ಬೆಂಗಳೂರು (ಜ. 07): ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಹೊಸ ವೆಬ್‌ಸೈಟೊಂದನ್ನು ಲಾಂಚ್ ಮಾಡಿದ್ದಾರೆ. ವೆಬ್‌ಸೈಟ್‌ಗಾಗಿ ಈ ಲಿಂಕ್ ಕ್ಲಿಕ್ಕಿಸಿ 

ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾದಕವಾದ ಫೋಟೋವೊಂದನ್ನು ಹಾಕಿ ಶೀಘ್ರದಲ್ಲೇ ಹೊಸ ವಿಚಾರವೊಂದನ್ನು ಹೇಳಲಿದ್ದೇನೆ ಎಂದು ಬರೆದುಕೊಂಡು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದರು. 

 

 
 
 
 
 
 
 
 
 
 
 
 
 

Here’s presenting my website- www.deepikapadukone.com (link in bio) Love, Deepika

A post shared by Deepika Padukone (@deepikapadukone) on Jan 5, 2019 at 2:50am PST

ದೀಪಿಕಾರ ಹೊಸ ವೆಬ್ ಸೈಟ್ ಲೇಔಟ್ ಹಾಗೂ ಡಿಸೈನ್ ನೋಡಿ ಅಭಿಮಾನಿಗಳು ಫುಲ್ ಥ್ರಿಲ್ಲಾಗಿದ್ದಾರೆ. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.  ಬಾಲಿವುಡ್ ನ ಬಹುಬೇಡಿಕೆ ನಟಿ ದೀಪಿಕಾಗೆ ಸೋಷಿಯಲ್ ಮೀಡಿಯಾದಲ್ಲಿ 75 ಮಿಲಿಯನ್ ಗಿಂತಲೂ ಜಾಸ್ತಿ ಅಭಿಮಾನಿಗಳಿದ್ದಾರೆ. ಟ್ವಿಟರ್ ನಲ್ಲಿ ಅತೀ ಹೆಚ್ಚು ಫಾಲೋ ಆಗುವ ಏಷಿಯನ್ ನಟಿಯೂ ಹೌದು. 

ದೀಪಿಕಾ ಪಡುಕೋಣೆ ವೆಬ್ ಸೈಟ್ ಕೇವಲ ಫ್ಯಾಶನ್ ಗೆ ಮಾತ್ರ ಸೀಮಿತವಾಗಿಲ್ಲ. ಅವರ ಸಿನಿಮಾ, ಸಾಮಾಜಿಕ ಕಾರ್ಯಗಳು, ಪ್ರಶಸ್ತಿಗಳು, ಜೀವನ, ಕರಿಯರ್ ಹೀಗೆ ಸಮಗ್ರ ಚಿತ್ರಣ ಈ ವೆಬ್ ಸೈಟ್ ನಲ್ಲಿದೆ. 

ದೀಪಿಕಾ ಇದುವರೆಗೂ ಮಾಡಿರುವ ಸಿನಿಮಾಗಳು, ಪಡೆದುಕೊಂಡ ಪ್ರಶಸ್ತಿಗಳು ಇವೆಲ್ಲದರ ಸಂಪೂರ್ಣ ವಿವರ ಇಲ್ಲಿದೆ. ಆದರೆ ಕನ್ನಡ ಚಿತ್ರದ ವಿವರವನ್ನೇ ಹಾಕಿಲ್ಲ. 

ಕನ್ನಡದಲ್ಲಿ ಉಪೇಂದ್ರ ಜೊತೆ ಐಶ್ವರ್ಯ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರ ದೀಪಿಕಾಗೆ ಬಿಗ್ ಟರ್ನನ್ನೇ ಕೊಟ್ಟಿತ್ತು. ಭಾರೀ ಹೆಸರನ್ನು ತಂದು ಕೊಟ್ಟಿತ್ತು. ಆದರೆ ವೆಬ್ ಸೈಟ್ ನಲ್ಲಿ ಈ ಸಿನಿಮಾದ ಹೆಸರೇ ಇಲ್ಲ. ಇದು ಆಚಾತುರ್ಯವಾಗಿ ಆಗಿರುವ ತಪ್ಪೋ ಅಥವಾ ಕನ್ನಡದ ಬಗೆಗಿನ ನಿರ್ಲಕ್ಷವೋ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ.