ಬೆಂಗಳೂರು (ಆ. 16): 2018 ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಉತ್ತಮ ಚಿತ್ರ ಅವಾರ್ಡ್ ಪಡೆದ ನಾತಿಚರಾಮಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.  ಕನ್ನಡದ ಚಿತ್ರವೊಂದಕ್ಕೆ ಪ್ರಶಸ್ತಿ ಬಂದಿದೆ ಎಂದು ಹೆಮ್ಮೆಪಡುವಾಗಲೇ ಈ ಚಿತ್ರಕ್ಕೆ ಕ್ಯಾತೆ ಎದುರಾಗಿದೆ. 

66 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ; ಯಾರ್ಯಾರಿಗೆ ಪ್ರಶಸ್ತಿ ಗರಿ? ಇಲ್ಲಿದೆ ನೋಡ!

ನಾತಿಚರಾಮಿ ಚಿತ್ರಕ್ಕೆ 5 ಪ್ರಶಸ್ತಿಗಳು ಲಭಿಸಿವೆ. ಈ ಐದು ಪ್ರಶಸ್ತಿಯನ್ನು ತಡೆ ಹಿಡಿಯಬೇಕೆಂದು ಕೋರಿ ನಿರ್ದೇಶಕ ದಯಾಳ್ ಪದ್ಮನಾಭನ್ ಅರ್ಜಿ ಸಲ್ಲಿಸಿದ್ದಾರೆ. 

66 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಬಿ ಎಸ್ ಲಿಂಗದೇವರು ಹಾಗೂ ಎಂ ರಮೇಶ್ ಇದ್ದಿದ್ದರು.  ಬಿ ಎಸ್ ಲಿಂಗದೇವರು ಅಕ್ಕ ಕಮ್ಯುನಿಕೇಶನ್ ಪ್ರೈವೆಟ್ ಲಿಮಿಟೆಡ್ ಕಂಪನಿಯ ನಿರ್ದೇಶಕರು. ನಾತಿ ಚರಾಮಿ ಚಿತ್ರದ ಎಡಿಟಿಂಗ್ ಗೆ ಅಕ್ಕ ಕಮ್ಯುನಿಕೇಶನ್ ಸಹಾಯ ಮಾಡಿದೆ. ಹಾಗಾಗಿ ಲಿಂಗದೇವರು ಅವರು ನಾತಿಚರಾಮಿ ಪರ ಬ್ಯಾಟಿಂಗ್ ಮಾಡಿದ್ದಾರೆ ಎಂದು ದಯಾಳ್ ಆರೋಪಿಸಿದ್ದಾರೆ. 

66 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ; ಇಲ್ಲಿದೆ ಪ್ರಶಸ್ತಿ ವಿವರ

ಈ ಬಗ್ಗೆ ಲಿಂಗದೇವರು ಅವರನ್ನು ಸುವರ್ಣ ನ್ಯೂಸ್,ಕಾಂ ಸಂಪರ್ಕಿಸಿದಾಗ, ನನಗಿದರ ಬಗ್ಗೆ ಮಾಹಿತಿ ಇಲ್ಲ. ತಿಳಿದುಕೊಂಡು ಮಾತನಾಡುತ್ತೇನೆ ಎಂದು ಉತ್ತರಿಸಿದ್ದಾರೆ. 

ದಯಾಳ್ ನಿರ್ದೇಶನದ ‘ಆ ಕರಾಳ ರಾತ್ರಿ’ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಮೆಚ್ಚುಗೆ ಪಡೆದಿತ್ತು. ಆದರೂ ಯಾಕೆ ಆ ಕರಾಳರಾತ್ರಿಯನ್ನು ಪರಿಗಣಿಸಿಲ್ಲ ಎಂದು ದಯಾಳ್ ಪ್ರಶ್ನಿಸಿದ್ದಾರೆ.