ಖ್ಯಾತ ನಿರ್ದೇಶಕ ಮಣಿರತ್ನಂ ಕನ್ನಡ ಸಿನಿಮಾ ಮಾಡೋದು ಗ್ಯಾರಂಟಿ | ಕನ್ನಡದಲ್ಲೊಂದು ಅದ್ಭುತ ಸಿನಿಮಾ ಮಾಡ್ತಾರೆ ಮಣಿರತ್ನಂ | ರಾಜೇಂದ್ರ ಸಿಂಗ್ ಬಾಬು ಅವರು ಕೂಡ ಕನ್ನಡ ಸಿನಿಮಾ ನಿರ್ದೇಶಿಸಿ ಅಂತ ಕೇಳಿಕೊಂಡಿದ್ದಾರೆ. ಅದಕ್ಕೆ ಅವರು ಆಯ್ತು ಅಂತಲೂ ಅಂದಿದ್ದಾರೆ. ಆದ್ರೆ ಅದು ಶುರುವಾಗುವುದು ಯಾವಾಗ, ಏನು ಕತೆ ಅದೆಲ್ಲ ನನಗೆ ಗೊತ್ತಿಲ್ಲ’ ಅನ್ನೋದು ನಟಿ ಸುಹಾಸಿನಿಯವರ ಉತ್ತರ.   

ಬೆಂಗಳೂರು (ಅ. 01): ಹೆಸರಾಂತ ನಿರ್ದೇಶಕ ಮಣಿರತ್ನಂ ಕನ್ನಡ ಸಿನಿಮಾ ಮಾಡುವುದು ಗ್ಯಾರಂಟಿ.- ಹಾಗಂತ ಹೇಳಿಕೊಂಡಿದ್ದಾರೆ ಸುಹಾಸಿನಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಣಿರತ್ನಂ ಪತ್ನಿ ಸುಹಾಸಿನಿ ಹೀಗೆ ಹೇಳುತ್ತಾರೆಂದರೆ, ಮಣಿರತ್ನಂ ಕನ್ನಡಕ್ಕೆ ಮತ್ತೆ ಬರಲಿದ್ದಾರೆನ್ನುವುದು ಬಹುತೇಕ ಖಚಿತ. ಆದ್ರೆ ಅವರು ಬರುವುದು ಯಾವಾಗ ಅನ್ನುವುದು ಕನ್ಫರ್ಮ್ ಆಗಿಲ್ಲ. ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರದ
ಸುದ್ದಿಗೋಷ್ಠಿಯಲ್ಲಿ ಅವರು ಈ ಮಾತು ಹೇಳಿದರು.

‘ಮಣಿರತ್ನಂ ಅವರಿಗೆ ಕನ್ನಡದ ಜತೆಗೆ ಭಾವನಾತ್ಮಕ ಸಂಬಂಧವಿದೆ. ಅದೇ ಸೆಂಟಿಮೆಂಟ್ ಕಾರಣಕ್ಕೆ ಕನ್ನಡದಲ್ಲಿ ಮತ್ತೊಂದು ಸಿನಿಮಾ ನಿರ್ದೇಶನ ಮಾಡ್ಬೇಕು ಎನ್ನುವ ಆಸೆ ಅವರಿಗೂ ಇದೆ. ಅಷ್ಟೇ ಅಲ್ಲ, ರಾಜೇಂದ್ರ ಸಿಂಗ್ ಬಾಬು ಅವರು ಕೂಡ ಕನ್ನಡ ಸಿನಿಮಾ ನಿರ್ದೇಶಿಸಿ ಅಂತ ಕೇಳಿಕೊಂಡಿದ್ದಾರೆ. ಅದಕ್ಕೆ ಅವರು ಆಯ್ತು ಅಂತಲೂ ಅಂದಿದ್ದಾರೆ. ಆದ್ರೆ ಅದು ಶುರುವಾಗುವುದು ಯಾವಾಗ, ಏನು ಕತೆ ಅದೆಲ್ಲ ನನಗೆ ಗೊತ್ತಿಲ್ಲ’ ಅನ್ನೋದು ನಟಿ ಸುಹಾಸಿನಿಯವರ ಉತ್ತರ.