ಬಾಲಿವುಡ್ ಗೆ ಕಾಲಿಡುವ ಮುನ್ನವೇ ಸಖತ್ ಸದ್ದು ಮಾಡುತ್ತಿರುವ ಶಾರುಖ್ ಖಾನ್ ಪುತ್ತಿ ಸುಹಾನಾ ಖಾನ್ ಇದೀಗ ಟ್ರೋಲಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಅಷ್ಟಕ್ಕೂ ಆಗಿದ್ದೇನು? ಈ ಸುದ್ದಿ ಓದಿ..

ಬಿಕಿನಿಯಲ್ಲಿ ಕಾಣಿಸಿಕೊಂಡು ಭೇಷ್ ಎನ್ನಿಸಿಕೊಂಡಿದ್ದ ಸುಹಾನಾ ಖಾನ್ ಪ್ರತಿಷ್ಠಿತ ‘ವೋಗ್’ ಫ್ಯಾಷನ್ ಮ್ಯಾಗಜೀನ್‌ ನಲ್ಲಿ ಕಾಣಿಸಿಕೊಂಡಿದ್ದು ಟ್ರೋಲಿಗರ ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈಕೆ ಫೋಟೋಗಳು ಸಖತ್ ಓಡಾಡುತ್ತಿವೆ ಜತೆಗೆ ಬಗೆಬಗೆಯ ಕಮೆಂಟ್ ಸಂಪಾದನೆ ಮಾಡಿಕೊಳ್ಳುತ್ತಿವೆ.

ಶಾರುಖ್ ಆಗಸ್ಟ್ ಸಂಚಿಕೆಯ ಕವರ್‌ಗೆ ತಮ್ಮ ಮಗಳು ರೂಪದರ್ಶಿಯಾಗಿರೋ ಮ್ಯಾಗಜಿನ್ ಬಿಡುಗಡೆ ಮಾಡಿ ಪೋಟೋಶೂಟ್ ವಿಡೀಯೋ ಕೂಡ ಶೇರ್ ಮಾಡಿದ್ದಾರೆ. ಜೊತೆಗೆ ಮಗಳ ಫೋಟೋ ಇರುವ ವೋಗ್‌ನ ನಿಯತಕಾಲಿಕೆಯನ್ನು ಕೈಯಲ್ಲಿ ಹಿಡಿದಿರುವ ಫೋಟೋ ಒಂದನ್ನು ಟ್ವೀಟ್ ಮಾಡಿದ್ದಾರೆ. ತಾಯಿ ಗೌರಿ ಖಾನ್ ಕೂಡ ಸುಹಾನಾ ಖಾನ್ ಫೋಟೋ ಹಾಕಿ ವೋಗ್‌ಗೆ ಧನ್ಯವಾದ ಹೇಳಿದ್ದಾರೆ. ವೋಗ್ ಕೂಡ ಸುಹಾನ್ ಖಾನ್ ಫೋಟೋವನ್ನು ಅಪ್ಲೋಡ್ ಮಾಡಿದೆ.

ಬಿಕಿನಿಯಲ್ಲಿ ನನಗಿಂತ ನೀನೆ ಚೆನ್ನ...ಪೂನಂ ಶಹಭಾಸ್

ಆದರೆ ಟ್ರೋಲಿಗರು ಇಷ್ಟಕ್ಕೆ ಸುಮ್ಮನಾಗಿಲ್ಲ, ಸುಹಾನಾ ಫೋಟೋ ಹಾಕುವ ಮೂಲಕ ವೋಗ್ ತನ್ನ ಸ್ಟಾಂಡರ್ಡ್ ಕಳೆದುಕೊಂಡಿದೆ. ಒಂದೇ ಒಂದು ಚಿತ್ರದಲ್ಲಿ ಅಭಿನಯಿಸದ ಆಕೆಯನ್ನು ಯಾವ ಮಾನದಂಡದಲ್ಲಿ ನಟಿ ಎಂದು ಪರಿಗಣನೆ ಮಾಡಲಾಯಿತು ಎಂಬ ಪ್ರಶ್ನೆಯನ್ನು ಕೇಳಲಾಗಿದೆ.

View post on Instagram
View post on Instagram