- Home
- Automobile
- Bike News
- ಪ್ರತಿದಿನ 2 ಲಕ್ಷಕ್ಕೂ ಹೆಚ್ಚು ಬೈಕ್‌ಗಳು ಮಾರಾಟ, ಜನ ಹುಚ್ಚರಂತೆ ಈ ಕಂಪನಿ ಹಿಂದೆ ಬಿದ್ದಿದ್ದೇಕೆ?
ಪ್ರತಿದಿನ 2 ಲಕ್ಷಕ್ಕೂ ಹೆಚ್ಚು ಬೈಕ್‌ಗಳು ಮಾರಾಟ, ಜನ ಹುಚ್ಚರಂತೆ ಈ ಕಂಪನಿ ಹಿಂದೆ ಬಿದ್ದಿದ್ದೇಕೆ?
ಹೊಸ ಬೈಕ್ ಖರೀದಿ ಮಾಡಬೇಕು ಅಂದುಕೊಂಡಿದ್ರೆ ಅಥವಾ ನಿಮ್ಮ ಸ್ನೇಹಿತರು ಆ ಪ್ಲಾನ್‌ನಲ್ಲಿದ್ದರೆ.. ಯಾವ ಬೈಕ್ ಖರೀದಿ ಮಾಡಬೇಕು? ಯಾವ ಕಂಪನಿಯ ಬೈಕ್‌ಗಳು ಮಾರ್ಕೆಂಟಿಗ್‌ನಲ್ಲಿವೆ ಎಂಬ ಗೊಂದಲ ನಿಮ್ಮನ್ನ ಕಾಡ್ತಿರಬಹುದು. ಪ್ರತಿಷ್ಠಿತ ಕಂಪನಿಯೊಂದು ತನ್ನ ಬೈಕ್ ಮಾರಾಟಗಳ ಅಂಕಿ-ಸಂಖ್ಯೆ ಬಿಡುಗಡೆ ಮಾಡಿದೆ.

ಭಾರತದಿಂದ 3.96 ಲಕ್ಷ ಬೈಕ್‌ಗಳು ಮಾರಾಟ
ಹೋಂಡಾ ಮೋಟಾರ್‌ನ ಬ್ಯುಸಿನೆಸ್ ಕಳೆದ 6 ತಿಂಗಳಲ್ಲಿ ತುಂಬಾ ಉತ್ತಮವಾಗಿದೆ. ಆರು ತಿಂಗಳಲ್ಲಿ ಕಂಪನಿ 3.4 ಮಿಲಿಯನ್‌ಗಿಂತಲೂ ಅಧಿಕ ವಾಹನಗಳನ್ನು ಮಾರಾಟ ಮಾಡಿದೆ. ಕಂಪನಿ ದೇಶಿಯವಾಗಿ ಒಟ್ಟು 3 ಮಿಲಿಯನ್‌ಗಿಂತಲೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿ 3.96 ಲಕ್ಷ ಬೈಕ್‌ಗಳನ್ನ ರಫ್ತು ಮಾಡಿದೆ ಎಂದು ಕಂಪನಿ ಹೇಳಿಕೊಂಡಿದೆ. ಇನ್ನು ಸೆಪ್ಟೆಂಬರ್‌ನಲ್ಲಿ ಅದರ ಮಾರಾಟವು 24% ರಷ್ಟು ಹೆಚ್ಚಾಗಿದೆ.
706,266 ಬೈಕ್‌ಗಳು ಸೇಲ್
ಕಳೆದ ಸೆಪ್ಟೆಂಬರ್‌ನಲ್ಲಿ 700,000 ಕ್ಕೂ ಹೆಚ್ಚು ಬೈಕ್‌ಗಳು ಮತ್ತು ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ. ಕಂಪನಿ ಅಧಿಕೃತ ಮಾಹಿತಿ ಪ್ರಕಾರ.. ಮಾರಾಟವಾದ ಒಟ್ಟು ಸಂಖ್ಯೆ 706,266. ಈ ಸಂಖ್ಯೆಯಲ್ಲಿ 636,768 ಯುನಿಟ್‌ಗಳನ್ನು ಮಾರಾಟ ಮಾಡಿದೆ. 69,498 ಯುನಿಟ್‌ಗಳನ್ನು ರಫ್ತು ಮಾಡಿದೆ. 2025ರ ಸೆಪ್ಟೆಂಬರ್‌ನಲ್ಲಿ ಕಂಪನಿಯು 568,164 ಬೈಕ್‌ಗಳು ಮಾರಾಟ ಮಾಡಿತ್ತು.
ವರ್ಷದಿಂದ ವರ್ಷಕ್ಕೆ ಹೆಚ್ಚು ಮಾರಟ
2026-2027ರ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ 3,440,072 ದ್ವಿಚಕ್ರ ವಾಹನಗಳ ಮಾರಾಟ ಮಾಡಿದೆ. ಇವುಗಳಲ್ಲಿ ದೇಶೀಯ ಮಾರಾಟವು 3,044,072 ಯುನಿಟ್‌ಗಳಾಗಿದ್ದರೆ, ರಫ್ತು, 396,000 ಯುನಿಟ್‌ಗಳಷ್ಟಿತ್ತು. ಹಿಂದಿನ ಹಣಕಾಸು ವರ್ಷದ ಮೊದಲಾರ್ಧಕ್ಕೆ ಹೋಲಿಸಿದರೆ 15% ರಷ್ಟು ಬೆಳವಣಿಗೆ ತೋರಿಸುತ್ತದೆ. ಇನ್ನು ಹೋಂಡಾದ ದ್ವಿಚಕ್ರ ವಾಹನ ರಫ್ತು ವರ್ಷದಿಂದ ವರ್ಷಕ್ಕೆ ಹೆಚ್ಚಾಗ್ತಿದೆ.
5000 ರೂಪಾಯಿಗೆ ಬುಕ್
ರೆಬೆಲ್ 300 ಮತ್ತು ADV 160 ಸೇರಿದಂತೆ ಹಲವು ಯುನಿಟ್‌ಗಳನ್ನ ಹೋಂಡಾ ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಹೋಂಡಾ ADV 160 ಸ್ಕೂಟರ್‌ಗಾಗಿ ಕಾಯುತ್ತಿರುವ ಗ್ರಾಹಕರು ಇನ್ನೂ ಸುಮಾರು ದಿನ ಕಾಯಬೇಕು. ಅಕ್ಟೋಬರ್ 2026 ರಲ್ಲಿ ಗ್ರಾಹಕರಿಗೆ ಸಿಗಬೇಕಿತ್ತು. ಆದರೆ ಅದನ್ನು ಮುಂದಿನ ವರ್ಷಕ್ಕೆ ನೀಡಲಾಗುವುದು ಎಂದು ತಿಳಿಸಿದೆ. ಇದರ ಬೆಲೆಯು ₹1.70 ಲಕ್ಷ. ಕಂಪನಿಯ ಅಧಿಕೃತ ವೆಬ್‌ಸೈಟ್ ಮೂಲಕ ಅಥವಾ ಡೀಲರ್‌ಶಿಪ್ ಗಳಲ್ಲಿ ₹5,000 ಬುಕಿಂಗ್ ಮೊತ್ತಕ್ಕೆ ಬುಕ್ ಮಾಡಬಹುದು.

