ಮುಂಬೈ (ನ. 17): ದೀಪಿಕಾ ಪಡುಕೋಣೆ- ರಣವೀರ್ ಸಿಂಗ್ ಮದುವೆ ಇಟಲಿಯಲ್ಲಿ ಅದ್ದೂರಿಯಾಗಿ ಮುಗಿದಿದೆ. ಈ ಎಲ್ಲರ ಚಿತ್ತ ಬೆಂಗಳೂರಿನಲ್ಲಿ ನಡೆಯುವ ಆರತಕ್ಷತೆ ಮೇಲೆ ನೆಟ್ಟಿದೆ. ಬಿ- ಟೌನ್ ಸೆಲಬ್ರಿಟಿಗಳೆಲ್ಲರೂ ಸಮಾರಂಭದಲ್ಲಿ ಭಾಗಿಯಾಗುವ ಸಾಧ್ಯತೆಯಿದೆ. ಆದರೆ ವಿಚಾರ ಇದಲ್ಲ. ದೀಪಿಕಾ- ರಣವೀರ್ ರೆಸೆಪ್ಷನ್ ಗೆ ಒಬ್ಬ ವಿಶೇಷ ಅತಿಥಿ ಭಾಗಿಯಾಗಿದ್ದಾರೆ. ಯಾರಪ್ಪಾ ಅದು ಅಂತ ಯೋಚಿಸ್ತಾ ಇದೀರಾ? ಅವರೇ ಕತ್ರಿನಾ ಕೈಫ್. 

ದೀಪಿಕಾ ನಿಶ್ಚಿತಾರ್ಥದ ಉಂಗುರದ ಬೆಲೆ 2.5 ಕೋಟಿ!

ದೀಪಿಕಾ ಹಾಗೂ ಕತ್ರಿನಾ ರಣಬೀರ್ ಕಪೂರ್ ನ ಮಾಜಿ ಗರ್ಲ್ ಫ್ರೆಂಡ್ ಗಳಾಗಿದ್ದವರು. ಸಹಜವಾಗಿ ಇಬ್ಬರ ನಡುವೆ ಶೀತಲ ಸಮರ ಇತ್ತು. ಈಗ ಅವೆಲ್ಲವನ್ನು ಮರೆತು ಮದುವೆಗೆ ಆಹ್ವಾನಿಸಿದ್ದಾರೆ ದೀಪಿಕಾ.  ಡಿಪ್ಪಿ- ವೀರ್ ತಮ್ಮ ಹಳೆಯ ಕತೆಗಳೆನ್ನೆಲ್ಲ ಮರೆತು ಎಲ್ಲರಿಗೂ ಮದುವೆಗೆ ಆಹ್ವಾನ ನೀಡಿದ್ದಾರೆ. 

ಸೆಲಬ್ರಿಟಿಗಳೇಕೆ ವಿದೇಶದಲ್ಲಿ ಮದುವೆಯಾಗ್ತಾರೆ?

ಕತ್ರಿನಾ ಕೈಫ್ ಗೆ ಆಹ್ವಾನ ನೀಡಿದ್ದು ಮಾತ್ರವಲ್ಲ, ರಣವೀರ್ ಸಿಂಗ್ ಒಂದು ಕಾಲದಲ್ಲಿ ಡೇಟಿಂಗ್ ನಡೆಸುತ್ತಿದ್ದ ಅನುಷ್ಕಾ ಶರ್ಮಾಗೂ ಆಹ್ವಾನ ನೀಡಲಾಗಿದೆಯಂತೆ. ಅನುಷ್ಕಾ ಶರ್ಮ ವಿರಾಟ್ ಕೊಹ್ಲಿ ಮದುವೆಯಾಗಿ ಸಂಸಾರ ನಡೆಸುತ್ತಿದ್ದರೆ ಕತ್ರಿನಾ ಸಿಂಗಲ್ಲಾಗಿರೋದೇ ಹ್ಯಾಪಿ ಅಂತಿದ್ದಾರೆ.