ಸದ್ದಿಲ್ಲದೆ 350 ಕೋಟಿ ಗಳಿಸಿದ ಚಿರಂಜೀವಿ ಸಿನಿಮಾ, ಒಟಿಟಿ ರಿಲೀಸ್ ಡೇಟ್ ಅನೌನ್ಸ್
MSVPG OTT Release : ಮೆಗಾಸ್ಟಾರ್ ಚಿರಂಜೀವಿ ಅವರ ಬ್ಲಾಕ್ಬಸ್ಟರ್ ಚಿತ್ರ, ಮನ ಶಂಕರ ವರ ಪ್ರಸಾದ್ಗಾರು, ಭರ್ಜರಿ ಪ್ರದರ್ಶನದ ನಂತರ ಈಗ OTT ಪ್ಲಾಟ್ಫಾರ್ಮ್ ನಲ್ಲಿ ಬಿಡುಗಡೆಯಾಗುತ್ತಿದೆ.

ದಾಖಲೆ ಬರೆದ ಚಿರಂಜೀವಿ
ತೆಲುಗು ಇಂಡಸ್ಟ್ರಿಯಲ್ಲಿ ಈ ವರ್ಷ ಅತಿ ಹೆಚ್ಚು ಗಳಿಕೆ ಕಂಡ ಮೊದಲ ಸಿನಿಮಾ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಮನ ಶಂಕರ ವರ ಪ್ರಸಾದ್ ಗಾರು ಸದ್ದಿಲ್ಲದೆ ಈ ಸಿನಿಮಾ ದಾಖಲೆ ಪ್ರಮಾಣದಲ್ಲಿ ಹಣ ಬಾಚಿಕೊಂಡಿದೆ. 350 ಕೋಟಿ ಗಳಿಕೆ ಕಂಡಿರುವ ಮನ ಶಂಕರ ವರ ಪ್ರಸಾದ್ ಗಾರು ಸಿನಿಮಾ ಈಗ ಒಟಿಟಿಯಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ.
ಮನ ಶಂಕರ ವರ ಪ್ರಸಾದ್ ಗಾರು
ಅನಿಲ್ ರವಿಪುಡಿ ಬರೆದು ನಿರ್ದೇಶಿಸಿರುವ ಮನ ಶಂಕರ ವರ ಪ್ರಸಾದ್ ಗಾರು ಸಿನಿಮಾದಲ್ಲಿ ಮೆಗಾಸ್ಟಾರ್ ಚಿರಂಜೀವಿ ಜೊತೆಗೆ ವೆಂಕಟೇಶ್ ದಗ್ಗುಬಾಟಿ, ನಯನತಾರಾ ಮತ್ತು ಕ್ಯಾಥರೀನ್ ತ್ರೇಸಾ ನಟಿಸಿದ್ದಾರೆ. ಸಂಕ್ರಾಂತಿ ಟೈಂನಲ್ಲಿ ಈ ಸಿನಿಮಾ ಬಿಡುಗಡೆಯಾಗಿತ್ತು. ಜನವರಿ 12 ರಂದು ಸಿನಿಮಾ ತೆರೆಗಪ್ಪಳಿಸಿತ್ತು. ಬಾರ್ಡರ್ 2 ಅಬ್ಬರಿಸುತ್ತಿದ್ದ ಟೈಂನಲ್ಲಿ ಈ ವಿಶ್ವಾದ್ಯಂತ ಬಾಕ್ಸ್ ಆಫೀಸ್ನಲ್ಲಿ 300 ಕೋಟಿ ರೂಪಾಯಿ ಗಳಿಸಿ ಇತಿಹಾಸ ಸೃಷ್ಟಿಸಿರುವ ಸಿನಿಮಾವನ್ನು ನೀವು ದೊಡ್ಡ ತೆರೆ ಮೇಲೆ ಮಿಸ್ ಮಾಡ್ಕೊಂಡಿದ್ರೆ ಮನೆಯಲ್ಲೇ ಕುಳಿತು ಒಟಿಟಿಯಲ್ಲಿ ಎಂಜಾಯ್ ಮಾಡ್ಬಹುದು.
