ಸನ್ನಿ ಲಿಯೋನ್ ಮತ್ತೊಂದು ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಇಲ್ಲಿ ಅವರ ಮಾದಕ ಮೈಮಾಟ ಮುಖ್ಯವಾಗುತ್ತಿಲ್ಲ. ಬದಲಾಗಿ ಅವರ ಜೀವನದ ಕತೆಯನ್ನು ತೆರೆ ಮೇಲೆ ತರಲಾಗುತ್ತಿದೆ. ಏನಿದು ಹೊಸ ಸುದ್ದಿ.. ಮುಂದೆ ಓದಿ..
ಒಂದು ಕಾಲದ ನೀಲಿ ಚಿತ್ರ ತಾರೆ, ಬಾಲಿವುಡ್ ನಟಿ ಸನ್ನಿ ಲಿಯೋನ್ ಜೀವನದ ಕತೆ ಆಧರಿಸಿದ ‘ಕರೆಂಜಿತ್ ಕೌರ್ ದಿ ಅನ್ ಟೋಲ್ಡ್ ಸ್ಟೋರಿ ಆಫ್ ಸನ್ನಿ ಲಿಯೋನ್’, ವೆಬ್ ಸೀರಿಸ್ ನ ಟೀಸರ್ ಬಿಡುಗಡೆಯಾಗಿದೆ. ಸ್ವತಃ ಸನ್ನಿ ಲಿಯೋನ್ ಈ ಬಗ್ಗೆ ಟ್ವೀಟ್ ಮಾಡಿ ವಿವರ ಹಂಚಿಕೊಂಡಿದ್ದಾರೆ.
ಮುಗ್ಧ ಬಾಲಕಿಯಾಗಿದ್ದ ಸನ್ನಿ ಲಿಯೋನ್ ಅಡಲ್ಟ್ ಸ್ಟಾರ್ ಆಗಿ ಬೆಳೆದ ಕತೆಯೇ ವೆಬ್ ಸೀರಿಸ್ ನ ಜೀವಾಳ. 40 ಸೆಕೆಂಡ್‌ಗಳ ಪ್ರೋಮೋದಲ್ಲಿ ಸನ್ನಿ ಜೀವನಕ್ಕೆ ಸಂಬಂಧಿಸಿದ ವಿವಿಧ ಫೋಟೋ ಬಳಕೆ ಮಾಡಿಕೊಳ್ಳಲಾಗಿದೆ.
ಇದೆಂಥ ಫೋಟೋ ಹಂಚಿಕೊಂಡಳು ಸನ್ನಿ ಲಿಯೋನ್!
ಸನ್ನಿ ಕಾಣಿಸಿಕೊಂಡ ಮ್ಯಾಗಜೀನ್ ಮುಖಪುಟಗಳು, ರಾಜಕೀಯ ಪಕ್ಷವೊಂದು ಸನ್ನಿಯ ಕಾರ್ಯಕ್ರಮಕ್ಕೆ ನಿಷೇಧ ಹೇರಿದ ವಿಚಾರ, ಅದಕ್ಕೆ ಸಂಬಂಧಿಸಿದ ದಿನ ಪತ್ರಿಕೆಯ ತುಣುಕು ಎಲ್ಲವನ್ನು ಬಳಸಿಕೊಳ್ಳಲಾಗಿದೆ.ನನ್ನ ಜೀವನ ಸದ್ಯದಲ್ಲೇ ತೆರದ ಪುಸ್ತಕವಾಗಲಿದೆ ಎಂದು ಸನ್ನಿ ತಮ್ಮ ಟ್ವಿಟರ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೇ ಶೂಟಿಂಗ್ ಗೆ ಸಂಬಂಧಿಸಿದ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಜುಲೈ 16ರಂದು ಚಿತ್ರದ ಪ್ರೀಮಿಯರ್ ನಡೆಯಲಿದೆ.
