10+10+10 ಎಣಿಸೋದ್ರಲ್ಲಿ ಸುಸ್ತಾಗೋದ ’ದತ್ತಾಬಾಯ್’ ಉರ್ಫ್ ನಟ ವಿಜಯಸೂರ್ಯ. ಕೂಡಿಸಲು ಹೋಗಿ ಆದ ಎಡವಟ್ಟು ಏನು? 

ನಟ ವಿಜಯ್ ಸೂರ್ಯ ಅವರು ಈಗ ದೃಷ್ಟಿಬೊಟ್ಟು ಸೀರಿಯಲ್‌ನಲ್ಲಿ ರಗಡ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಾಕಲೇಟ್‌ ಬಾಯ್‌ ಎಂದೇ ಫೇಮಸ್‌ ಆಗಿರೋ ನಟ, ಈ ಸೀರಿಯಲ್‌ನಲ್ಲಿ ರೌಡಿ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಅಂದಹಾಗೆ ವಿಜಯ್‌ಸೂರ್ಯ ಅವರಿಗೆ ಸಕತ್‌ ಹಿಟ್‌ ಕೊಟ್ಟಿದ್ದು ‘ಅಗ್ನಿಸಾಕ್ಷಿ’ ಸೀರಿಯಲ್‌. ಆರು ವರ್ಷಗಳಿಗೂ ಅಧಿಕ ಕಾಲ ಈ ಸೀರಿಯಲ್‌ ಪ್ರಸಾರ ಆಗಿತ್ತು. ಬಳಿಕ ನಟ ದಿನ ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಅತಿಥಿ ಪಾತ್ರ ಮಾಡಿದ್ದರು. ಆಮೇಲೆ ‘ಪ್ರೇಮಲೋಕ’ ಧಾರಾವಾಹಿಯಲ್ಲಿಯೂ ನಟಿಸಿದ್ದರು. ಧಾರಾವಾಹಿಗಳ ಜೊತೆಗೆ ಅವರು ಸಿನಿಮಾ ಕೂಡ ಮಾಡುತ್ತಿದ್ದಾರೆ. ಇಂತಿಪ್ಪ ನಟ ಸುಲಭದಲ್ಲಿ ಗಣಿತದಲ್ಲಿ ಫೇಲ್‌ ಆಗಿ ಹೋಗಿರೋ ತಮಾಷೆಯ ವಿಡಿಯೋ ವೈರಲ್‌ ಆಗಿದೆ.

ಕೀರ್ತಿ ಎಂಟರ್‌ಟೇನ್‌ಮೆಂಟ್‌ ಚಾನೆಲ್‌ನಲ್ಲಿ ಕೀರ್ತಿ ಅವರು ಕೇಳಿದ ಗಣಿತದ ಪ್ರಶ್ನೆಗೆ ಫುಲ್‌ ಕನ್‌ಫ್ಯೂಸ್‌ ಆಗಿ ತಪ್ಪು ಉತ್ತರ ಕೊಟ್ಟಿದ್ದಾರೆ ವಿಜಯಸೂರ್ಯ. ಅಷ್ಟಕ್ಕೂ ಈ ಲೆಕ್ಕಾಚಾರದಲ್ಲಿ ಹಲವರು ಎಡವಟ್ಟು ಮಾಡಿಕೊಳ್ಳುವುದು ಇದೆ. ಏಕೆಂದರೆ, ಒಂದೇ ಸಲಕ್ಕೆ ಈ ಲೆಕ್ಕಾಚಾರ ಕೇಳಿದರೆ ಹಲವರಿಗೆ ಕನ್ಫ್ಯೂಸ್‌ ಆಗುತ್ತದೆ. ಅಷ್ಟಕ್ಕೂ ಕೀರ್ತಿ ಅವರು ಕೇಳಿದ್ದೇನೆಂದರೆ, 2040 + 40 ಎಷ್ಟು ಕೇಳಿದ್ದಾರೆ. ಅದಕ್ಕೆ ವಿಜಯಸೂರ್ಯ ಅವರು 2080 ಎಂದು ಸರಿಯುತ್ತರ ಕೊಟ್ಟಿದ್ದಾರೆ. ಬಳಿಕ ಕೀರ್ತಿ ಪ್ಲಸ್‌ 10 ಎಂದಾಗ ನಟ 2090 ಎಂದಿದ್ದಾರೆ. ಬಳಿಕ ಪ್ಲಸ್‌ 10 ಎಂದು ಕೇಳಿದ್ದಾರೆ. ಹೀಗೆ ಕೇಳಿದ್ರೆ ನೀವು ಏನು ಹೇಳುತ್ತಿದ್ದೀರಿ? 2040 + 40= 2080+10=2090. 2090+10 ಎಂದು ಕೇಳಿದರೆ ನಿಮ್ಮ ಉತ್ತರ ಏನು?

