ಹೊಸ ಚಿತ್ರಗಳು ಬಿಡುಗಡೆಯಾದಾಗ ಅಥವಾ ನಟರ ಹುಟ್ಟುಹಬ್ಬದ ವೇಳೆ ಅವರ ಪೋಸ್ಟರ್‌ಗಳಿಗೆ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡುವುದು ದಕ್ಷಿಣ ಭಾರತದಲ್ಲಿ ಸಾಮಾನ್ಯ. ಆದರೆ ಈ ಹಾಲಿನ ಅಭಿಷೇಕ ತಮಿಳುನಾಡಿನ ಹಾಲು ಮಾರಾಟಗಾರರಿಗೆ ಹೊಸ ಸಂಕಷ್ಟ ತಂದಿಟ್ಟಿದೆ.

ಕಾರಣ, ಪೋಸ್ಟರ್‌ಗಳ ಅಭಿಷೇಕಕ್ಕೆ ಅಭಿಮಾನಿಗಳು, ಹಾಲಿನ ಪ್ಯಾಕೆಟ್‌ಗಳನ್ನು ಕದ್ದೊಯ್ಯುತ್ತಿದ್ದಾರಂತೆ. ಹೀಗಾಗಿ ಪೋಸ್ಟರ್‌ಗಳಿಗೆ ಹಾಲಿನ ಅಭಿಷೇಕ ನಿಷೇಧಿಸಿ ಎಂದು ಹಾಲು ಮಾರಾಟಗಾರರು ಸರ್ಕಾರ ವನ್ನು ಒತ್ತಾಯಿಸಿದ್ದಾರೆ.

ಇತ್ತೀಚೆಗೆ ತಮ್ಮ ಸಿನಿಮಾ ‘ವಂತಾ ರಾಜಾವಥಾನ್ ವರುವೆನ್’ ಬಿಡುಗಡೆ ವೇಳೆ ತಮ್ಮ ಪೋಸ್ಟರ್‌ಗಳಿಗೆ ಉದಾರವಾಗಿ ಹಾಲಿನ ಅಭಿಷೇಕ ಮಾಡುವಂತೆ ನಟ ಸಿಂಬು ಮನವಿ ಮಾಡಿದ್ದರು.