ಸ್ಯಾಂಡಲ್‌ವುಡ್ ಸ್ಟೇಟ್ ಕ್ರಶ್ ರಶ್ಮಿಕಾ ಮಂದಣ್ಣಾಳ ಜೊತೆ ಅಭಿನಯಿಸುವುದಕ್ಕೆ ಸ್ಟಾರ್ ನಟರು ಹಾಗೂ ನಿರ್ದೇಶಕರು ಕೈಯಲ್ಲಿ ಸಿನಿಮಾ ಹಿಡಿದು ಕಾಯುತ್ತಿದ್ದಾರೆ. ಇದೇ ಮೊಟ್ಟ ಮೊದಲ ಬಾರಿಗೆ ರಶ್ಮಿಕಾ ಅಭಿನಯದ ’ಡಿಯರ್ ಕಾಮ್ರೆಡ್’ ಸಿನಿಮಾ ನಾಲ್ಕು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ.

ಲಿಪ್‌ಲಾಕ್‌ ಸೀನ್ ಬಗ್ಗೆ ಕೇಳಿದ್ರೆ '****' ಹಾಗೂ 'IDC' ಅಂದ ವಿಜಯ್ ದೇವರಕೊಂಡ!

ಆದರೆ ಎಷ್ಟೇ ಸಿನಿಮಾ ಮಾಡಿದ್ರೂ ಆಕೆಗೆ ಎಂತಹ ಸ್ಟಾರ್ ನಟರು ಜೋಡಿಯಾಗಿ ಅಭಿನಯಿಸಿದರೂ ರಶ್ಮಿಕಾಳಿಗೆ ಜೋಡಿಯಾಗಿ ರಕ್ಷಿತ್ ಶೆಟ್ಟಿನೇ ಸೂಪರ್ ಎಂದು ಪಣ ಹಿಡಿದು ಕೂತಿದ್ದಾರೆ ರಕ್ಷಿತ್ ಫ್ಯಾನ್ಸ್. ಡಿಯರ್ ಕಾಮ್ರೇಡ್‌ ಪ್ರೆಸ್ ಮೀಟ್‌ನಲ್ಲಿ ರಶ್ಮಿಕಾಳ ಪಕ್ಕ ಕುಳಿತು ಕೇಳಿದ ಮಾತಿಗೆಲ್ಲ ಉತ್ತರ ಕೊಡುತ್ತಿದ್ದ ವಿಜಯ್‌ ದೇವರಕೊಂಡನನ್ನು ನೋಡಿ ಅಭಿಮಾನಿಗಳು ಫುಲ್ ಗರಂ ಆಗಿದ್ದಾರೆ. ಅರೇ ನಮ್ಮ ಸ್ಟೇಟ್ ಕ್ರಶ್‌ ಪಕ್ಕ ಇವರು ಯಾಕೆ? ಹೋಗ್ಲಿ ಬಿಡಿ ಏನೇ ಆದ್ರೂ ರಶ್ಮಿಕಾ ಪಕ್ಕ ರಕ್ಷಿತ್ ಶೆಟ್ಟಿ ಇದ್ರೇನೆ ಸೂಪರ್ ಎಂದು ಮಾತಾಡಿಕೊಳ್ಳುತ್ತಿದ್ದಾರೆ.

‘ಡಿಯರ್ ಕಾಮ್ರೆಡ್’ನಲ್ಲಿ ರಶ್ಮಿಕಾ ಮೇಕಪ್ ಮಾಡಿಲ್ವಂತೆ!

ಇನ್ನು ರಶ್ಮಿಕಾಳನ್ನು ನೀವು ರಕ್ಷಿತ್ ಜೊತೆ ಸಿನಿಮಾದಲ್ಲಿ ಅಭಿನಯಿಸುತ್ತೀರಾ ಎಂದು ಕೇಳಿದ್ದಕ್ಕೆ 'ಹಾ... ಮಾಡೋಣಾ..ನೋಡೋಣ! ಆಫರ್ ಬಂದ್ರೆ ಖಂಡಿತ ಅಭಿನಯಿಸುತ್ತೇನೆ' ಎಂದು ಹೇಳಿದ್ದಾರೆ. ಆದರೆ ರಿಲೇಷನ್ ಶಿಪ್ ಬಗ್ಗೆ ಮಾತನಾಡೋಕೆ ರಶ್ಮಿಕಾ ಅಂಜಿಕೆ ಪಡುತ್ತಾರೆ. ರಕ್ಷಿತ್ ಹೆಸರು ಹೇಳಿ ಪ್ರಶ್ನೆ ಕೇಳಿದ್ರೆ ಆ ಬಗ್ಗೆ ಏನ್ ಹೇಳೋದು ಅಂತ ಅಡ್ಡಗೋಡೆ ಮೇಲೆ ದೀಪ ಇಟ್ಟಂಗೆ ಮಾತಾಡ್ತಾರೆ. ಬಟ್ ಅಭಿಮಾನಿಗಳು ಮಾತ್ರ ಇಬ್ಬರು ಮತ್ತೆ ಒಂದಾಗುವುದನ್ನು ಕಾದಿದ್ದಾರೆ.