Asianet Suvarna News Asianet Suvarna News

ಧರ್ಮ ಕೀರ್ತಿರಾಜ್‌ ಚಿತ್ರಕ್ಕೆ ಅನುಷಾ ನಾಯಕಿ?

ಒಂದು ವಾರದ ಹಿಂದೆ​ಯಷ್ಟೆಧರ್ಮ ಕೀರ್ತಿ​ರಾಜ್‌ ನಟ​ನೆಯ ‘ಚಾಣಾಕ್ಷ’ ಚಿತ್ರ ಚಿತ್ರ​ಮಂದಿ​ರಕ್ಕೆ ಬಂದು ಹೋಯಿತು. ಈಗ ಅದ​ರ ಬೆನ್ನಲ್ಲೇ ಅವರ ಹೊಸ ಸಿನಿಮಾ ಬರು​ತ್ತಿದೆ. ಹೆಸರು ‘ಖಡ​ಕ್‌’ ಎಂಬುದು.

Dharma Keerthiraj to act with Anushka rai in chanaksha film
Author
Bengaluru, First Published Apr 3, 2019, 10:43 AM IST

ಎಂದಿ​ನಂತೆ ನಟ ದರ್ಶನ್‌ ಅವರೇ ಈ ಚಿತ್ರದ ಮುಹೂ​ರ್ತಕ್ಕೂ ಬಂದ ಚಾಲನೆ ಕೊಟ್ಟಿ​ದ್ದಾರೆ. ಈಗ ಚಿತ್ರಕ್ಕೆ ನಾಯಕಿ ಆಯ್ಕೆ ಆಗಿ​ದ್ದಾರೆ. ಧರ್ಮ ಕೀರ್ತಿ​ರಾಜ್‌ ಜತೆ ಹೆಜ್ಜೆ ಹಾಕಲು ರೆಡಿ​ಯಾ​ಗಿ​ರುವ ನಾಯಕಿ ಹೆಸರು ಅನುಷಾ ರೈ.

ಅನುಷಾ ಈ ಹಿಂದೆ ‘ಮಹಾ​ನು​ಭಾ​ವ​ರು’, ‘ಗೋಸಿ​ಗ್ಯಾಂಗ್‌’, ‘ಬಿಎಂಡ​ಬ್ಲ್ಯೂ’, ‘ಕರ್ಷ​ಣಂ’ ಚಿತ್ರ​ಗ​ಳಲ್ಲಿ ನಾಯ​ಕಿ​ಯಾಗಿ ನಟಿ​ಸಿ​ದ​ವರು. ಹಾಗೆ ಕಿರು​ತೆ​ರೆ​ಯಲ್ಲೂ ಮುಖ ತೋರಿ​ಸಿದ ಪ್ರತಿ​ಭೆ. ‘ರಾಜ​ಕು​ಮಾ​ರಿ’, ‘​ನಾ​ಗ​ಕ​ನ್ನಿ​ಕೆ’, ‘​ಅ​ಣ್ಣ​ಯ್ಯ’ ಮುಂತಾದ ಧಾರಾ​ವಾ​ಹಿ​ಗ​ಳಲ್ಲಿ ನಟಿ​ಸಿ​ದ್ದಾರೆ. ಈಗ ‘ಖಡ​ಕ್‌’ ಚಿತ್ರಕ್ಕೆ ನಾಯ​ಕಿ​ಯಾ​ಗುವ ಮೂಲಕ ಮತ್ತೊಂದು ಮಾಸ್‌ ಕರ್ಮ​ಷಿ​ಯಲ್‌ ಚಿತ್ರ​ದಲ್ಲಿ ಕಾಣಿ​ಸಿ​ಕೊ​ಳ್ಳು​ವು​ದಕ್ಕೆ ಹೊರ​ಟಿ​ದ್ದಾರೆ. ರಾಜ​ರತ್ನ ಎಂಬು​ವ​ವರು ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳು​ತ್ತಿ​ದ್ದಾರೆ. ಈಗಾ​ಗಲೇ ಚಿತ್ರೀ​ಕ​ರಣ ಶುರು​ವಾ​ಗಿದೆ. ಈ ಚಿತ್ರ​ದಲ್ಲಿ ವಿಲನ್‌ ಆಗಿ ಕಾಣಿ​ಸಿ​ಕೊ​ಳ್ಳು​ತ್ತಿ​ರು​ವುದು ಬಾಲಿ​ವು​ಡ್‌ನ ಕಬೀರ್‌ ದುಹಾನ್‌ ಸಿಂಗ್‌. ವಲ್ಲಿ ಹಾಗೂ ಸಿದ್ದ​ರಾ​ಮಯ್ಯ ಸಿಂಗಾ​ಪುರ ಈ ಚಿತ್ರ​ವನ್ನು ನಿರ್ಮಿ​ಸು​ತ್ತಿ​ದ್ದಾರೆ.

Follow Us:
Download App:
  • android
  • ios