ತಮಿಳುನಾಡಿನಲ್ಲಿ ಇಂದು ಮತದಾನದ ದಿನ. ತನ್ನ ನೆಚ್ಚಿನ ನಟ ವಿಜಯ್‌ಗೆ ವೋಟ್ ಹಾಕೋಕೆ ಆಗಲಿಲ್ಲ ಎಂದು ಯುವತಿಯೊಬ್ಬಳು ಕಣ್ಣೀರು ಹಾಕಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ತಮಿಳುನಾಡು ಚುನಾವಣೆಯಲ್ಲಿ ನಟ ವಿಜಯ್‌ಗೆ ವೋಟ್ ಹಾಕಲು ಸಾಧ್ಯವಾಗಲಿಲ್ಲ ಎಂದು ಯುವತಿಯೊಬ್ಬಳು ಕಣ್ಣೀರು ಹಾಕಿರುವ ವಿಡಿಯೋ ವೈರಲ್ ಆಗಿದೆ. ಮಲೇಷ್ಯಾದಿಂದ ಕೆಲಸ ಮುಗಿಸಿ ವಾಪಸ್ ಬರುವಾಗ ಫ್ಲೈಟ್ ಮಿಸ್ ಆದ ಕಾರಣ ಆಕೆಗೆ ಮತ ಚಲಾಯಿಸಲು ಸಾಧ್ಯವಾಗಿಲ್ಲ. ತಮಿಳುನಾಡಿನಲ್ಲಿ ಇಂದು ಮತದಾನದ ದಿನ. ಯಾರು ಅಧಿಕಾರಕ್ಕೆ ಬರುತ್ತಾರೆಂದು ಇಡೀ ರಾಜ್ಯವೇ ಕುತೂಹಲದಿಂದ ಕಾಯುತ್ತಿದೆ. ಅದರಲ್ಲೂ ನಟ ವಿಜಯ್ ಮೊದಲ ಬಾರಿಗೆ ರಾಜಕೀಯಕ್ಕೆ ಎಂಟ್ರಿ ಕೊಟ್ಟಿರೋದ್ರಿಂದ ಈ ಚುನಾವಣೆ ಇನ್ನಷ್ಟು ವಿಶೇಷವಾಗಿದೆ.

Add Asianetnews Kannada as a Preferred SourcegooglePreferred

ಇದೇ ಹೊತ್ತಲ್ಲಿ, ತನ್ನ ನೆಚ್ಚಿನ ನಟ ವಿಜಯ್‌ಗೆ ವೋಟ್ ಹಾಕೋಕೆ ಆಗಲಿಲ್ಲ ಎಂದು ಯುವತಿಯೊಬ್ಬಳು ಕಣ್ಣೀರು ಹಾಕಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಕೆಲಸದ ನಿಮಿತ್ತ ಮಲೇಷ್ಯಾಕ್ಕೆ ಹೋಗಿದ್ದ ಈ ಯುವತಿ, ವಾಪಸ್ ಬರುವಾಗ ಫ್ಲೈಟ್ ಮಿಸ್ ಮಾಡಿಕೊಂಡಿದ್ದಾರೆ. ಇದೇ ಕಾರಣಕ್ಕೆ ಅವರಿಗೆ ವೋಟ್ ಹಾಕಲು ಸಾಧ್ಯವಾಗಿಲ್ಲ. ವಿಜಯ್‌ಗೆ ಮತ ಚಲಾಯಿಸಲೆಂದೇ ಅವರು ಬಹಳ ದಿನಗಳಿಂದ ಕಾಯುತ್ತಿದ್ದರು. ಆದರೆ ದುರದೃಷ್ಟವಶಾತ್, ತಾಯ್ನಾಡಿಗೆ ಬರುವ ವಿಮಾನವನ್ನು ತಪ್ಪಿಸಿಕೊಂಡಿದ್ದಾರೆ.

