ಹುಟ್ಟು ಹಬ್ಬ ಅಂದ ಮೇಲೆ ಶುಭಾಶಯಗಳ ಸುರಿಮಳೆ ಇರುತ್ತದೆ ಆದರೆ ಅದೆಲ್ಲಕ್ಕೂ ಮೀರಿದ್ದು ಹೆಂಡತಿಯ ಗಿಫ್ಟ್. ಚಿತ್ರ ರಂಗದ ತಾರೆಯರಾದ ಜಗ್ಗೇಶ್, ರಾಗಿಣಿ ದ್ವಿವೇದಿ, ಸಂತೋಷ್ ಆನಂದ್ರಾಮ್, ತರುಣ್ ಸುದೀರ್ ಹಾಗು ಅನುಪಮ ಪರಮೇಶ್ವರೀ ಸಾಮಾಜಿಕ ಜಾಲತಾಣದಲ್ಲಿ ವಿಶ್ ಮಾಡಿರುವುದನ್ನು ನೋಡಬಹುದು.

ಪವನ್ ಮದುವೆ ನಂತರ ಬಂದ ಮೊದಲ ಹುಟ್ಟುಹಬ್ಬಕ್ಕೆ ಹೆಂಡತಿ "ದಿ ಬಾಸ್" ಟೀ ಶರ್ಟ್ ಕೊಟ್ಟಿದ್ದಾರೆ ಆದರೆ ಇದರಲ್ಲಿರುವ ಟ್ವಿಸ್ಟ್ ಏನೆಂದರೆ ಗಂಡನಿಗೆ ದಿ ಬಾಸ್ ಕೊಟ್ಟರೆ ಹೆಂಡತಿ "ದಿ ರಿಯಲ್ ಬಾಸ್" ಎಂದು ಬರೆದಿದ್ದೆ.

ಅಪೇಕ್ಷ ಪುರೋಹಿತ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ "ಇವತ್ತು ಈ ಪ್ರಪಂಚಕ್ಕೆ ಪರಿಚಯವಾದ ದಿನ, ನೀವು ವಂಡರ್‌ಫುಲ್ ಪರ್ಸನ್. ಸದಾ ಖುಷಿಯಾಗಿರಿ " ಎಂದು ವಿಶ್ ಮಾಡಿದ್ದಾರೆ.