ಬಿಗ್‌ಬಾಸ್ ಸ್ಪರ್ಧಿ ಕುನಿಕಾ ಸದಾನಂದ್ 20 ವರ್ಷಗಳ ಕಾಲ ವಿವಾಹಿತ ಗಾಯಕನೊಂದಿಗೆ ಲಿವ್-ಇನ್ ಸಂಬಂಧ ಹೊಂದಿದ್ದಾಗಿ ಬಹಿರಂಗಪಡಿಸಿದ್ದಾರೆ.
20 ವರ್ಷ ಖ್ಯಾತ ಗಾಯಕನ ಜೊತೆ ರಿಲೇಷನ್‌ಶಿಪ್‌ನಲ್ಲಿದ್ದೆ ಎಂದ ಗಾಯಕಿ
ನವದೆಹಲಿ: ಬಾಲಿವುಡ್ ನಟ ಸಲ್ಮಾನ್ ಖಾನ್ ನಡೆಸಿಕೊಡುವ ಹಿಂದಿ ಬಿಗ್‌ಬಾಸ್ 19ರಲ್ಲಿ ಸ್ಪರ್ಧಿಯೊಬ್ಬರು ತಾನು 20 ವರ್ಷಗಳ ಕಾಲ ವಿವಾಹಿತನಾಗಿದ್ದ ಖ್ಯಾತ ಗಾಯಕನೊಂದಿಗೆ ಲೀವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದೆ ಎಂದು ಹೇಳಿಕೊಂಡಿದ್ದು, ಈಕೆಯ ಹೇಳಿಕೆ ಸಂಚಲನ ಸೃಷ್ಟಿಸಿದೆ. ಹೌದು ಹಿಂದಿ ಬಿಗ್ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿರುವ ಕುನಿಕ್ಕಾ ಸದಾನಂದ ತನ್ನ ಡ್ರಾಮಾಗಳಿಂದಲೇ ಬಿಗ್ವಾಸ್ ಮನೆಯ ಕೇಂದ್ರಬಿಂದುವಾಗಿದ್ದು, ಮನೆಯಲ್ಲಿ ನಡೆದ ಮಾತಿನ ಚಕಮಕಿಯ ನಂತರ ಮನೆಯ ಕ್ಯಾಪ್ಟನ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಕುನಿಕಾ ಸದಾನಂದದ ವೈಯಕ್ತಿಕ ಬದುಕಿನ ಬಗ್ಗೆ ಸಂಗೀತಾ ನಿರ್ದೇಶಕ ಅರ್‌ಮನ್ ಮಲಿಕ್ ಈ ಹಿಂದೆಯೇ ಹಲವು ಸುಳಿವುಗಳನ್ನು ನೀಡಿದ್ದರು. ಆದರೆ ಆಕೆ ಮಾತ್ರ ಇದ್ಯಾವುದಕ್ಕೂ ಪ್ರತಿಕ್ರಿಯಿಸಿರಲಿಲ್ಲ,, ಆದರೆ ಇತ್ತಿಚೆಗೆ ಸ್ವತಃ ಆಕೆಯ ಬಾಯಿಯಿಂದಲೇ ತನ್ನ ವೈಯಕ್ತಿಕ ಬದುಕಿನ ಸತ್ಯ ಹೊರಬಿದ್ದಿದ್ದು, ಇದು ಬಿಗ್ಬಾಸ್ ಮನೆಯ ಹೊರಗೆ ತೀವ್ರ ಸಂಚಲನ ಸೃಷ್ಟಿಸಿದೆ.
