ಇಟಲಿ ರೆಸಾರ್ಟಲ್ಲಿ ದೀಪಿಕಾ- ರಣವೀರ್‌ ಮದ್ವೆ : ಯಾವಾಗ..?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 15, Aug 2018, 8:13 AM IST
Deepika Ranveer Marriage Date Confirmed
Highlights

ಬಹುದಿನಗಳಿಂದ ಚರ್ಚೆಯಲ್ಲಿರುವ ನಟರಾದ ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ವಿವಾಹಕ್ಕೆ ಸಂಬಂಧಿಸಿದಂತೆ ಹೊಸ ಸುದ್ದಿ ಹೊರಬಿದಿದ್ದೆ. 

ಮುಂಬೈ: ಬಹುದಿನಗಳಿಂದ ಚರ್ಚೆಯಲ್ಲಿರುವ ನಟರಾದ ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ವಿವಾಹಕ್ಕೆ ಸಂಬಂಧಿಸಿದಂತೆ ಹೊಸ ಸುದ್ದಿ ಹೊರಬಿದಿದ್ದೆ.

ಅದೇನೆಂದರೆ ಈ ಹಿಂದೆ ವರದಿಯಾಗಿದ್ದ ನ.10ರ ಬದಲಾಗಿ ನ.20ರಂದು ದಂಪತಿ ವಿವಾಹ ಬಂಧನಕ್ಕೆ ಒಳಗಾಗಲಿದ್ದಾರಂತೆ. ಇಟಲಿಯ ಸುಂದರ ಲೇಕ್‌ ಕೋಮೋ ರೆಸಾರ್ಟ್‌ನಲ್ಲಿ ಈ ಜೋಡಿ ಹೊಸ ಜೀವನಕ್ಕೆ ಕಾಲಿಡಲಿದೆ.

ಈ ಕಾರ್ಯಕ್ರಮದಲ್ಲಿ ಉಭಯ ಕುಟುಂಬಗಳ ಕೇವಲ 30-40 ಬಂಧುಗಳು ಮಾತ್ರವೇ ಇರಲಿದ್ದಾರೆ. ಬಳಿಕ ಮುಂಬೈನಲ್ಲಿ ದೊಡ್ಡಮಟ್ಟದಲ್ಲಿ ಔತಣಕೂಟ ಆಯೋಜನೆಗೊಳ್ಳಲಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

loader