Asianet Suvarna News Asianet Suvarna News

ಚೀನಾದಲ್ಲಿ ಹೊಸ ದಾಖಲೆ ನಿರ್ಮಿಸಿದ ಭಾರತೀಯ ಸಿನಿಮಾ; ಬಾಹುಬಲಿ ವರ್ಸಸ್ ದಂಗಲ್'ನಲ್ಲಿ ಗೆಲ್ಲೋರಾರು?

ಮೇ 5ರಂದು ಚೀನಾದಲ್ಲಿ ಬರೋಬ್ಬರಿ 9 ಸಾವಿರ ಸ್ಕ್ರೀನ್'ಗಳಲ್ಲಿ ಬಿಡುಗಡೆಯಾದ 'ದಂಗಲ್' ಸಿನಿಮಾ ವಿಶ್ವಾದ್ಯಂತ ಒಟ್ಟಾರೆ ಗಳಿಸಿದ ಮೊತ್ತ 1,848 ಕೋಟಿ ರೂಪಾಯಿಗೆ ಏರಿದೆ. ಚೀನಾದಲ್ಲಿ ಸೂಪರ್'ಹಿಟ್ ಆಗಿರುವ ಈ ಚಿತ್ರದ ಪ್ರದರ್ಶನಕ್ಕೆ ಚೀನಾದಲ್ಲಿ ಜುಲೈ 4ರವರೆಗೆ ಕಾಲಾವಕಾಶವಿರುವ ಹಿನ್ನೆಲೆಯಲ್ಲಿ ಒಟ್ಟಾರೆ ಗಳಿಕೆಯು 2 ಸಾವಿರ ಕೋಟಿ ದಾಟುವ ನಿರೀಕ್ಷೆ ಇದೆ. ಇದಾದರೆ ಭಾರತೀಯ ಚಿತ್ರರಂಗಕ್ಕೆ ದಂಗಲ್ ಹೊಸ ಮೈಲಿಗಲ್ಲು ಸೃಷ್ಟಿಸಲಿದೆ. 2 ಸಾವಿರ ಕೋಟಿ ರೂ ಗಳಿಸಿದ ಮೊದಲ ಭಾರತೀಯ ಚಿತ್ರವಾಗಲಿದೆ.

dangal vs bahubali fight at china box office
  • Facebook
  • Twitter
  • Whatsapp

ಬೀಜಿಂಗ್‌: ಅಮೀರ್ ಖಾನ್ ಅಭಿನಯದ 'ದಂಗಲ್' ಚಿತ್ರ ಹೊಸ ಮೈಲಿಗಲ್ಲಿನತ್ತ ಮುನ್ನುಗ್ಗುತ್ತಿದೆ. ನಿಜಜೀವನದ ಕಥೆ ಇರುವ ಈ ಸಿನಿಮಾ ಚೀನಾದಲ್ಲಿ ಹೊಸ ದಾಖಲೆಯನ್ನೇ ನಿರ್ಮಿಸಿದೆ. ಚೀನಾ ದೇಶವೊಂದರಲ್ಲೇ ಈ ಚಿತ್ರದ ಗಳಿಕೆ 1 ಸಾವಿರ ಕೋಟಿ ರೂ ದಾಟಿದ್ದು, 1,089 ಕೋಟಿ ರೂ ಗಳಿಕೆ ಮಾಡಿದೆ. ಈ ವರ್ಷ ಚೀನಾದ ಬಾಕ್ಸಾಫೀಸ್'ನಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರಗಳ ಪಟ್ಟಿಯಲ್ಲಿ ದಂಗಲ್ ಎರಡನೇ ಸ್ಥಾನಕ್ಕೇರಿದೆ. ಅಷ್ಟೇ ಅಲ್ಲ, ಚೀನಾದಲ್ಲಿ ಸಾರ್ವಕಾಲಿಕ ಸೂಪರ್'ಹಿಟ್ ಚಿತ್ರಗಳ ಸಾಲಿನಲ್ಲಿ ಅಮೀರ್ ಖಾನ್ ಸಿನಿಮಾ 4ನೇ ಸ್ಥಾನ ಗಳಿಸಿದೆ.