ನಾನು ನನ್ನ ರಹಸ್ಯ ಸಂಬಂಧವನ್ನು 27 ವರ್ಷಗಳಿಂದ ಮರೆಮಾಡಿದ್ದೆ ಎಂದ ಕುನಿಕಾ
ಮನೆಯ ಮತ್ತೊಬ್ಬ ಸ್ಪರ್ಧಿ ನೀಲಮ್ ಗಿರಿ ಹಾಗೂ ತಾನ್ಯ ಮಿತ್ತಲ್ ಜೊತೆಗೆ ನಡೆಸಿದ ಭಾವುಕ ಮಾತುಕತೆಯ ವೇಳೆ ತಾನು ವಿವಾಹಿತ ವ್ಯಕ್ತಿಯ ಜೊತೆ ಸಹ ಜೀವನ ನಡೆಸುತ್ತಿದೆ ಎಂದು ಕುನಿಕ್ಕಾ ಸದಾನಂದ ಹೇಳಿಕೊಂಡಿದ್ದಾಳೆ. ಈ ಸಂಬಂಧದ ಬಗ್ಗೆ ಮಾತನಾಡಿದ ಕುನಿಕಾ, ನಾನು ನನ್ನ ರಹಸ್ಯ ಸಂಬಂಧವನ್ನು 27 ವರ್ಷಗಳಿಂದ ಮರೆಮಾಡಿದ್ದೆ, ಅದರ ಬಗ್ಗೆ ಎಂದಿಗೂ ಪ್ರತಿಕ್ರಿಯಿಸಲಿಲ್ಲ. ನಾನು ಈಗ ಅದರ ಬಗ್ಗೆ ಮಾತನಾಡಿದ್ದೇನೆ ಮತ್ತು ನನಗೆ ಈಗ ಮನಸ್ಸು ತುಂಬಾ ಹಗುರವೆನಿಸುತ್ತದೆ. ಅವನು ವಿವಾಹಿತ ವ್ಯಕ್ತಿ, ಅವನ ಹೆಂಡತಿಯಿಂದ ದೂರಾಗಿದ್ದ ಮತ್ತು ನಾವು ಲಿವ್-ಇನ್ ಸಂಬಂಧದಲ್ಲಿದ್ದೆವು. ಆ ಸಮಯದಲ್ಲಿ ನಾನು ಮದುವೆಯಾಗಿರಲಿಲ್ಲ, ನಾವು ಜೊತೆಗೆ ವಾಸಿಸುತ್ತಿದ್ದೆವು, ಆದರೆ ನಂತರ ಅವನಿಗೆ ಬೇರೆ ಹುಡುಗಿಯ ಜೊತೆ ಸಂಬಂಧವಿರುವುದು ತಿಳಿಯಿತು. ಆತ ನನಗೆ ಮೋಸ ಮಾಡುವುದನ್ನು ಒಪ್ಪಿಕೊಂಡ ನಂತರ ನಾನು ಅವನನ್ನು ತೊರೆದೆ ಎಂದು ಕುನ್ನಿಕಾ ಸದಾನಂದ್ ಹೇಳಿಕೊಂಡಿದ್ದಾರೆ.
ಕುಮಾರ್ ಸಾನು ಜೊತೆ ಹೆಂಡ್ತಿಯಂತೆ ಇದ್ದೆ ಎಂದಿದ್ದ ಕುನಿಕಾ ಸದಾನಂದ:
ಕುನಿಕಾ ಇಲ್ಲಿ ಯಾರ ಹೆಸರನ್ನು ಹೇಳದಿದ್ದರೂ, ಅವರು ಖ್ಯಾತ ಗಾಯಕ ಕುಮಾರ್ ಸಾನು ಬಗ್ಗೆ ಮಾತನಾಡುತ್ತಿದ್ದರು ಎಂಬುದು ಸ್ಪಷ್ಟವಾಗಿದೆ. ಸಿದ್ಧಾರ್ಥ್ ಕಣ್ಣನ್ ಅವರೊಂದಿಗಿನ ಹಿಂದಿನ ಸಂದರ್ಶನದಲ್ಲಿ ಈ ಕುನಿಕಾ ಅವರು ತಾನು ಸಾನುಗೆ ಹೆಂಡತಿಯಂತಿದ್ದೆ ಎಂದು ಹೇಳಿಕೊಂಡಿದ್ದರು. ಕುನಿಕಾ ಸದಾನಂದ ಹಿಂದಿ ಬಿಗ್ ಬಾಸ್‌ಗೆ ಸೇರಿದ ನಂತರ ಸಂದರ್ಶನ ಮತ್ತೆ ಬೆಳಕಿಗೆ ಬಂದಿತು. ತನ್ನ ಹಿಂದಿನ ಕಳೆದು ಹೋದ ಜೀವನದ ಬಗ್ಗೆ ಮಾತನಾಡುತ್ತಾ ಕುನಿಕಾ, ಆತನ ಪತ್ನಿ ನನ್ನ ಕಾರನ್ನು ಹಾಕಿ ಸ್ಟಿಕ್‌ನಿಂದ ಹೊಡೆದರು. ಅವರು ನನ್ನ ಮನೆಯ ಹೊರಗೆ ಬಂದು ಕಿರುಚುತ್ತಿದ್ದರು. ಆದರೆ ನಾನು ಅವರ ಸ್ಥಿತಿಯನ್ನು ಅರ್ಥಮಾಡಿಕೊಂಡೆ. ಏಕೆಂದರೆ ಆಕೆಗೆ ತಮ್ಮ ಮಕ್ಕಳ ಅಗತ್ಯಗಳಿಗೆ ಹಣ ಬೇಕಾಗಿತ್ತು. ಆಕೆ ತಪ್ಪು ಮಾಡಿರಲಿಲ್ಲ, ಆಕೆ ಆತನ ಜೊತೆ ಮರಳಿ ಬಾಳಲು ಬಯಸುವುದಿಲ್ಲ ಎಂದು ಹೇಳಿದ್ದಳು ಎಂದು ಕುನ್ನಿಕಾ ಸದಾನಂದ ಹೇಳಿಕೊಂಡಿದ್ದಾಳೆ. ಕುನ್ನಿಕಾ ಸದಾನಂದ ಕೂಡ ಗಾಯಕಿಯಾಗಿದ್ದು, ಹಲವು ಸಿನಿಮಾ ಸೀರಿಯಲ್‌ಗೆ ಕೆಲಸ ಮಾಡಿದ್ದಾರೆ.
