ಕ್ರಿಕೆಟ್ ಸಮಯದಲ್ಲಿ ಹಾಸ್ಯ ಚಟಾಕಿ ಮಾಡಿಕೊಂಡು ಸೋಶಿಯಲ್ ಮಿಡಿಯಾ ಫೇಮಸ್ ಟಾಕರ್ ಆಗಿ ಗುರುತಿಸಿಕೊಂಡ ಡ್ಯಾನೀಶ್ ಸೇಟ್ 2018ರಲ್ಲಿ ‘ಹಂಬಲ್ ಪೊಲಿಟೀಶಿಯನ್ ನೋಗರಾಜ್ ’ ಚಿತ್ರದ ಮೂಲಕ ರಾಜಕಾರಣಿ ಆಗಿ ಕಾಣಿಸಿಕೊಂಡಿದ್ದರು.

ಮತ್ತೆ ನಾಗಣ್ಣಗಾಗಿ ಕಾಯುತ್ತಾ ಮತ್ತೊಮ್ಮೆ ಯಾವಾಗಪ್ಪಾ ನಾಗಣ್ಣ ಕಾಣಿಸಿಕೊಳ್ಳುತ್ತಾರೆ ಅನ್ನುವರಿಗೆ ಗುಡ್ ನ್ಯೂಸ್ ಇಲ್ಲಿದೆ.....

ಹೌದು.....‘ಸೀಕ್ವೆಲ್ ಸ್ಕ್ರಿಪ್ಟ್ ಸಿದ್ದವಾಗಿದ್ದು, ನಾಗಣ್ಣ ಮತ್ತೆ ಬರುತ್ತಿದ್ದಾನೆ’ ಎಂದು ಹೇಳುವ ಮೂಲಕ ಗುಡ್ ನ್ಯೂಸ್ ನೀಡಿದ್ದಾರೆ. ಇದರ ಮೊದಲ ಭಾಗದ ನಿರ್ಮಾಣ ಕಾರ್ಯವನ್ನು ಪುಷ್ಕರ್ ಮಲ್ಲಿಕಾರ್ಜುನಯ್ಯ ಹಾಗೂ ರಕ್ಷಿತ್ ಶೆಟ್ಟಿ ಮಾಡುತ್ತಾರೆಂಬ ಗಾಳಿ ಸುದ್ದಿ ಹಬ್ಬಿದೆ. ಆದರೆ ಎರಡನೇ ಪಾರ್ಟ್ ಗೆ ಸ್ಕ್ರಿಪ್ಟ್ ಸಹಾಯ ಮಾಡಲು ಸಾದ್ ಖಾನ್ ಕೈ ಜೋಡಿಸಿದ್ದಾರೆ.

 

 
 
 
 
 
 
 
 
 
 
 
 
 

Countrymen 🤗 The script for the Sequel is ready 😎 Noganna is caming soon 😀

A post shared by Danish sait (@danishsait) on Mar 26, 2019 at 1:11am PDT