ಆಗ ಶ್ರೀರಂಗಪಟ್ಟಣದ ಸುತ್ತಮುತ್ತ ‘ಚಲಿಸುವ ಮೋಡಗಳು' ಚಿತ್ರದ ‘ಜೇನಿನ ಹೊಳೆಯೋ ಹಾಲಿನ ಮಳೆಯೋ ..' ಹಾಡಿನ ಚಿತ್ರೀಕರಣ ನಡೆಯುತ್ತಿತ್ತು. ಸೆಟ್‌ನಲ್ಲಿ ನಾನು, ರಾಜ್‌ ಅವರ ಸಂಬಂಧಿ ಎಸ್‌.ಕೆ. ಗೋವಿಂದ ರಾಜು, ಕಲಾನಿರ್ದೇಶಕ ಪೆಕೆಟಿ ರಂಗ ರೂಂಗೆ ಹೋದವರು ಚಿ. ಉದಯ ಶಂಕರ್‌ ಬರೆದ ಈ ಹಾಡಿನ ಬಗ್ಗೆ ಚರ್ಚೆ ಮಾಡುತ್ತಿದ್ದೆವು. ಈ ಹಾಡಲ್ಲಿ ಹೊಸತನ ತರಬೇಕು ಅಂದುಕೊಂಡು ಡಾ. ರಾಜ್‌ ಅವರು ಕರ್ನಾಟಕ ಮ್ಯಾಪ್‌ ಒಳಗಿಂದ ಬರುವ ಹಾಗೆ ಮಾಡಿದರೆ ಚೆನ್ನಾಗಿರುತ್ತೆ ಅಂದುಕೊಂಡೆವು. ಅದಕ್ಕಾಗಿ ಕರ್ನಾಟಕ ಮ್ಯಾಪ್‌ ಇರುವ ದೊಡ್ಡ ಗಾಜಿನ ಬೋರ್ಡ್‌ ರೆಡಿ ಮಾಡಿದೆವು. ಅದನ್ನು ಮರುದಿನ ಶೂಟಿಂಗ್‌ ಲೊಕೇಶನ್‌ಗೆ ತಗೊಂಡು ಹೋಗಿ ಇಟ್ಟೆವು.ಅಣ್ಣಾವ್ರಿಗೆ ಒಂದು ಅಭ್ಯಾಸ, ಔಟ್‌ಡೋರ್‌ ಶೂಟಿಂಗ್‌ ಇದ್ದರೆ ಮಧ್ಯಾಹ್ನ ಊಟ ಮಾಡಿದ ಮೇಲೆ ಒಂದು ವಾಕ್‌ ಹೋಗೋದು. ಅವತ್ತು ನಾನೂ ಪಕ್ಕದಲ್ಲೇ ಇದ್ದ ಕಾರಣ ನನ್ನನ್ನೂ ವಾಕಿಂಗ್‌ಗೆ ಕರೆದ್ರು.

ಆಗ ಶ್ರೀರಂಗಪಟ್ಟಣದ ಸುತ್ತಮುತ್ತ ‘ಚಲಿಸುವ ಮೋಡಗಳು' ಚಿತ್ರದ ‘ಜೇನಿನ ಹೊಳೆಯೋ ಹಾಲಿನ ಮಳೆಯೋ ..' ಹಾಡಿನ ಚಿತ್ರೀಕರಣ ನಡೆಯುತ್ತಿತ್ತು. ಸೆಟ್‌ನಲ್ಲಿ ನಾನು, ರಾಜ್‌ ಅವರ ಸಂಬಂಧಿ ಎಸ್‌.ಕೆ. ಗೋವಿಂದ ರಾಜು, ಕಲಾನಿರ್ದೇಶಕ ಪೆಕೆಟಿ ರಂಗ ರೂಂಗೆ ಹೋದವರು ಚಿ. ಉದಯ ಶಂಕರ್‌ ಬರೆದ ಈ ಹಾಡಿನ ಬಗ್ಗೆ ಚರ್ಚೆ ಮಾಡುತ್ತಿದ್ದೆವು. ಈ ಹಾಡಲ್ಲಿ ಹೊಸತನ ತರಬೇಕು ಅಂದುಕೊಂಡು ಡಾ. ರಾಜ್‌ ಅವರು ಕರ್ನಾಟಕ ಮ್ಯಾಪ್‌ ಒಳಗಿಂದ ಬರುವ ಹಾಗೆ ಮಾಡಿದರೆ ಚೆನ್ನಾಗಿರುತ್ತೆ ಅಂದುಕೊಂಡೆವು. ಅದಕ್ಕಾಗಿ ಕರ್ನಾಟಕ ಮ್ಯಾಪ್‌ ಇರುವ ದೊಡ್ಡ ಗಾಜಿನ ಬೋರ್ಡ್‌ ರೆಡಿ ಮಾಡಿದೆವು. ಅದನ್ನು ಮರುದಿನ ಶೂಟಿಂಗ್‌ ಲೊಕೇಶನ್‌ಗೆ ತಗೊಂಡು ಹೋಗಿ ಇಟ್ಟೆವು.ಅಣ್ಣಾವ್ರಿಗೆ ಒಂದು ಅಭ್ಯಾಸ, ಔಟ್‌ಡೋರ್‌ ಶೂಟಿಂಗ್‌ ಇದ್ದರೆ ಮಧ್ಯಾಹ್ನ ಊಟ ಮಾಡಿದ ಮೇಲೆ ಒಂದು ವಾಕ್‌ ಹೋಗೋದು. ಅವತ್ತು ನಾನೂ ಪಕ್ಕದಲ್ಲೇ ಇದ್ದ ಕಾರಣ ನನ್ನನ್ನೂ ವಾಕಿಂಗ್‌ಗೆ ಕರೆದ್ರು. ಹೋಗ್ತಾ ಆ ಕಟೌಟ್‌ ಕಾಣಿಸ್ತು, ‘ಏನಿದು?' ಅಂತ ವಿಚಾರಿಸಿದರು. ನಾನು ವಿವರಿಸಿದೆ. ರಾಜ್‌ ಸಿಟ್ಟಾದರು, ‘ಕರ್ನಾಟಕ ಮ್ಯಾಪ್‌ ಒಳಗೆ ಕುವೆಂಪು, ಬೇಂದ್ರೆ, ವಿಶ್ವೇಶ್ವರಯ್ಯನವರಂಥ ಮಹಾನುಭಾವರು ಬರುವ ಹಾಗೆ ಮಾಡಿ, ಅದು ಬಿಟ್ಟು ಯಕಃಶ್ಚಿತ್‌ ರಾಜ್‌ಕುಮಾರ್‌ನನ್ನ ಹಾಕ್ತೀನಿ ಅಂತೀರಲ್ಲ ..' ಎಂದು ತರಾಟೆಗೆ ತಗೆದುಕೊಂಡರು. ನಾವು ಸುಮ್ಮನಾದೆವು. ಆದರೂ ವಿಷಯ ಒಳಗಿಂದಲೇ ಕೊರೆಯುತ್ತಿತ್ತು, ಅವತ್ತು ನಿರ್ದೇಶಕ ಸಿಂಗೀತಂ ಶ್ರೀನಿವಾಸ್‌ ಅವರನ್ನು ಕರೆದು ನಮ್ಮ ಪ್ಲ್ಯಾನ್‌ ಹೇಳಿದೆವು. ಅವರು ಕೂಡಲೇ, ‘ಈ ಕೆಲಸ ನನಗೆ ಬಿಡಿ, ಅವರನ್ನು ನಾನು ಒಪ್ಪಿಸ್ತೀನಿ' ಅಂದರು.

