ಮಾಡೆಲ್ ಮೀರಾ ಮಿಥುನ್ ತಮಿಳು ನಟಿ ತ್ರಿಷಾ ಕೃಷ್ಣನ್‌ಗೆ ಅವಾಜ್ ಹಾಕಿದ್ದಾರೆ. ನನ್ನನ್ನು ಕಾಪಿ ಮಾಡ್ವೇಡಿ ಅಂತ ಟ್ವೀಟ್ ಟಾಂಗ್ ಕೊಟ್ಟಿದ್ದಾರೆ. ಸದಾ ಕಾಂಟ್ರವರ್ಶಿಯಲ್ ಪೋಸ್ಟ್‌ಗಳನ್ನೇ ಮಾಡುವ ಮಾಡೆಲ್, ಹೊಸ ನಟಿ ಮೀರಾ ಮಿಥುನ್ ತಾನಾ ಸೇರ್‌ನ್‌ಂದ ಕೂಟಂ ಹಾಗೂ 8 ತೋಟಕಲ್ ನಟಿಸಿದ್ದಾರೆ.

ಏನಾದರೊಂದು ತಗಾದೆ ತೆಗೆಯೋ ನಟಿ ಈ ಬಾರಿ ಫೇಮಸ್ ನಟಿ ತ್ರಿಷಾ ಅವರಿಗೆ ಟಾಂಗ್ ಕೊಟ್ಟಿದ್ದಾರೆ. ಪೇಮಸ್ ನಟಿ ತ್ರಿಷಾ ಅವರಿಗೆ ಟಾಂಗ್ ಕೊಟ್ಟು ಮೀರಾ ಮಿಥುನ್ ಸದ್ಯ ಸುದ್ದಿಯಾಗಿದ್ದಾರೆ.

ತ್ರಿಷಾ ಸಂಭಾವನೆ 1 ಕೋಟಿ!

ಲೇಟೆಸ್ಟ್‌ ಟ್ವೀಟ್‌ನಲ್ಲಿ ನಟಿ ತ್ರಿಷಾಗೆ ವಾರ್ನ್ ಮಾಡಿರೋ ಮೀರಾ ಮಿಥುನ್, ನನ್ನನ್ನು ಕಾಪಿ ಮಾಡ್ಬೇಡಿ ಎಂದು ವಾರ್ನ್ ಮಾಡಿದ್ದಾರೆ. ತ್ರಿಶಾ ಇದು ನನ್ನ ಲಾಸ್ಟ್ ವಾರ್ನಿಂಗ್. ನನ್ನ ಹೇರ್‌ಸ್ಟೈಲ್, ಪೀಚರ್ ಜೊತೆ ಫೋಟೋ ಮಾರ್ಫ್ ಮಾಡುವುದನ್ನು ನಾನು ನೋಡಿದರೆ ಕಾನೂನು ಕ್ರಮ ಕೈಗೊಳ್ಳುತ್ತೇನೆ. ನೀವೇನು ಮಾಡ್ತಿದ್ದೀರಿ ಎಂಬುದು ನಿಮಗೆ ಗೊತ್ತು.ಗ್ರೋ ಅಪ್, ಗೆಟ್‌ ಎ ಲೈಫ್ ಎಂದು ಬರೆದಿದ್ದಾರೆ.

ತಮಿಳು ಬಿಗ್‌ಬಾಸ್‌ನಲ್ಲಿ ಕಾಣಿಸಿಕೊಂಡಿದ್ದ ಮೀರಾ ಹೆಸರು ಫ್ರಾಡ್‌ ಕೇಸ್‌ಗಳಲ್ಲಿಯೂ ಕೇಳಿ ಬಂದಿತ್ತು. 96 ಸಿನಿಮಾ ಮೂಲಕ ಭಾರೀ ಸದ್ದು ಮಾಡಿದ್ದ ತ್ರಿಷಾ ಮಣಿರತ್ನಂ ಅವರ ಪೊನ್ನಿಯಿಂ ಸೆಲ್ವಂ ಸಿನಿಮಾದಲ್ಲಿ ಕೆಲಸ ಮಾಡಲಿದ್ದಾರೆ. ಇದರಲ್ಲಿ ವಿಕ್ರಂ, ಐಶ್ವರ್ಯಾ ರೈ, ಆದಿತಿ ರಾವ್, ಕಾರ್ತಿ, ಜಯಂ ರವಿಯೂ ನಟಿಲಿದ್ದಾರೆ.

#NewsIn100Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್
"