ಕನ್ನಡದ ಲೂಸಿಯಾ ಚಿತ್ರ ಎಲ್ಲರ ಮನಸ್ಸು ಕದ್ದಿದೆ. ಚಿತ್ರರಂಗದಲ್ಲಿ ಹೊಸ ಅಲೆಯನ್ನೂ ಎಬ್ಬಿಸಿದೆ. ಈಗ ಅದೇ ಚಿತ್ರದ ನಾಯಕಿ ಶೃತಿ ಹರಿಹನ್ ಮತ್ತು ನಾಯಕ ನೀನಾಸಂ ಸತೀಶ್ ಮತ್ತೆ ಜೊತೆಯಾಗಿದ್ದಾರೆ. ಆ ಚಿತ್ರದ ಹೆಸರೇ ಬ್ಯೂಟಿಫುಲ್ ಮನಸ್ಸುಗಳು. ಒಲವೇ ಮಂದಾರ ಚಿತ್ರ ಖ್ಯಾತಿಯ ಜಯತೀರ್ಥ ಡೈರೆಕ್ಟ್ ಮಾಡಿದ್ದಾರೆ. ಬಿ.ಜೆ.ಭರತ್ ಸಂಗೀತ ಕೊಟ್ಟಿದ್ದಾರೆ. ಸದ್ಯ ಚಿತ್ರದ ಮೊದಲ ಪ್ರಮೋ ಹೊರಬಿದ್ದಿದ್ದು, ಇಡೀ ಚಿತ್ರ ಸತ್ಯ ಘಟನೆಗಳನ್ನೇ ಆಧರಿಸಿ ಮಾಡಲಾಗಿದೆ ಎಂದು ತಿಳಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred