ಸುಮನ್‌ ಜಾದೂಗರ್‌ ನಿರ್ದೇಶನದ ಈ ಚಿತ್ರಕ್ಕಿನ್ನು ಟೈಟಲ್‌ ಫಿಕ್ಸ್‌ ಆಗಿಲ್ಲ. ಚಿತ್ರದ ಪೂರ್ವಭಾವಿ ಸಿದ್ಧತೆ ನಡುವೆ ಈಗ ಚಿತ್ರತಂಡ, ನಾಯಕಿ ಧನ್ಯಾ ರಾಮ್‌ಕುಮಾರ್‌ ಹಾಗೂ ನಾಯಕ ಸೂರಜ್‌ ಗೌಡ ಜೋಡಿ ಫೋಟೋಶೂಟ್‌ ನಡೆದಿದೆ.

ರಾಜ್ ಮೊಮ್ಮಗಳಿಗೆ ಸಿನಿಮಾ ಅವಕಾಶ ಸಿಕ್ಕಿದ್ದು ಹೀಗೆ!

‘ಛಾಯಾಗ್ರಾಹಕರಾದ ಅಭಿಲಾಷ್‌ ಹಾಗೂ ಪರಮೇಶ್ವರ್‌ ಕ್ಯಾಮರಾಗಳಲ್ಲಿ ನಾಯಕ-ನಾಯಕಿಯ ಹಲವು ಭಾವ ಭಂಗಿಯ ಮೋಹಕ ಫೋಟೋಗಳು ಸೆರೆಯಾಗಿವೆ. ಇದೊಂದು ರೊಮ್ಯಾಂಟಿಕ್‌ ಲವ್‌ ಸ್ಟೋರಿಯ ಚಿತ್ರ. ಆ ಕತೆಗೆ ಪೂರಕವಾಗಿಯೇ ನಾಯಕ-ನಾಯಕಿಯ ಮೊದಲ ಫೋಟೋಶೂಟ್‌ ನಡೆದಿದೆ’ ಎನ್ನುತ್ತಾರೆ ನಿರ್ದೇಶಕ ಸುಮನ್‌ ಜಾದೂಗರ್‌. ವೈಟ್‌ ಆ್ಯಂಡ್‌ ಗ್ರೇ’ ಪ್ರೊಡಕ್ಷನ್‌ ಹೌಸ್‌ ಮೂಲಕ ಅಕ್ಷಯ್‌ ಹಾಗೂ ರಂಗನಾಥ್‌ ಕೂಡ್ಲು ನಿರ್ಮಿಸುತ್ತಿರುವ ಚಿತ್ರವಿದು. ನಟ ಸೂರಜ್‌ ಗೌಡ ಬರೆದ ಕತೆ ಬರೆದಿರುವುದು ವಿಶೇಷ. ಸುಮನ್‌ ಜಾದೂಗರ್‌ ಚಿತ್ರಕತೆ ಹಾಗೂ ಪ್ರವೀಣ್‌ ಸಂಭಾಷಣೆ ಬರೆದಿದ್ದಾರಂತೆ.