ಮುಂಬೈ (ನ. 06): ದೀಪಿಕಾ ಪಡುಕೋಣೆ - ರಣವೀರ್ ಸಿಂಗ್ ಮದುವೆಗೆ ದಿನಗಣನೆ ಆರಂಭವಾಗಿದೆ. ಹಸೆಮಣೆ ಏರುವ ತವಕದಲ್ಲಿದ್ದಾರೆ ತಾರಾ ಜೋಡಿಗಳು. ಇಬ್ಬರ ಮನೆಯಲ್ಲೂ ಮದುವೆ ತಯಾರಿಗಳು ನಡೆದಿವೆ. ಮೊನ್ನೆ ಮೊನ್ನೆಯಷ್ಟೇ ದೀಪಿಕಾ ಪಡುಕೋಣೆ ನಾಂದಿ ಶಾಸ್ತ್ರ ನಡೆದಿದೆ. 

ಹಸೆಮಣೆ ಏರುವ ಮುನ್ನ ಪೂಜೆಯಲ್ಲಿ ಭಾಗಿಯಾದ ದೀಪಿಕಾ ಪಡುಕೋಣೆ

ಇಂದು ರಣವೀರ್ ಸಿಂಗ್ ಮನೆಯಲ್ಲಿ ಅರಿಶಿನ ಶಾಸ್ತ್ರ ನಡೆದಿದೆ. ರಣವೀರ್ ಸಿಂಗ್ ಬಿಳಿ ಬಣ್ಣದ ಪೈಜಮ ಧರಿಸಿ ಮದುಮಗನ ರೀತಿಯಲ್ಲಿ ಕಂಗೊಳಿಸುತ್ತಿದ್ದಾರೆ. ಈ ಪೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 

ಡಿಪ್ಪಿ-ರಣ್‌ವೀರ್ ಮದ್ವೆ ಪತ್ರಿಕೆ ನೋಡಿದ್ರಾ?

ಇದೇ ತಿಂಗಳ 14 ಹಾಗೂ 15 ರಂದು ಇಟಲಿಯಲ್ಲಿ ದಾಂಪತ್ಯಕ್ಕೆ ಕಾಲಿಡಲಿದ್ದಾರೆ ದೀಪಿಕಾ- ರಣವೀರ್. ನಂತರ ಬೆಂಗಳೂರು, ಮುಂಬೈನಲ್ಲಿ  ಅದ್ಧೂರಿ ಆರತಕ್ಷತೆ ನಡೆಯಲಿದೆ.