ಡಾ ರಾಜ್‌ಕುಮಾರ್ ಸಹೋದರಿ ನಾಗಮ್ಮ ಅವರು ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ಅವರು ತಮ್ಮ ಸ್ವಂತ ಊರಾದ ಚಾಮರಾಜನಗರದಲ್ಲಿ ವಾಸವಿದ್ದರು. ನಾಗಮ್ಮ ಅವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.
ಡಾ ರಾಜ್‌ಕುಮಾರ್ (Dr Rajkumar) ಸಹೋದರಿ ನಾಗಮ್ಮ (Nagamma) ಅವರು ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ಅವರು ತಮ್ಮ ಸ್ವಂತ ಊರಾದ ಚಾಮರಾಜನಗರದಲ್ಲಿ ವಾಸವಿದ್ದರು. ನಾಗಮ್ಮ ಅವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಅವರಿಗೆ ಇತ್ತೀಚೆಗೆ ಆರೋಗ್ಯದಲ್ಲಿ ವಯೋಸಹಜವಾಗಿ ಸಾಕಷ್ಟು ಏರುಪೇರಾಗಿತ್ತು.
ಅಣ್ಣಾವ್ರ ಸಹೋದರಿ ನಾಗಮ್ಮ ಅವರಿಗೆ ಮೊಮ್ಮಗ ಪುನೀತ್ ರಾಜ್‌ಕುಮಾರ್ (ಅಪ್ಪು) ನಿಧನರಾಗಿದ್ದು ಗೊತ್ತೇ ಇಲ್ಲ. ಅವರಿಗೆ ಖಂಡಿತ ಆ ಸುದ್ದಿ ಆಘಾತ ತರುತ್ತಿದೆ ಎಂಬ ಕಾರಣಕ್ಕೆ ಅವರಿಗೆ ಹೇಳಿರಲೇ ಇಲ್ಲ. ಸಾಯುವ ಕ್ಷಣದವರೆಗೂ ಅವರಿಗೆ ಪುನೀತ್(Puneeth Rajkumar) ಅವರು ಈ ಲೋಕದಲ್ಲಿ ಇಲ್ಲ ಅಂಬ ಸುದ್ದಿಯೇ ಗೊತ್ತಿಲ್ಲ. ಇದೀಗ ತಮ್ಮ ಮೊಮ್ಮಗನ ಬಳಿ ನಾಗಮ್ಮ ಅವರು ಸೇರಿಕೊಂಡಿದ್ದಾರೆ ಎನ್ನಬಹುದು.
ಡಾ ರಾಜ್‌ಕುಮಾರ್ ಅವರ ಹುಟ್ಟೂರು ಚಾಮರಾಜನಗರ ಜಿಲ್ಲೆ ಎಂಬುದು ಹಲವರಿಗೆ ಗೊತ್ತಿದೆ. ಅಲ್ಲಿಯೇ ಡಾ ರಾಜ್‌ಕುಮಾರ್ ಹೋಗಿದ್ದಾಗ ಕಾಡುಗಳ್ಳ ವೀರಪ್ಪನ್ (30 ಜುಲೈ 2000) ಭೀಮನ ಅಮಾವಾಸ್ಯೆ ದಿನ ಅಪಹರಣ ಮಾಡಿದ್ದರು. 108 ದಿನಗಳ ಬಳಿಕ ಆತ ತನ್ನ ಬೇಡಿಕೆ ಇಡೇರಿಸಿಕೊಂಡು ಡಾ ರಾಜ್‌ಕುಮಾರ್ ಅವರನ್ನು ಬಿಡುಗಡೆ ಮಾಡಿದ್ದ. ಬಳಿಕ ಡಾ ರಾಜ್‌ಕುಮಾರ್ ಅವರು 12 ಏಪ್ರಿಲ್ 2006ರಲ್ಲಿ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
ಒಟ್ಟಿನಲ್ಲಿ, ಇದೀಗ ಡಾ ರಾಜ್‌ಕುಮಾರ್ (Shivarajkumar) ಅವರ ಸಹೋದರಿ ನಾಗಮ್ಮ ಅವರು ತಮ್ಮ 92ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಇತ್ತೀಚೆಗಷ್ಟೇ ಶಿವಣ್ಣ ದಂಪತಿಗಳು ಅವರನ್ನು ಚಾಮರಾಜನಗರಕ್ಕೆ ಹೋಗಿ ಭೇಟಿಯಾಗಿ ಬಂದಿದ್ದರು. ಇದೀಗ ನಾಗಮ್ಮ ಅವರು ನಿಧನರಾಗಿದ್ದು, ಅಣ್ಣಾವ್ರ ಕುಟುಂಬದಲ್ಲಿ ಹಿರೀಜೀವವನ್ನು ಕಳೆದುಕೊಂಡ ಸಹಜ ದುಃಖ ಮನೆಮಾಡಿದೆ.
