ಬಿಗ್‌ಬಾಸ್ ಸ್ಪರ್ಧಿ ಹಾಗೂ ಯೂಟ್ಯೂಬರ್ ಮೃದುಲ್ ತಿವಾರಿ ಅವರನ್ನು ನೋಡಲು ಸಾವಿರಾರು ಅಭಿಮಾನಿಗಳು ಸೇರಿದ್ದರಿಂದ ನೂಕುನುಗ್ಗಲು ಉಂಟಾಗಿದೆ. ಅಭಿಮಾನಿಗಳು ಬ್ಯಾರಿಕೇಡ್ ಮುರಿದು ಕುರ್ಚಿಗಳನ್ನು ಮುರಿದಿದ್ದರಿಂದ ಮೃದುಲ್ ಕೇವಲ 12 ನಿಮಿಷಗಳಲ್ಲಿ ಕಾರ್ಯಕ್ರಮದಿಂದ ನಿರ್ಗಮಿಸಿದರು.

ಬಿಗ್ಬಾಸ್ ಸ್ಪರ್ಧಿಯ ನೋಡಲು ಮುಗಿಬಿದ್ದ ಜನ

ಬಿಗ್ಬಾಸ್ ಮನೆಯಿಂದ ಹೊರಬಂದ ಸ್ಪರ್ಧಿಯೊಬ್ಬರನ್ನು ನೋಡಲು ಅವರ ಜೊತೆ ಸೆಲ್ಫಿ ಪಡೆಯಲು ಅಭಿಮಾನಿಗಳು ಮುಗಿಬಿದ್ದಿದ್ದರಿಂದ ನೂಕುನುಗ್ಗಲು ಉಂಟಾದಂತಾಹ ಘಟನೆ ಉತ್ತರ ಪ್ರದೇಶದ ಇಟಾವಾದಲ್ಲಿ ನಡೆದಿದೆ. ಜನಜಂಗುಳಿಯನ್ನು ನೋಡಿದ ಬಿಗ್‌ಬಾಸ್ ಸ್ಪರ್ಧಿ ಕೇವಲ 12 ನಿಮಿಷದಲ್ಲಿ ಅಲ್ಲಿಂದ ಹೊರಟು ಹೋಗಿದ್ದಾರೆ.

ಬಿಗ್ಬಾಸ್ ಸ್ಪರ್ಧಿಗೆ ಅದ್ದೂರಿ ಸ್ವಾಗತ: ಜನರ ನಿಯಂತ್ರಿಸಲಾಗದೇ ಕಕ್ಕಾಬಿಕ್ಕಿಯಾದ ಆಯೋಜಕರು

ಹೌದು ಹಿಂದಿ ಬಿಗ್ಬಾಸ್ ಸ್ಪರ್ಧಿ ಯೂಟ್ಯೂಬರ್ ಮೃದುಲ್ ತಿವಾರಿ ಶೋದಿಂದ ಔಟಾಗಿದ್ದು, ಅವರು ತಮ್ಮ ಹುಟ್ಟೂರಾದ ಉತ್ತರ ಪ್ರದೇಶದ ಇಟಾವಾಗೆ ಭೇಟಿ ನೀಡಿದ್ದರು. ಅವರನ್ನು ಅದ್ದೂರಿಯಾಗಿ ಸ್ವಾಗತಿಸುವುದಕ್ಕೆ ಅವರ ಅಭಿಮಾನಿಗಳು ಸಜ್ಜಾಗಿದ್ದರು. ಅದಕ್ಕಾಗಿ ದೊಡ್ಡ ಮಟ್ಟದ ಸಿದ್ಧತೆ ನಡೆಸಲಾಗಿತ್ತು. ಆದರೆ ಜನಸಂದಣಿಯ ನಿರ್ವಹಣೆಗೆ ಯಾವುದೇ ಪ್ಲಾನ್ ಮಾಡಿರದ ಕಾರಣ ಹಾಗೂ ನಿರೀಕ್ಷಿಸಿದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಸಾವಿರಾರು ಜನ ಅಲ್ಲಿ ಸೇರಿದ್ದರಿಂದ ಜನರ ನಿಯಂತ್ರಿಸಲಾಗದೇ ಆಯೋಜಕರು ಕಕ್ಕಾಬಿಕ್ಕಿಯಾಗಿದ್ದಾರೆ. ಕೆಲ ಅಭಿಮಾನಿಗಳು ಬ್ಯಾರಿಕೇಡ್ ಮುರಿದು ಒಳನುಗ್ಗಿದ್ದು, ಕುರ್ಚಿಗಳನ್ನು ಮುರಿದು ಹಾಕಿ ಮೃದುಲ್ ತಿವಾರಿ ಬಳಿ ಬಂದು ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ. ಇಷ್ಟೊಂದು ಸಂಖ್ಯೆಯಲ್ಲಿ ಸೇರಿದ ಜನರನ್ನು ನೋಡಿ ಕೇವಲ ಹನ್ನೆರಡೇ ನಿಮಿಷದಲ್ಲಿ ಮೃದುಲ್ ಅವರು ಅಲ್ಲಿಂದ ಹೊರಟು ಹೋಗಿದ್ದಾರೆ.