ಮರುದಿನ ಶೂಟಿಂಗ್‌ನಲ್ಲಿ ಆ ಗಾಜಿನ ಬೋರ್ಡ್‌ ರೆಡಿ ಇತ್ತು. ಅದನ್ನು ನೋಡಿದ ರಾಜ್‌ ಅವರು ನಿರ್ದೇಶಕರಲ್ಲಿ, ‘ಅಣ್ಣಾ, ಇದೆಲ್ಲ ಬೇಡ ಅನಿಸುತ್ತೆ, ನಾನು ಇದರಲ್ಲಿ ಬರುವುದು ಚೆನ್ನಾಗಿರಲ್ಲ' ಅಂತೆಲ್ಲ ಪೇಚಾಡಿಕೊಂಡರು. ಆದರೆ ಅವರಾರ‍ಯವತ್ತೂ ನಿರ್ದೇಶಕರ ಮಾತು ಮೀರುತ್ತಿರಲಿಲ್ಲ, ನಿರ್ದೇಶಕರೆಂದರೆ ಅಷ್ಟುಗೌರವ. ಸಿಂಗೀತಂ ಅವರು ‘ನಾವು ಎರಡು ಶಾಟ್‌ ತೆಗೆಯೋಣ ಅಣ್ಣ, ಒಂದು ಈ ಗಾಜಿನ ಬೋರ್ಡ್‌ನ ಮ್ಯಾಪ್‌ನಿಂದ ನೀವು ಬರುವ ಹಾಗೆ, ಇನ್ನೊಂದು ಮಾಮೂಲಿಯಾಗಿ. ಯಾವುದು ಚೆನ್ನಾಗಿ ಬರುತ್ತೋ ಅದನ್ನ ತಗೊಳ್ಳೋಣ' ಅಂದರು. ರಾಜ್‌ ಮರುಮಾತನಾಡಲಿಲ್ಲ. ಕೊನೆಗೂ ಎಲ್ಲರ ಸಹಮತದಲ್ಲಿ ಮ್ಯಾಪ್‌ನಿಂದ ರಾಜ್‌ ಬರುವ ಸೀಕ್ವೆನ್ಸೇ ಉಳಿಯಿತು. ನಂತರ ಥಿಯೇಟರ್‌ನಲ್ಲಿ ಆ ಚಿತ್ರ ಪ್ರದರ್ಶನ ಆರಂಭವಾಯಿತು. ಆ ಸೀನ್‌ ಬರುವಾಗ ಜನರೆಲ್ಲ ಎದ್ದುನಿಂತು ವಿಶಲ್‌ ಹೊಡೆದರು, ಏನು ಚಪ್ಪಾಳೆ, ಶಿಳ್ಳೆ.. ಐದು ಹತ್ತು ನಿಮಿಷ ಜನರ ಸಂಭ್ರಮ ಮೇರೆ ಮೀರಿತ್ತು. ಆ ಎತ್ತರಕ್ಕೆ ಏರಿದ್ದರೂ ತಾನೊಬ್ಬ ಯಕಃಶ್ಚಿತ್‌ ಅಂದುಕೊಳ್ತಿದ್ದದ್ದು ಅಣ್ಣಾವ್ರ ವಿಶೇಷ ಗುಣ. 

-ಸಾ. ರಾ ಗೋವಿಂದು, ಕರ್ನಾಟಕ ಚಲನಚಿತ್ರ ಮಂಡಳಿ ಅಧ್ಯಕ್ಷ