ಬೆಂಗಳೂರು (ಡಿ. 11): ಧ್ರುವ ಸರ್ಜಾ ಬಾಲ್ಯದ ಗೆಳತಿ ಪ್ರೇರಣಾ ಜೊತೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. 

ವೆಡ್ಡಿಂಗ್ ಆ್ಯನಿವರ್ಸರಿ ದಿನ ಅನುಷ್ಕಾ ವಾಲ್‌ನಲ್ಲಿ ರಣವೀರ್ ಫೋಟೋ!

ಧ್ರುವ ಸರ್ಜಾ ಆಂಜನೇಯನ ಪರಮ ಭಕ್ತ. ಅದೇ ರೀತಿ ಪ್ರೇರಣಾ ಕೂಡಾ ಕಡಿಮೆಯೇನಿಲ್ಲ. ಅವರೂ ಕೂಡಾ ದೈವಭಕ್ತರೇ. ನಿಶ್ಚಿತಾರ್ಥದ ದಿನ ಹಸುವಿನ ಪೂಜೆ ಮಾಡಿದ್ದಾರೆ. ಅದೇ ರೀತಿ ಪ್ರೇರಣಾ ತೊಡಿಸಿದ ಉಂಗುರದಲ್ಲೂ ಕೂಡಾ ದೈವ ಭಕ್ತಿ ಎದ್ದು ಕಾಣುತ್ತಿತ್ತು. ಶಿವ, ಪಾರ್ವತಿ, ಗಣೇಶ, ನಂದಿ ಇರುವ ಬಂಗಾರದುಂಗುರವನ್ನು ಭಾವೀ ಪತಿಗೆ ತೊಡಿಸಿದ್ದಾರೆ. ಧ್ರುವ ಸರ್ಜಾ ಕೂಡಾ 24 ಲಕ್ಷದ ದುಬಾರಿ ವಜ್ರದುಂಗುರವನ್ನು ತೊಡಿಸಿದ್ದಾರೆ. 

ಪವನ್ ಒಡೆಯರ್ ಹೆಂಡತಿ ಕೊಟ್ಟ ವಿಶೇಷ ಬರ್ತಡೇ ಗಿಫ್ಟ್ !

ಆಂಜನೇಯ ದೇವಸ್ಥಾನದಲ್ಲಿಯೇ ನಿಶ್ಚಿತಾರ್ಥ ಮಾಡಿಕೊಳ್ಳಬೇಕೆಂಬ ಆಸೆಯನ್ನು ಹೊಂದಿದ್ದ ಆಂಜನೇಯ ಭಕ್ತ ಧ್ರುವ ಸರ್ಜಾ, ತನ್ನ ಆಸೆಯಂತೆ ಆಂಜನೇಯ ದೇವಸ್ಥಾನದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕಲಾ ನಿರ್ದೇಶಕ ಅರುಣ್ ಸಾಗರ್ ನೇತೃತ್ವದಲ್ಲಿ ನಿರ್ಮಾಣವಾದ ತೆಂಗಿನ ಗರಿ, ಮಾವಿನ ಎಲೆಯ ಹಸಿರು ತಳಿರು-ತೋರಣಗಳಿಂದ ಕೂಡಿದ ವೇದಿಕೆಯಲ್ಲಿ ಪ್ರೇರಣಾ ಹಾಗೂ ಧ್ರುವ ಪರಸ್ಪರ ಉಂಗುರ ಬದಲಿಸಿಕೊಂಡಿದ್ದಾರೆ.