ಟಾಲಿವುಡ್‌ ರೊಮ್ಯಾಂಟಿಕ್‌ ಮ್ಯಾನ್ ವಿಜಯ್ ದೇವರಕೊಂಡ ಚಿತ್ರರಂಗದಿಂದ ನಿವೃತ್ತಿ ಪಡೆಯಲು ನಿರ್ಧರಿಸಿದ್ದು, ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಈ ವಿಚಾರದ ಬಗ್ಗೆ ವಾಹಿನಿಯೊಂದರ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ವಾಹಿನಿಯೊಂದರಲ್ಲಿ ನಿವೃತ್ತಿ ಜೀವನದ ಬಗ್ಗೆ ಕೇಳಿದ್ದಕ್ಕೆ ದೇವರಕೊಂಡ 'ಸಿನಿಮಾ ಹೊರತುಪಡಿಸಿ ಜೀವನಕ್ಕೆ ಏನಾದ್ರೂ ಮಾಡಬಹುದು ಎಂದು ತಿಳಿದಾಕ್ಷಣ ಸಿನಿಮಾದಿಂದ ನಿವೃತ್ತಿ ತೆಗೆದುಕೊಳ್ಳುವೆ' ಎಂದು ಹೇಳುತ್ತಲೇ ನಗು ನಗುತ್ತಾ 'ಇನ್ನು 5 ವರ್ಷದಲ್ಲಿ ಮದುವೆ ಆಗುವ ಪ್ಲ್ಯಾನ್ ಮಾಡಿದ್ದೇನೆ. ಅಂದರೆ 35 ವರ್ಷಕ್ಕೆ ಮದುವೆ ಆಗುವ ಪ್ಲ್ಯಾನ್ ಇದೆ’ ಎಂದು ಹೇಳಿಕೊಂಡಿದ್ದಾರೆ.

ಲಿಪ್‌ಲಾಕ್‌ ಸೀನ್ ಬಗ್ಗೆ ಕೇಳಿದ್ರೆ '****' ಹಾಗೂ 'IDC' ಅಂದ ವಿಜಯ್ ದೇವರಕೊಂಡ!

ಇನ್ನು ತೆರೆ ಕಾಣಲು ರೆಡಿಯಾಗುತ್ತಿರುವ 'ಡಿಯರ್ ಕಾಮ್ರೇಡ್' ಸಿನಿಮಾದ ಲಿಪ್ ಲಾಕ್‌ ದೃಶ್ಯದ ಬಗ್ಗೆ ಕೇಳಿದಾಗ 'ಕಿಸ್ಸಿಂಗ್ ದೃಶ್ಯ ಮಾಡುವುದು ಅಷ್ಟು ಸುಲಭವಲ್ಲ. ಸೆಟ್‌ನಲ್ಲಿ ತುಂಬಾ ಜನ ಇರುತ್ತಾರೆ. ಅವರೆದುರು ನಟ ಹಾಗೂ ನಟಿ ಕಿಸ್‌ ಮಾಡಲು ಕಂಫರ್ಟಬಲ್ ಆಗಿರಬೇಕು. ನಮಗೆ ಕಷ್ಟವಾದರೆ ಪ್ರೇಕ್ಷಕರಿಗೆ ನೋಡಲೂ ಕಷ್ಟವಾಗುತ್ತದೆ ' ಎಂದು ಹೇಳಿದ್ದಾರೆ.