ಬಾಲಿವುಡ್‌ ಬೆಡಗಿ ಹಾಗೂ ಕನ್ನಡತಿ ದೀಪಿಕಾ ಪಡುಕೋಣೆ ಅವರು ತಮ್ಮ ಸ್ನೇಹಿತ ರಣವೀರ್‌ ಸಿಂಗ್‌ ಅವರೊಂದಿಗೆ ಇಟಲಿಯ ಕೊಮೊ ಸರೋವರ ತೀರದಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ನೂತನ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ವಿವಾಹದ ಹಿಂದಿನ ದಿನವಷ್ಟೇ ಇಬ್ಬರೂ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮದಲ್ಲೂ ಭಾಗಿಯಾಗಿದ್ದರು.

 
 
 
 
 
 
 
 
 
 
 
 
 

❤️

A post shared by Deepika Padukone (@deepikapadukone) on Nov 15, 2018 at 6:36am PST

ಈ ವೇಳೆ ರಿಯಲ್‌ ಎಸ್ಟೇಟ್‌ ಉದ್ಯಮಿಯ ಪುತ್ರನಾಗಿರುವ ರಣವೀರ್‌ಸಿಂಗ್‌, ತಮ್ಮ ಭಾವಿ ಪತ್ನಿಗೆ ಸುಂದರವಾದ ವಜ್ರದ ಉಂಗುರವೊಂದನ್ನು ತೊಡಿಸಿದ್ದರು. ಈ ಉಂಗುರ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಕಾರಣ ದೀಪಿಕಾಗೆ ತೊಡಿಸಲಾದ ಈ ಸುಂದರ ಉಂಗುರದ ಬೆಲೆ 1.3 ಕೋಟಿ ರು.ನಿಂದ 2.3 ಕೋಟಿ ರು.ವರೆಗೂ ಇರಬಹುದು ಎಂದು ಹೇಳಲಾಗಿದೆ.

 
 
 
 
 
 
 
 
 
 
 
 
 

❤️

A post shared by Ranveer Singh (@ranveersingh) on Nov 15, 2018 at 6:36am PST

ಇತ್ತೀಚೆಗಷ್ಟೇ ಅನುಷ್ಕಾ ಶರ್ಮಾ ಅವರನ್ನು ವರಿಸಿದ್ದ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಅವರು, ಆಸ್ಟ್ರಿಯಾದಲ್ಲಿರುವ ವಿನ್ಯಾಸಗಾರರೊಬ್ಬರು ತಯಾರಿಸಿದ 1 ಕೋಟಿ ರು. ಬೆಲೆ ಬಾಳುವ ಉಂಗುರವನ್ನು ಶರ್ಮಾಗೆ ತೊಡಿಸಿದ್ದರು.