ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಸಾರಥ್ಯದಲ್ಲಿ ಬರ್ತಾಯಿದೆ ನಾಗಾಭರಣ ಸಿನಿಮಾ

entertainment | Monday, February 12th, 2018
Suvarna Web Desk
Highlights

ಒಂದು ಚಿತ್ರಕ್ಕೆ ಎಷ್ಟು ಮಂದಿ ನಿರ್ಮಾಪಕರಾಗಲು ಸಾಧ್ಯ? ಇಬ್ಬರು, ಮೂವರು, ಐದು ಮಂದಿ. ಕ್ರೌಡ್ ಫಂಡಿಂಗ್  ಮಾಡಿದರೂ ಅತಿ ಹೆಚ್ಚು ಅಂದರೆ 50 ಮಂದಿ ನಿರ್ಮಾಪಕರಾಗಬಹುದು. ಆದರೆ, 20 ಲಕ್ಷ ಮಂದಿ ನಿರ್ಮಾಪಕರು. ಅಚ್ಚರಿಯಾದರು ಇದು ನಿಜ. ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ, ಭಾರತೀಯ ಚಿತ್ರರಂಗದಲ್ಲೇ ಇಷ್ಟು ಮಂದಿ  ನಿರ್ಮಾಪಕರಿಂದ ಒಂದು ಸಿನಿಮಾ ತಯಾರಾಗುತ್ತಿರುವುದು ಇದೇ ಮೊದಲು!

ಬೆಂಗಳೂರು (ಫೆ.12): ಒಂದು ಚಿತ್ರಕ್ಕೆ ಎಷ್ಟು ಮಂದಿ ನಿರ್ಮಾಪಕರಾಗಲು ಸಾಧ್ಯ? ಇಬ್ಬರು, ಮೂವರು, ಐದು ಮಂದಿ. ಕ್ರೌಡ್ ಫಂಡಿಂಗ್  ಮಾಡಿದರೂ ಅತಿ ಹೆಚ್ಚು ಅಂದರೆ 50 ಮಂದಿ ನಿರ್ಮಾಪಕರಾಗಬಹುದು. ಆದರೆ, 20 ಲಕ್ಷ ಮಂದಿ ನಿರ್ಮಾಪಕರು. ಅಚ್ಚರಿಯಾದರು ಇದು ನಿಜ. ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ, ಭಾರತೀಯ ಚಿತ್ರರಂಗದಲ್ಲೇ ಇಷ್ಟು ಮಂದಿ  ನಿರ್ಮಾಪಕರಿಂದ ಒಂದು ಸಿನಿಮಾ ತಯಾರಾಗುತ್ತಿರುವುದು ಇದೇ ಮೊದಲು!


ಇಂಥ ದಾಖಲೆಯ ಸಿನಿಮಾ ಹೆಸರು ‘ಕಾನೂರಾಯಣ’. ಟಿ ಎಸ್ ನಾಗಾಭರಣ ನಿರ್ದೇಶನದ ಸಿನಿಮಾ ಇದು.  ಸ್ಕಂದ ಅಶೋಕ್, ಸೋನು ಗೌಡ ಚಿತ್ರದ ಜೋಡಿ. ಉಳಿದಂತೆ ದೊಡ್ಡಣ್ಣ, ಗಿರಿಜಾ ಲೋಕೇಶ್, ಕರಿಸುಬ್ಬು, ಕಡ್ಡಿಪುಡಿ  ಚಂದ್ರು, ನೀನಾಸಂ ಅಶ್ವತ್ಥ್, ಮನು ಹೆಗ್ಗಡೆ, ಜಾನ್ಹವಿ ಜ್ಯೋತಿ  ಮುಂತಾದವರು ಚಿತ್ರದ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ವಿಶೇಷ ಅಂದರೆ ಈ ಚಿತ್ರದ ಮೂಲಕ ಶ್ರೀ  ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅವರು ಸಿನಿಮಾ ಕ್ಷೇತ್ರಕ್ಕೆ ಬರುತ್ತಿದ್ದಾರೆ.
20  ಲಕ್ಷ ಮಂದಿ ನಿರ್ಮಾಪಕರು ಬೇರ‌್ಯಾರೂ  ಅಲ್ಲ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ  ಯೋಜನೆ ಸ್ವಸಹಾಯ ಸಂಘಗಳ ಒಕ್ಕೂಟದ ಸದ್ಯಸರು. ಧರ್ಮಸ್ಥಳದ ಸಾರಥ್ಯದಲ್ಲಿ ಯುವಕರಿಗೆ  ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ದಿ ಯೋಜನೆ ಮೂಲಕ ಸಾವಿರಾರು  ಮಂದಿಗೆ ಉದ್ಯೋಗ ನೀಡಲಾಗಿದೆ. ಇದರಲ್ಲಿ ಸದಸ್ಯರಾಗಿರುವವ 20 ಲಕ್ಷ ಮಂದಿಯೇ ‘ಕಾನೂರಾಯಣ’ ಚಿತ್ರದ ನಿರ್ಮಾಪಕರು. ಎಲ್ಲರು ವಂತಿಕೆ ರೂಪದಲ್ಲಿ ಈ  ಚಿತ್ರಕ್ಕೆ ಹಣ ಹೂಡಿದ್ದಾರೆ. ಒಂದು ಒಳ್ಳೆಯ ಉದ್ದೇಶದಿಂದ ಈ  ಸಿನಿಮಾ ಮಾಡುತ್ತಿರುವ ಕಾರಣ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸದಸ್ಯರು ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

