ಒಂದು ಕಾಲದ ನೀಲಿ ಚಿತ್ರ ತಾರೆ, ಬಾಲಿವುಡ್ ನಟಿ ಸನ್ನಿ ಲಿಯೋನ್ ಕೇರಳ ಪ್ರವಾಹಕ್ಕೆ ೫ ಕೋಟಿ ನೀಡಿದ್ದಾರೆ ಎಂಬ ಸುದ್ದಿ ಸಖತ್ ವೈರಲ್ ಆಗುತ್ತಿದೆ. ಹಾಗಾದರೆ ಇದು ಸತ್ಯಾನಾ? ...

ತಿರುವನಂತಪುರಂ: ಮಹಾಮಳೆಗೆ ಇಡೀ ಕೇರಳವೇ ಬೆಚ್ಚಿಬಿದ್ದಿದೆ. ಕೆಲವು ನಟ, ನಟಿಯರು ತಮ್ಮಿಂದ ಆದ ಸಹಾಯ ಮಾಡಿದ್ದಾರೆ, ಮಾಡುತ್ತಿದ್ದಾರೆ. ಕ್ರೀಡಾಪಟುಗಳು ಸಹ ಸಹಾಯ ಮಾಡುವತ್ತ ಹೆಜ್ಜೆ ಇಡುತ್ತಿದ್ದಾರೆ.

ಮಾದಕ ಬೆಡಗಿ ಸನ್ನಿ ಲಿಯೋನ್ ಕೇರಳ ಪ್ರವಾಹ ಪರಿಹಾರ ನಿಧಿಗೆ 5 ಕೋಟಿ ರೂ. ನೀಡಿದ್ದಾರೆ ಎಂದು ಮಲೆಯಾಳಂ ಚಿತ್ರದ ನಿರ್ದೇಶಕರೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಕೆಲ ನಾಗರಿಕರು ಪ್ರಶ್ನೆ ಮಾಡಿದ್ದು ಹಣದವ ಅಂಬಾನಿ ಎಲ್ಲಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ.

ಮುಗ್ಧ ಬಾಲಕಿ ಸನ್ನಿ ಲಿಯೋನ್ ಅಡಲ್ಟ್ ಸ್ಟಾರ್ ಆಗಿದ್ದು ಹೇಗೆ?

ಆದರೆ ಸನ್ನಿ ಲಿಯೋನ್ ಹಣ ದೇಣಿಗೆ ನೀಡಿರುವ ಬಗ್ಗೆ ಇಲ್ಲಿಯವರೆಗೆ ಯಾವುದೆ ಸ್ಪಷ್ಟನೆ ನೀಡಿಲ್ಲ. ಮಾಧ್ಯಮವೊಂದು ಸನ್ನಿಗೆ ಈ ಬಗ್ಗೆ ಪ್ರಶ್ನೆ ಮಾಡಿದರೆ ಇದು ತೀರಾ ವೈಯಕ್ತಿಕ ವಿಚಾರ. ಆ ಬಗ್ಗೆ ಮಾತನಾಡುವುದಿಲ್ಲ ಎಂಬ ಪ್ರತಿಕ್ರಿಯೆ ಬಂದಿದೆ.


Scroll to load tweet…