಕುನಾಲ್ ಕಪೂರ್ ಇತ್ತೀಚೆಗೆ ಮಾಧ್ಯಮಕ್ಕೆ ನೀಡಿದ ಸಂದರ್ಶನಕ್ಕೆ ಹೇಳಿಕೊಂಡಿದ್ದಾರೆ. ದೇವೇಂದ್ರನ ಪಾತ್ರದ ಮೇಲೆ ಪ್ರತ್ಯೇಕ ಸಿನಿಮಾ ಬರುವುದನ್ನು ತಾವು ಸ್ವಾಗತಿಸುವುದಾಗಿ ತಿಳಿಸಿದ್ದಾರೆ. "ನನ್ನ ಜೊತೆಗಿರಲಿ ಅಥವಾ ನಾನಿಲ್ಲದೆಯೇ ಇರಲಿ, ದೇವೇಂದ್ರನ ಪಾತ್ರಕ್ಕೆ ತನ್ನದೇ ಆದ ಪ್ರತ್ಯೇಕ ಸಿನಿಮಾ ಬರಬೇಕು ಎಂದು ನಾನು ಭಾವಿಸುತ್ತೇನೆ ಎಂದಿದ್ದರು. ಏಕೆಂದರೆ, ಅದು ತನ್ನದೇ ಆದ ದೊಡ್ಡ ಯೂನಿವರ್ಸ್ (Universe) ಸೃಷ್ಟಿಸುವಷ್ಟು ಶಕ್ತಿಶಾಲಿಯಾದ ಪಾತ್ರ ಎಂದು ಕುನಾಲ್ ಹೇಳಿದ್ದಾರೆ.
ಆಧುನಿಕ ಕಾಲದ ನಿರೂಪಣೆಗಳಲ್ಲಿ ದೇವೇಂದ್ರನ ಪಾತ್ರವನ್ನು ಸರಿಯಾಗಿ ತೋರಿಸಲಾಗಿಲ್ಲ ಎಂದಿರುವ ಕುನಾಲ್, "ಇತ್ತೀಚಿನ ವರ್ಷಗಳಲ್ಲಿ ಇಂದ್ರನ ಪಾತ್ರವನ್ನು ತಪ್ಪಾಗಿ ಅರ್ಥೈಸಲಾಗಿದೆ. ಆದರೆ ಈ ಚಿತ್ರದಲ್ಲಿ ಅವರನ್ನು ನಿಜವಾದ ಯೋಧ ಮತ್ತು ರಾಜನ ರೀತಿಯಲ್ಲಿಯೇ ತೋರಿಸಲಾಗಿದೆ. ಅದೇ ಕಾರಣಕ್ಕೆ ಈ ಪಾತ್ರ ಜನರಿಗೆ ಇಷ್ಟವಾಗಿದೆ" ಎಂದಿದ್ದಾರೆ.
ಇಂದ್ರನ ಪಾತ್ರದ ವಿಶೇಷತೆಯ ಬಗ್ಗೆ ವಿವರಿಸಿದ ಅವರು, "ಹೊರಗಿನಿಂದ ಅತ್ಯಂತ ಶಕ್ತಿಶಾಲಿಯಾಗಿ ಕಂಡರೂ, ಒಳಗಿನಿಂದ ಸೂಕ್ಷ್ಮತೆ ಮತ್ತು ಅಭದ್ರತೆಯನ್ನು ಹೊಂದಿರುವ ಪಾತ್ರಗಳನ್ನು ಮಾಡಲು ನನಗೆ ಇಷ್ಟ. ಇಂದ್ರ ದೇವಲೋಕದ ರಾಜ, ಸೇನೆ, ಗುಡುಗು-ಮಿಂಚುಗಳನ್ನು ನಿಯಂತ್ರಿಸುವ ಶಕ್ತಿ ಹೊಂದಿದ್ದರೂ ತನ್ನದೇ ಆದ ಅಭದ್ರತೆಗಳನ್ನು ಹೊಂದಿರುತ್ತಾನೆ. ಇವೆರಡರ ಸಮ್ಮಿಲನವೇ ನನ್ನನ್ನು ಈ ಪಾತ್ರದತ್ತ ಆಕರ್ಷಿಸಿತು" ಎಂದು ಹೇಳಿದ್ದಾರೆ.