ಒಟಿಟಿಗೆ ಮನ ಶಂಕರ ವರ ಪ್ರಸಾದ್ ಗಾರು
ಬಾಕ್ಸ್ ಆಫೀಸ್ ನಲ್ಲಿ ಸಕ್ಸಸ್ ಕಂಡ ತೆಲುಗು ಬ್ಲಾಕ್ಬಸ್ಟರ್ ಮನ ಶಂಕರ ವರ ಪ್ರಸಾದ್ ಗಾರು ಸಿನಿಮಾ ಒಟಿಟಿಗೆ ಯಾವಾಗ ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡ್ತಿತ್ತು. ಸದ್ಯ ರಿಲೀಸ್ ಡೇಟ್ ಅನೌನ್ಸ್ ಆಗಿದ್ದು, ಅಭಿಮಾನಿಗಳು ಖುಷಿಯಾಗಿದ್ದಾರೆ. ಮನ ಶಂಕರ ವರ ಪ್ರಸಾದ್ ಗಾರು ಸಿನಿಮಾ ಒಟಿಟಿ ಹಕ್ಕು ZEE5 ಪಾಲಾಗಿದೆ. ಈ ಸಿನಿಮಾ ಫೆಬ್ರವರಿ 11 ರಂದು ZEE5 ನಲ್ಲಿ ಬಿಡುಗಡೆಯಾಗ್ತಿದೆ. ಚಿರಂಜೀವಿ-ನಯನತಾರಾ ಅಭಿನಯದ ಅತಿದೊಡ್ಡ ಹಿಟ್ ಸಿನಿಮಾಗಳಲ್ಲಿ ಒಂದಾಗಿರುವ ಮನ ಶಂಕರ ವರ ಪ್ರಸಾದ್ ಗಾರು ಸಿನಿಮಾ ಒಟಿಟಿಯಲ್ಲೂ ಅಬ್ಬರಿಸುವ ಸಾಧ್ಯತೆ ಇದೆ.
ZEE5 ನಲ್ಲಿ ಸಿನಿಮಾ
ZEE5 ತನ್ನ ಸೋಶಿಯಲ್ ಮೀಡಿಯಾದಲ್ಲಿ ಒಟಿಟಿ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದೆ. ಮೆಗಾ-ವಿಕ್ಟರಿ ಬ್ಲಾಕ್ಬಸ್ಟರ್ ಫೆಬ್ರವರಿ 11 ರಂದು ನಿಮಗೆ Zee5 ನಲ್ಲಿ ಮಾತ್ರ ಲಭ್ಯವಿರುತ್ತದೆ ಎಂಬ ಪೋಸ್ಟ್ ಹಂಚಿಕೊಲ್ಳಲಾಗಿದೆ. ಮನ ಶಂಕರ ವರ ಪ್ರಸಾದ ಗಾರು ಸಿನಿಮಾ, ತೆಲುಗು, ತಮಿಳು, ಕನ್ನಡ, ಮಲಯಾಳಂ, ಹಿಂದಿ, ಮರಾಠಿ ಮತ್ತು ಬಂಗಾಳಿ ಭಾಷೆಗಳಲ್ಲಿ ಸ್ಟ್ರೀಮ್ ಆಗಲಿದೆ.
ಸಿನಿಮಾ ಕಲೆಕ್ಷನ್
ರಾಷ್ಟ್ರೀಯ ಭದ್ರತಾ ಅಧಿಕಾರಿ (ಚಿರಂಜೀವಿ) ತನ್ನ ದೂರವಾದ ಕುಟುಂಬವನ್ನು ರಕ್ಷಿಸುವ ಮತ್ತು ದಾರಿಯುದ್ದಕ್ಕೂ ಪ್ರೀತಿ, ಜವಾಬ್ದಾರಿ ಮತ್ತು ವಿಷಾದವನ್ನು ಮರುಶೋಧಿಸುವ ಕಥೆಯನ್ನು ಹೇಳುತ್ತದೆ. ಆಕ್ಷನ್, ಹಾಸ್ಯ ಮತ್ತು ಕೌಟುಂಬಿಕ ಮನರಂಜನೆಯಿಂದ ತುಂಬಿರುವ ಚಿತ್ರ ಇದು. ಮನ ಶಂಕರ ವರ ಪ್ರಸಾದ್ ಗಾರು ಚಿತ್ರ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರದರ್ಶನ ಕಾಣ್ತಿದೆ. ಮನ ಶಂಕರ ವರ ಪ್ರಸಾದ ಗಾರು ಬಿಡುಗಡೆಯಾದ 26 ನೇ ದಿನದಂದು 42 ಲಕ್ಷ ಗಳಿಸಿದೆ. 26 ದಿನಗಳ ಒಟ್ಟು ಗಳಿಕೆ 210.77 ಕೋಟಿ. ಚಿತ್ರಮಂದಿರಗಳಲ್ಲಿ 25 ದಿನಗಳ ಉತ್ತಮ ಪ್ರದರ್ಶನದ ನಂತ್ರ ವಿಶ್ವಾದ್ಯಂತ ಸಿನಿಮಾ ಬಾಕ್ಸ್ ಆಫೀಸ್ ಕಲೆಕ್ಷನ್ 375 ಕೋಟಿ ರೂಪಾಯಿ ತಲುಪಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