12 ನಿಮಿಷದಲ್ಲಿ ಹೊರಟು ಹೋದ ಮೃದುಲ್:

ಇದಕ್ಕೂ ಮೊದಲು ನಡೆದ ರೋಡ್‌ಶೋದಲ್ಲಿ ವಿವಿಧ ಸ್ಥಳಗಳಲ್ಲಿ ಅವರನ್ನು ಹೂವಿನ ಹಾರಗಳೊಂದಿಗೆ ಸ್ವಾಗತಿಸಲಾಯಿತು. ಈ ವೇಳೆ ಅಭಿಮಾನಿಗಳು ನಿಯಂತ್ರಿಸಲಾಗದೆ ಸೆಲ್ಫಿ ತೆಗೆದುಕೊಳ್ಳುವ ಆತುರದಲ್ಲಿ ವೇದಿಕೆಯ ಬಳಿ ಇದ್ದ ಕುರ್ಚಿಗಳನ್ನು ಒಡೆದರು, ಬ್ಯಾರಿಕೇಡ್ ಮುರಿಯಲು ಪ್ರಯತ್ನಿಸಲು ಪ್ರಾರಂಭಿಸಿದರು. ಇಷ್ಟೊಂದು ಸಂಖ್ಯೆಯ ಜನಸಮೂಹದ ಮುಂದೆ ಪೊಲೀಸರು ಸಹ ಅಸಹಾಯಕರಾಗಿದ್ದರು. ಕೊನೆಗೆ, ಕೇವಲ 12 ನಿಮಿಷಗಳ ಕಾಲ ಅಲ್ಲಿಯೇ ಇದ್ದ ಮೃದುಲ್ ತಿವಾರಿ, ಕಾರ್ಯಕ್ರಮವನ್ನು ಪೂರ್ಣಗೊಳಿಸದೆ ಕೋಪದಿಂದಲೇ ಅಲ್ಲಿಂದ ಹೊರಟು ಹೋದರು.

ರೋಡ್ ಶೋ ಸಮಯದಲ್ಲಿ ಕಾರುಗಳು ಮತ್ತು ಬೈಕ್‌ಗಳೊಂದಿಗೆ ಸಾಹಸಗಳನ್ನು ಮಾಡಲಾಗಿದೆ. ಅಂದಾಜು ಜನಸಂದಣಿಯ ಬಗ್ಗೆಯೂ ಮಾಹಿತಿ ನೀಡಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಇದಕ್ಕೂ ಮೊದಲು, ಮೃದುಲ್ 1.5 ಕೋಟಿ ಮೌಲ್ಯದ ಡಿಫೆಂಡರ್ ಕಾರಿನಲ್ಲಿ ಕಾರ್ಯಕ್ರಮ ಸ್ಥಳಕ್ಕೆ ಆಗಮಿಸಿ, ರೋಡ್ ಶೋ ನಡೆಸಿದರು. ಅವರೊಂದಿಗೆ ನೂರಾರು ಕಾರುಗಳು ಮತ್ತು ಬೈಕ್‌ಗಳ ಬೆಂಗಾವಲು ಪಡೆ ಕೂಡ ಬಂದಿತು. ಈ ಸಮಯದಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸಲಾಯಿತು. ಇದರ ವೀಡಿಯೊಗಳು ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.

57 ಸಾವಿರ ದಂಡ ವಸೂಲಿ ಮಾಡಿದ ಸಂಚಾರಿ ಪೊಲೀಸರು:

ಸಂಚಾರ ಪೊಲೀಸರು ಈ ವೇಳೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಬೆಂಗಾವಲು ಪಡೆಯ 9 ವಾಹನಗಳಿಗೆ ಚಲನ್ ಜಾರಿ ಮಾಡಿ, ಒಟ್ಟು 57 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಇದು ಅಧಿಕಾರ ಪ್ರದರ್ಶನಕ್ಕೆ ವೇದಿಕೆಯಲ್ಲ.ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಸಂಚಾರ ನಿರೀಕ್ಷಕ ಸುಬೇದಾರ್ ಸಿಂಗ್ ಕಟ್ಟುನಿಟ್ಟಾಗಿ ಹೇಳಿದ್ದಾರೆ.

ಯೂಟ್ಯೂಬರ್ ಮೃದುಲ್ ತಿವಾರಿ ಬಿಗ್ ಬಾಸ್ 19 ಕಾರ್ಯಕ್ರಮದಿಂದ ಹೊರಬಂದ ನಂತರ ಅವರ ಹುಟ್ಟೂರು ಇಟಾವಾದಲ್ಲಿ ಅವರ ಭವ್ಯ ಸ್ವಾಗತಕ್ಕಾಗಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ನಗರದ ಪ್ರಸಿದ್ಧ ಆಭರಣ ವ್ಯಾಪಾರಿ ಮತ್ತು ಗುಂಗುನ್ ಜ್ಯುವೆಲ್ಲರ್ಸ್‌ನ ಮಾಲೀಕ ರಾಜೀವ್ ಕುಮಾರ್, ರಾಮಲೀಲಾ ಮೈದಾನದಲ್ಲಿ ಅವರನ್ನು ಸ್ವಾಗತಿಸಲು ದೊಡ್ಡ ಕಾರ್ಯಕ್ರಮವನ್ನು ಸಿದ್ಧಪಡಿಸಿದ್ದರು. ಭವ್ಯ ವೇದಿಕೆಯನ್ನೂಅದಕ್ಕಾಗಿ ಅಲಂಕಾರ ಮಾಡಲಾಗಿತ್ತು. ಮಧ್ಯಾಹ್ನ 1 ಗಂಟೆಗೆ ಮೃದುಲ್ ತನ್ನ ಕಾರಿನಲ್ಲಿ ಕಠ್ಫೋರಿ ಟೋಲ್ ಪ್ಲಾಜಾ ತಲುಪಿದರು. ನಗರಕ್ಕೆ ಸುಮಾರು 30 ಕಿಲೋಮೀಟರ್ ದೂರದಿಂದಲೇ ಅವರ ಬೆಂಬಲಿಗರು ಬೈಕ್‌ಗಳು ಮತ್ತು ಕಾರುಗಳ ಬೆಂಗಾವಲುಗಳಲ್ಲಿ ಜಮಾಯಿಸಲು ಪ್ರಾರಂಭಿಸಿದರು ಇದರಿಂದಾಗಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಲೇ ಇತ್ತು.

ಇದನ್ನೂ ಓದಿ: ಬರ್ತ್‌ಡೇ ದಿನವೇ ಫನ್ ಅಂತ ಸ್ನೇಹಿತರೇ ಬೆಂಕಿ ಹಚ್ಚಿದ್ರು: 21ರ ಯುವಕನ ಸ್ಥಿತಿ ಗಂಭೀರ

ಅನೇಕ ಅಭಿಮಾನಿಗಳು ಹೆಲ್ಮೆಟ್ ಇಲ್ಲದೆ ಸಾಹಸ ಪ್ರದರ್ಶನ ಮಾಡುತ್ತಿರುವುದು ಕಂಡುಬಂದಿತು. ಕೆಲ ಕಾರು ಚಾಲಕರು ತಮ್ಮ ಸೀಟ್ ಬೆಲ್ಟ್ ಗಳನ್ನು ಹಾಕಿಕೊಂಡಿರಲಿಲ್ಲ. ಪೊಲೀಸರು ಸ್ವಲ್ಪ ಸಮಯದವರೆಗೆ ಅವರನ್ನು ತಡೆಯಲು ಪ್ರಯತ್ನಿಸಿದರು, ಆದರೆ ಜನಸಂದಣಿ ತುಂಬಾ ಹೆಚ್ಚಾಗಿದ್ದರಿಂದ ಸಂಚಾರ ವ್ಯವಸ್ಥೆ ಕುಸಿದುಬಿತ್ತು.

