2015ರಲ್ಲಿ ತೆರೆಕಂಡು ಬಾಕ್ಸಾಫೀಸ್'ನಲ್ಲಿ ಭರ್ಜರಿ ಯಶಸ್ಸು ಕಂಡಿದ್ದ ಫಸ್ಟ್ ರ್ಯಾಂಕ್ ರಾಜು(1st Rank Raju) ಚಿತ್ರದ ಪ್ರಧಾನ ಭೂಮಿಕೆಯಲ್ಲಿ ಗುರುನಂದನ್ ಮತ್ತು ಅಪೂರ್ವ ಗೌಡ ನಟಿಸಿದ್ದರು. ಸಾಧು ಕೋಕಿಲಾ, ಅನಂತನಾಗ್, ಅಚ್ಯುತ ರಾವ್, ತಾನಿಷ್ಕಾ ಕಪೂರ್ ಮೊದಲಾದವರೂ ನಟಿಸಿದ್ದ ಈ ಚಿತ್ರ ಹೊಸತನದ ಸಿನಿಮಾವೆಂದು ಖ್ಯಾತಿಯನ್ನೂ ಗಳಿಸಿದೆ.

ಬೆಂಗಳೂರು: ಕಳೆದ ವರ್ಷ ತೆರೆಕಂಡು ಯಶಸ್ವಿಯಾದ ‘ಫಸ್ಟ್‌ ರ್ಯಾಂಕ್ ರಾಜು' ಚಿತ್ರ ತೆಲುಗಿಗೆ ರಿಮೇಕ್‌ ಆಗುವುದು ಅಧಿಕೃತವಾಗಿದೆ. ಕನ್ನಡದ ತಂಡವೇ ರೀಮೇಕ್‌ ಮಾಡುತ್ತಿದೆ. ನಿರ್ಮಾಪಕ, ನಿರ್ದೇಶಕ, ಛಾಯಾಗ್ರಾಹಕರು ಮೂಲ ಚಿತ್ರದವರೇ. ಕಲಾವಿದರು ಮಾತ್ರ ಹೊಸಬರು.

ನಿರ್ದೇಶಕ ನರೇಶ್‌ ಕುಮಾರ್‌ ಈಗಾಗಲೇ ಕೆ ಎ ಸುರೇಶ್‌ ನಿರ್ಮಾಣದಲ್ಲಿ ‘ರಾಜು ಕನ್ನಡ ಮೀಡಿಯಂ' ಚಿತ್ರ ನಿರ್ದೇಶಿಸುತ್ತಿದ್ದಾರೆ. ಅದರ ಚಿತ್ರೀಕರಣ ಮುಗಿಸಿದ ಕೂಡಲೇ ‘ಫಸ್ಟ್‌ ರ್ಯಾಂಕ್ ರಾಜು' ತೆಲುಗು ಚಿತ್ರ ಶುರುವನ್ನು ಕೈಗೆತ್ತಿಕೊಳ್ಳಲಿದ್ದಾರೆ. ಈಗಾಗಲೇ ತೆಲುಗಿನ ನಾಯಕ, ನಾಯಕಿ ಸೇರಿದಂತೆ ಕಲಾವಿದರ ಆಯ್ಕೆ ನಡೆಯುತ್ತಿದೆ.

2015ರಲ್ಲಿ ತೆರೆಕಂಡು ಬಾಕ್ಸಾಫೀಸ್'ನಲ್ಲಿ ಭರ್ಜರಿ ಯಶಸ್ಸು ಕಂಡಿದ್ದ ಫಸ್ಟ್ ರ್ಯಾಂಕ್ ರಾಜು(1st Rank Raju) ಚಿತ್ರದ ಪ್ರಧಾನ ಭೂಮಿಕೆಯಲ್ಲಿ ಗುರುನಂದನ್ ಮತ್ತು ಅಪೂರ್ವ ಗೌಡ ನಟಿಸಿದ್ದರು. ಸಾಧು ಕೋಕಿಲಾ, ಅನಂತನಾಗ್, ಅಚ್ಯುತ ರಾವ್, ತಾನಿಷ್ಕಾ ಕಪೂರ್ ಮೊದಲಾದವರೂ ನಟಿಸಿದ್ದ ಈ ಚಿತ್ರ ಹೊಸತನದ ಸಿನಿಮಾವೆಂದು ಖ್ಯಾತಿಯನ್ನೂ ಗಳಿಸಿದೆ.

ಕನ್ನಡಪ್ರಭ ಸಿನಿವಾರ್ತೆ
epaper.kannadaprabha.in