ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರ ರಿಲೀಸ್ | ಅಭಿಮಾನಿಗಳ ಸಂಭ್ರಮಾಚರಣೆ | ಅಂಬಿ ಕಟೌಟ್‌ಗೆ ಕ್ಷೀರಾಭಿಷೇಕ | 

ಮಂಡ್ಯ (ಸೆ. 21):  ರೆಬಲ್ ಸ್ಟಾರ್ ಅಭಿನಯದ ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರ ಬಿಡುಗಡೆಯಾಗಿದೆ. ಅಭಿಮಾನಿಗಳ ಸಂಭ್ರಮಾಚರಣೆ ನಡೆಸುತ್ತಿದ್ದಾರೆ. 

ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರ ರಾಜ್ಯಾದ್ಯಂತ ಇಂದು ಬಿಡುಗಡೆ

ಹಲವು ವರ್ಷಗಳ ನಂತರ ಪರಿಪೂರ್ಣ ನಾಯಕ ನಟನಾಗಿ ಅಂಬರೀಶ್ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಅಂಬರೀಶ್ ಚಿತ್ರ ನೋಡಲು ಚಿತ್ರ ಮಂದಿರದತ್ತ ಅಭಿಮಾನಿಗಳ ದಂಡೇ ಹರಿದು ಬರುತ್ತಿದೆ. 

’ಅಂಬಿ ನಿಂಗೆ ವಯಸ್ಸಾಯ್ತೋ’ ನಂತರ ಅಂಬರೀಶ್ ನಟನೆಗೆ ಗುಡ್ ಬೈ ಹೇಳ್ತಾರಾ?

ಮಂಡ್ಯ ನಗರದ ಸಿಲ್ವರ್ ಜೂಬಿಲಿ ಪಾರ್ಕ್ ನಿಂದ ಸಿದ್ದಾರ್ಥ ಚಿತ್ರ ಮಂದಿರವರೆಗೆ ಅಭಿಮಾನಿಗಳು ಮೆರವಣಿಗೆ ಬಂದಿದ್ದಾರೆ. ವಿವಿಧ ಕಲಾತಂಡ, ನೂರಾರು ಆಟೋಗಳು ಮೆರವಣಿಗೆಯಲ್ಲಿ ಭಾಗಿಯಾಗಿವೆ. ಅಂಬಿ ಭಾವಚಿತ್ರ ಹಿಡಿದು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಅಂಬಿ ಕಟೌಟ್ ಗೆ ಅಭಿಮಾನಿಗಳು ಕ್ಷೀರಾಭಿಷೇಕ ಮಾಡಿದ್ದಾರೆ.