ಬಿಗ್‌ ಬಜೆಟ್‌ ಪೌರಾಣಿಕ 'ಕುರುಕ್ಷೇತ್ರ' ಒಂದು ಕಡೆಯಾದ್ರೆ ಮತ್ತೊಂದು ಕಡೆ ಮೂರು ವರ್ಷದ ನಂತರ ತೆರೆ ಮೇಲೆ ಬರಲು ಸಿದ್ಧವಾದ ಕೋಮಲ್ ಚಿತ್ರ 'ಕೆಂಪೇಗೌಡ-2'. ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಚಿತ್ರವೂ ಆಗಸ್ಟ್‌ 2 ಕ್ಕೆ ತೆರೆ ಕಾಣಬೇಕಿತ್ತು ಕಾರಣಾಂತರಗಳಿಂದ ಮುಂದೋಗಿ ಆಗಸ್ಟ್‌ 9 ರಂದು ತೆರೆ ಕಾಣುವುದಾಗಿ ಚಿತ್ರತಂಡ ತಿಳಿಸಿದೆ.

‘ಮಣ್ಣಲ್ಲಿ ಹೂತಿಟ್ಟ ಸತ್ಯ ಹೊರ ತೆಗಿತೀನಿ’ ಎಂದ ಕಾಮಿಡಿ ಕಿಂಗ್!

ಇನ್ನೇನು ಪ್ರಾಬ್ಲಮ್‌ ಅಂತಾನಾ? ಹೌದು ಒಂದು ಕಾಲದಲ್ಲಿ ಸ್ಯಾಂಡಲ್‌ವುಡ್ ಕಾಮಿಡಿ ಕಿಂಗ್ ಕೋಮಲ್‌ ಹೀರೋ ಆಗಿ 'ಕೆಂಪೇಗೌಡ-2' ಚಿತ್ರದ ಮೂಲಕ ಕಮ್‌ ಬ್ಯಾಕ್ ಮಾಡುತ್ತಿದ್ದಾರೆ, ಚಿತ್ರತಂಡ ತಿಂಗಳುಗಳ ಹಿಂದೆಯೇ ರಿಲೀಸ್ ದಿನಾಂಕ ನಿಗದಿ ಮಾಡಿಕೊಂಡಿದ್ದು ಕುರುಕ್ಷೇತ್ರ ಬಿಡುಗಡೆಯಾದರೆ ತೊಂದರೆ ಆಗುವುದು ಖಂಡಿತ. ಇದಕ್ಕೆ ಖಾಸಗಿ ವಾಹಿನಿಯೊಂದರ ಜೊತೆ ಮಾತನಾಡಿದ ಕೋಮಲ್ 'ಸಾಹೋ ರಿಲೀಸ್ ಡೇಟ್‌ ಫಿಕ್ಸ್ ಆಗಿತ್ತು. ಹಾಗಾಗಿ ವಾರಕ್ಕೆ ಮೊದಲೇ ಕೆಂಪೇಗೌಡ-2 ರಿಲೀಸ್ ಮಾಡುವುದಾಗಿ ಅನೌನ್ಸ್ ಮಾಡಿದ್ದೆವು. ಆದರೆ ಈಗ ಕುರುಕ್ಷೇತ್ರ ರಿಲೀಸ್ ಆಗುತ್ತಿದ್ದು ರಿಲೀಸ್ ಡೇಟನ್ನು ಹಿಂದಕ್ಕೂ ಹಾಕಲು ಸಾಧ್ಯವಿಲ್ಲ, ಮುಂದೂಡಲೂ ಸಾಧ್ಯವಾಗುತ್ತಿಲ್ಲ' ಎಂದಿದ್ದಾರೆ.

ತೆಲುಗಿನಲ್ಲಿ ಕುರುಕ್ಷೇತ್ರ ಪ್ರಚಾರ ಮಾಡಿದ ದರ್ಶನ್!

ಅಷ್ಟೇ ಅಲ್ಲದೇ ದೊಡ್ಡವರೊಂದಿಗೆ ಇದರ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ ನಾನು. ದೇವರ ಮೇಲೆ ಭಾರ ಹಾಕಿ ಸಿನಿಮಾ ರಿಲೀಸ್ ಮಾಡುತ್ತೇನೆ. ನಾನಾಗಿ ಹುಡ್ಕೊಂಡು ಹೋಗಿ ಅವರ ಗಾಡಿ ಹತ್ರ ಬಿದ್ದಿದ್ರೆ ಅದು ನನ್ನ ತಪ್ಪು. ಆದರೆ ಫುಟ್‌ ಪಾತ್‌ ಮೇಲೆ ನಡ್ಕೊಂಡು ಹೋಗ್ತಿದ್ದೆ. ಅವರಾಗಿಯೇ ಬಂದು ಗುದ್ದಿದ್ದಾರೆ. ಜನರು ತಮಗೆ ಇಷ್ಟವಾದ ಸಿನಿಮಾ ನೋಡುತ್ತಾರೆ. ಅವರ ಸಿನಿಮಾ ಮೊದಲು ನೋಡಿ ಆನಂತರ ನನ್ನ ಸಿನಿಮಾ ನೋಡಲಿ ಎಂದು ಬೇಸರದಿಂದ ಹೇಳಿಕೊಂಡಿದ್ದಾರೆ.