ಹೆಚ್ಚಿನವರು 3000 ಎನ್ನುತ್ತಾರೆ. ಇದು ಸಹಜ. ಅದೇ ರೀತಿ ವಿಜಯಸೂರ್ಯ ಕೂಡ ಹೇಳಿದ್ದಾರೆ. ಆಮೇಲೆ ಸರಿಮಾಡಿ ನೋಡಿ ಎಂದಾಗಲೂ ಅವರು ಕನ್‌ಫ್ಯೂಸ್‌ ಆಗಿ ನಾನು ಸರಿಯಾಗೇ ಹೇಳಿದ್ದೇನೆ ಎಂದರು. ಆಮೇಲೆ ಅಯ್ಯಯ್ಯೋ ಎನ್ನುತ್ತಲೇ ಸರಿಯುತ್ತರ 2100 ಎಂದಿದ್ದಾರೆ. ಇದರ ವಿಡಿಯೋ ಅನ್ನು ಕೀರ್ತಿ ಅವರು ಶೇರ್‌ ಮಾಡಿಕೊಂಡಿದ್ದು, ಹಲವರು ನಮಗೂ ಕನ್‌ಫ್ಯೂಸ್‌ ಆಗೋಯ್ತು ಎಂದಿದ್ದಾರೆ.

ಅಂದಹಾಗೆ ವಿಜಯ್ ಸೂರ್ಯ ಅವರಿಗೆ ಮದುವೆಯಾಗಿ ಎರಡು ಮಕ್ಕಳಿದ್ದರೂ ಹುಡುಗಿಯರಿಗೆ ಅವರ ಮೇಲಿನ ಕ್ರೇಜ್ ಏನೂ ಕಮ್ಮಿಯಾಗಿಲ್ಲ ಅನ್ನಿ. ಆದರೆ ಇದೀಗ ಇವರು ಮತ್ತೊಂದು ಮದ್ವೆನೂ ಆಗಿದ್ದಾರೆ. ಅದು ದೃಷ್ಟಿಬೊಟ್ಟು ಸೀರಿಯಲ್​ನಲ್ಲಿ! ಈ ಹಿಂದೆ ಅವರು ಸಂದರ್ಶನವೊಂದರಲ್ಲಿ ತಮ್ಮ ಮದುವೆಯ ಡೇಟ್​ ಮತ್ತು ಮಗ ಹುಟ್ಟಿದ ಡೇಟ್​ ಎರಡನ್ನೂ ಕನ್​ಫ್ಯೂಸ್​ ಮಾಡಿಕೊಂಡು ಸಂದರ್ಶನವೊಂದರಲ್ಲಿ ಏನೇನೋ ಹೇಳಿ ಎಡವಟ್ಟಿಗೆ ಸಿಲುಕಿದ್ದರು. ಮದುವೆಗೂ ಮುನ್ನ ಮಗ ಹುಟ್ಟಿದ್ದ ಎನ್ನುವ ರೀತಿಯಲ್ಲಿ ಅವರು ಮಾತನಾಡಿದ್ದರು.

ಪತ್ನಿ ಕಂಡ್ರೆ ಭಯ ಇದ್ಯಾ, ಭಕ್ತಿ ಇದ್ಯಾ ಕೇಳಿದಾಗ, ವಿಜಯಸೂರ್ಯ ಅವರು ಪ್ರೀತಿ ಇದೆ, ಕಾಳಜಿ ಇದೆ ಎಂದಿದ್ದರು. ಮದುವೆಯಾಗಿ ಎಷ್ಟು ವರ್ಷ ಆಯ್ತು ಎಂದು ಕೇಳಿದಾಗ ನಾಲ್ಕು ವರ್ಷ ಎಂದಿದ್ದರು. ಅಪ್ಪ ಆಗಿ ಎಷ್ಟು ವರ್ಷ ಆಯ್ತು ಕೇಳಿದಾಗ ತಲೆ ಕೆಡಿಸಿಕೊಂಡರು ವಿಜಯ್​. ಕೊನೆಗೆ ಐದು ವರ್ಷ ಎಂದುಬಿಡೋದೆ? ಕೊನೆಗೆ ನಟ, ಮದ್ವೆಯಾಗಿ ಎಷ್ಟು ವರ್ಷ ಆಯ್ತೋ ಅಷ್ಟು ವರ್ಷ ಎಂದು ಅಲ್ಲಿಯೂ ಎಡವಟ್ಟು ಮಾಡಿದ್ದರು. ಕೊನೆಗೆ, ಮದುವೆಯಾದ ಡೇಟ್​ ಹೇಳಿ ಎಂದಾಗ ಫೆಬ್ರುವರಿ 14 ಎಂದು ಹೇಳಿದ್ದರು. ಪ್ರೇಮಿಗಳ ದಿನ ಆಗಿದ್ದರಿಂದ ಚೆನ್ನಾಗಿ ನೆನಪಿದೆ ಎಂದೂ ಹೇಳಿದ್ದರು.

View post on Instagram