ಇದೊಂದು ಆರ್ಥಿಕ ಸ್ವಾಲಂಭನೆ ಕುರಿತಾದ ಸಿನಿಮಾ. ಅಂದರೆ  ನಗರ ಪ್ರದೇಶದಲ್ಲಿ ಸಂಬಳ ಬರುತ್ತದೆ. ಅದನ್ನಿಟ್ಟುಕೊಂಡು ಪ್ರತಿಯೊಬ್ಬರು ತಮ್ಮ ಜೀವನ ಪ್ಲಾನ್ ಮಾಡಿಕೊಳ್ಳುತ್ತಾರೆ ಆದರೆ, ಹಳ್ಳಿಗಳಲ್ಲಿ ತಿಂಗಳ ಸಂಬಳ ಅಂತ ಇರಲ್ಲ. ಇಲ್ಲಿ ದುಡಿಯುವ ಕೈಗಳಿಗೆ ವರ್ಷಕ್ಕೆ ಬರುವ ಒಂದೆರಡು ಪಸಲಿನ ಆದಾಯವನ್ನೇ  ಮುಂದಿಟ್ಟುಕೊಂಡು ಜೀವನ ಕಟ್ಟಿಕೊಳ್ಳುತ್ತಿದ್ದಾರೆ. ನಗರ ಮತ್ತು ಹಳ್ಳಿಗಳ ಈ ಆರ್ಥಿಕತೆಯ ಪರಿಸ್ಥಿಯನ್ನೇ ಚಿತ್ರದ
ಕಥಾವಸ್ತುವಿನ ರೂಪದಲ್ಲಿ ತೋರಿಸಲಾಗುತ್ತಿದೆಯಂತೆ.  ನಗರಗಳಂತೆ ಹಳ್ಳಿಗಳಲ್ಲೂ ಆರ್ಥಿಕ ಸ್ವಾವಲಂಬನೆ ಬರಬೇಕು. ಪ್ರತಿಯೊಬ್ಬರಿಗೂ ಸಂಬಳ ಸಿಗಬೇಕು ಎಂಬುದೇ ವೀರೇಂದ್ರ ಹೆಗ್ಗಡೆ ಅವರ ಕನಸು. ಅದನ್ನೇ ಅವರು ತಮ್ಮ ಶ್ರೀ ಕ್ಷೇತ್ರ  ಧರ್ಮಸ್ಥಳ ಗ್ರಾಮಾಭಿವೃದ್ಧಿ  ಯೋಜನೆ ಸ್ವಸಹಾಯ ಸಂಘಗಳ ಒಕ್ಕೂಟದ ಸದ್ಯಸರ ಮೂಲಕ ಮಾಡುತ್ತಿದ್ದಾರೆ. ಟಿ ಎಸ್ ನಾಗಾಭರಣ ಕೈಗೆತ್ತಿಕೊಂಡಿರುವ ಕತೆ ಕೂಡ ಇವರ ಕನಸಿಗೆ ಹತ್ತಿರವಾಗಿರುವ ಕಾರಣ ಶ್ರೀ ಕ್ಷೇತ್ರ  ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ  ಸ್ವಸಹಾಯ ಸಂಘಗಳ ಒಕ್ಕೂಟ ಚಿತ್ರದ ನಿರ್ಮಾಪಕರನ್ನಾಗಿಸಿದ್ದಾರೆ.

Comments 0
Add Comment

    ಹೇಗಿದೆ ಇಂದು ತೆರೆಕಂಡ ರ್ಯಾಂಬೋ ೨ ಸ್ಯಾಂಡಲ್’ವುಡ್ ಚಿತ್ರ?

    entertainment | Friday, May 18th, 2018