ಒಂದು ವೋಟ್‌ ನನ್ನಿಂದ ತಪ್ಪಿತು

ತನ್ನ ನೆಚ್ಚಿನ ನಟನ ರಾಜಕೀಯದ ಮೊದಲ ಹೆಜ್ಜೆಗೆ ಬೆಂಬಲ ನೀಡಲು ಆಗಲಿಲ್ಲ ಎಂಬ ನೋವಿನಲ್ಲಿ ಅವರು ಕಣ್ಣೀರು ಹಾಕಿದ್ದಾರೆ. "ನಾನು ಕೆಲಸದ ಮೇಲೆ ಮಲೇಷ್ಯಾಕ್ಕೆ ಬಂದಿದ್ದೆ. ಆದರೆ ನನ್ನ ತಪ್ಪಿನಿಂದ ಫ್ಲೈಟ್ ಮಿಸ್ ಆಯ್ತು. ತಪ್ಪು ನನ್ನದೇ. ವೋಟ್ ಹಾಕೋಕೆ ಊರಿಗೆ ಬರೋಕೆ ಆಗ್ಲಿಲ್ಲ. ನನ್ನ ಒಂದು ವೋಟ್‌ನಿಂದ ಏನಾಗುತ್ತೆ ಅಂತ ಕೆಲವರು ಕೇಳಬಹುದು. ಆದರೆ ನಾವು ನಿಮ್ಮ ಜೊತೆ ಇದ್ದೀವಿ ಅಂತ ಅವರಿಗೆ (ವಿಜಯ್‌ಗೆ) ಭರವಸೆ ನೀಡುವ ದಾರಿ ಇದಾಗಿತ್ತು. ಆದ್ರೆ ಅದನ್ನೇ ನಾನು ಕಳೆದುಕೊಂಡು ನಿಂತಿದ್ದೇನೆ. ಇದನ್ನ ಒಪ್ಪಿಕೊಳ್ಳೋಕೆ ಆಗ್ತಿಲ್ಲ" ಎಂದು ಆ ಯುವತಿ ವಿಡಿಯೋದಲ್ಲಿ ಕಣ್ಣೀರು ಹಾಕಿದ್ದಾರೆ. ಹಾಗೆಯೇ ವಿಜಯ್ ಬಳಿ ಕ್ಷಮೆಯನ್ನೂ ಕೇಳಿದ್ದಾರೆ.

Scroll to load tweet…

ಅಲ್ಲದೇ, ಈ ಘಟನೆಗೆ ಸಂಬಂಧಿಸಿದ ಟ್ವೀಟ್ ಕೂಡ ವೈರಲ್ ಆಗಿದೆ. 'ಮಲೇಷ್ಯಾದಿಂದ ವಿಜಯ್‌ಗೆ ವೋಟ್ ಹಾಕಲು ಫ್ಲೈಟ್ ಮಿಸ್ ಮಾಡಿಕೊಂಡು ಕಣ್ಣೀರು ಹಾಕಿದ್ದರು... ಆದರೆ ಧೈರ್ಯ ಬಿಡಲಿಲ್ಲ. ಎಲ್ಲಾ ಅಡೆತಡೆಗಳನ್ನು ದಾಟಿ ಕೊನೆಗೂ ಮನೆಗೆ ಬಂದು ಮತ ಚಲಾಯಿಸಿದ್ದಾರೆ' ಎಂದು ಏಪ್ರಿಲ್ 22, 2026ರ ದಿನಾಂಕದ ಟ್ವೀಟ್‌ನಲ್ಲಿ ಹೇಳಲಾಗಿದೆ. ಇನ್ನು, ತಮಿಳುನಾಡಿನಲ್ಲಿ ನಟ ಅಜಿತ್ ಮೊದಲನೆಯವರಾಗಿ ಮತ ಚಲಾಯಿಸಿದರು. ಅವರ ನಂತರ ತ್ರಿಷಾ, ವಿಕ್ರಮ್, ಧ್ರುವ್ ವಿಕ್ರಮ್, ಜಯರಾಂ, ಪಾರ್ವತಿ, ಕಾಳಿದಾಸ್ ಜಯರಾಂ ಮತ್ತು ರಜನಿಕಾಂತ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ತಮ್ಮ ಹಕ್ಕು ಚಲಾಯಿಸಿದರು.