10 ನಿಮಿಷದಲ್ಲಿ ಕುಸಿದ ವೇದಿಕೆ:

ಬ್ಯಾರಿಕೇಡಿಂಗ್ 3 ನಿಮಿಷಗಳಲ್ಲಿ ಮುರಿದು ಬಿದ್ದರೆ ಜನಸಂದಣಿಯ ಆರ್ಭಟಕ್ಕೆ ವೇದಿಕೆ 10 ನಿಮಿಷಗಳಲ್ಲಿ ಕುಸಿದು ಬಿತ್ತು . ಸುಮಾರು 3 ಗಂಟೆಯ ಹೊತ್ತಿಗೆ, ಮೃದುಲ್ ತಿವಾರಿ ಅವರ ಬೆಂಗಾವಲು ಪಡೆ ರಾಮಲೀಲಾ ಮೈದಾನವನ್ನು ತಲುಪಿತು. ಕಾಯುತ್ತಿದ್ದ ಸಾವಿರಾರು ಯುವಕರು ಮೃದುಲ್ ಅವರನ್ನು ನೋಡಿದ ತಕ್ಷಣ, ಕಾಲ್ತುಳಿತದಂತಹ ಪರಿಸ್ಥಿತಿ ನಿರ್ಮಾಣವಾಯಿತು. ಆಯೋಜಕರು ವೇದಿಕೆಯ ಮುಂದೆ ಒಂದು ಸಣ್ಣ ಬ್ಯಾರಿಕೇಡ್ ಹಾಕಿದ್ದರು, ಅದು ಜನಸಮೂಹದ ತಳ್ಳಾಟ ಮತ್ತುನೂಕಾಟದಿಂದಾಗಿ ಕೇವಲ 3 ನಿಮಿಷಗಳಲ್ಲಿ ಮುರಿದುಹೋಯಿತು. ಪೊಲೀಸರು ಅದನ್ನು ತಡೆಯಲು ಪ್ರಯತ್ನಿಸಿದರು ಆದರೆ 10 ನಿಮಿಷಗಳ ನಂತರ ವೇದಿಕೆಯೂ ಕುಸಿದು ಬಿತ್ತು.

ಕೇವಲ 10-12 ನಿಮಿಷಗಳಲ್ಲಿ, ವೇದಿಕೆಯ ಮುಂಭಾಗದಲ್ಲಿದ್ದ ಕುರ್ಚಿಗಳು ಮುರಿಯಲು ಪ್ರಾರಂಭಿಸಿದವು. ಬ್ಯಾರಿಕೇಡ್‌ಗಳು ಬಿದ್ದ ತಕ್ಷಣ, ಇಡೀ ಜನಸಮೂಹ ವೇದಿಕೆಯ ಕಡೆಗೆ ಧಾವಿಸಿತು. ಅನೇಕ ಜನರು ಪರಸ್ಪರ ಬೀಳುತ್ತಲೇ ಇದ್ದರು. ಗದ್ದಲ ಹೆಚ್ಚಾಗುವುದನ್ನು ಗಮನಿಸಿದ ಭದ್ರತಾ ತಂಡ ಮೃದುಲ್‌ನನ್ನು ಹಿಂದಕ್ಕೆ ಸ್ಥಳಾಂತರಿಸಿತು. ಪರಿಸ್ಥಿತಿ ಎಷ್ಟು ಹದಗೆಟ್ಟಿತು ಎಂದರೆ ಮೃದುಲ್ ತಿವಾರಿ ಕೋಪದಿಂದ ವೇದಿಕೆಯಿಂದ ಇಳಿದು ನೇರವಾಗಿ ತನ್ನ ಕಾರಿಗೆ ಹೋದರು.

ಇದನ್ನೂ ಓದಿ: ಕಾರಿನ ಮೇಲೆ ಉರುಳಿ ಬಿದ್ದ ಜಲ್ಲಿಕಲ್ಲು ಸಾಗಿಸುತ್ತಿದ್ದ ಟ್ರಕ್ : ಒಂದೇ ಕುಟುಂಬದ 7 ಜನ ಸ್ಥಳದಲ್ಲೇ ಸಾವು