ಮೇ 5ರಂದು ಚೀನಾದಲ್ಲಿ ಬರೋಬ್ಬರಿ 9 ಸಾವಿರ ಸ್ಕ್ರೀನ್'ಗಳಲ್ಲಿ ಬಿಡುಗಡೆಯಾದ 'ದಂಗಲ್' ಸಿನಿಮಾ ವಿಶ್ವಾದ್ಯಂತ ಒಟ್ಟಾರೆ ಗಳಿಸಿದ ಮೊತ್ತ 1,848 ಕೋಟಿ ರೂಪಾಯಿಗೆ ಏರಿದೆ. ಚೀನಾದಲ್ಲಿ ಸೂಪರ್'ಹಿಟ್ ಆಗಿರುವ ಈ ಚಿತ್ರದ ಪ್ರದರ್ಶನಕ್ಕೆ ಚೀನಾದಲ್ಲಿ ಜುಲೈ 4ರವರೆಗೆ ಕಾಲಾವಕಾಶವಿರುವ ಹಿನ್ನೆಲೆಯಲ್ಲಿ ಒಟ್ಟಾರೆ ಗಳಿಕೆಯು 2 ಸಾವಿರ ಕೋಟಿ ದಾಟುವ ನಿರೀಕ್ಷೆ ಇದೆ. ಇದಾದರೆ ಭಾರತೀಯ ಚಿತ್ರರಂಗಕ್ಕೆ ದಂಗಲ್ ಹೊಸ ಮೈಲಿಗಲ್ಲು ಸೃಷ್ಟಿಸಲಿದೆ. 2 ಸಾವಿರ ಕೋಟಿ ರೂ ಗಳಿಸಿದ ಮೊದಲ ಭಾರತೀಯ ಚಿತ್ರವಾಗಲಿದೆ.

ಬಾಹುಬಲಿ-2 ಕಥೆ?
ಇನ್ನು, ರಾಜಮೌಳಿ ನಿರ್ದೇಶನದ ಬಾಹುಬಲಿ-2 ಸಿನಿಮಾ ವಿಶ್ವಾದ್ಯಂತ ಒಟ್ಟಾರೆ ಗಳಿಸಿದ ಮೊತ್ತ 1,700 ಕೋಟಿ ದಾಟಿದೆ. ಭಾರತದಲ್ಲಿ ಅತೀಹೆಚ್ಚು ಮತ್ತು ಅಮೆರಿಕದಲ್ಲಿ ತಕ್ಕಮಟ್ಟಿಗೆ ಯಶಸ್ಸು ಕಂಡಿರುವ ಬಾಹುಬಲಿ ಸಿನಿಮಾ ಜುಲೈ ತಿಂಗಳಲ್ಲಿ ಚೀನಾದ 6 ಸಾವಿರ ಸ್ಕ್ರೀನ್'ಗಳಲ್ಲಿ ಬಿಡುಗಡೆಯಾಗಲಿದೆ. ದಂಗಲ್ ಚಿತ್ರವನ್ನು ಸ್ವೀಕರಿಸಿದಂತೆ ಚೀನೀಯರು ಬಾಹುಬಲಿಯನ್ನೂ ಅಪ್ಪಿಕೊಂಡರೆ ಪ್ರಭಾಸ್ ನಟನೆಯ ಸಿನಿಮಾ ಹೊಸ ದಾಖಲೆ ಸೃಷ್ಟಿಸಲಿದೆ. 'ದಂಗಲ್' ಸಿನಿಮಾವನ್ನು ಸುಲಭವಾಗಿ ಹಿಂದಿಕ್ಕಿ ಬಾಹುಬಲಿ ಹೊಸ ಇತಿಹಾಸ ಸೃಷ್ಟಿಸಲಿದೆ. ಆದರೆ, ರಿಯಲ್ ಲೈಫ್ ಕುಸ್ತಿಪಟುವಿನ ಕಥೆ ಇದ್ದ 'ದಂಗಲ್' ಚೀನೀಯರಿಗೆ ಮಾಡಿದ ಮ್ಯಾಜಿಕನ್ನು ಫ್ಯಾಂಟಸಿ ಥ್ರಿಲ್ಲರ್ ಬಾಹುಬಲಿಯು ಮಾಡುತ್ತಾ ಎಂದು ಕಾದು ನೋಡಬೇಕು.

epaper.kannadaprabha.in

Follow Us:
Download App:
  • android
  • ios