ತಂಗಿಯ ಮದ್ವೆ ಮಾಡಿ ಕಳಿಸೋ ವೇಳೆ ಬಿಕ್ಕಿ ಬಿಕ್ಕಿ ಅತ್ತ ಆರ್‌ಸಿಬಿ ಆಟಗಾರ
ಆರ್‌ಸಿಬಿ ಆಟಗಾರರೊಬ್ಬರು ತನ್ನ ತಂಗಿಯ ಮದ್ವೆ ಮಾಡಿ ಗಂಡನ ಮನೆಗೆ ಕಳುಹಿಸಿಕೊಡುವ ವೇಳೆ ಬಿಕ್ಕಿ ಬಿಕ್ಕಿ ಅತ್ತಿದ್ದು ಅದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶ್ರೀಲಂಕಾ: ಅಣ್ಣ ತಮ್ಮಂದಿರಿಗೆ ಅಪ್ಪನ ಬಳಿ ದೂರು ಹೇಳಿ ಏಟು ತಿನ್ನಿಸುವ ಅಕ್ಕತಂಗಿಯರೆಂದರೆ ಅಣ್ಣ ತಮ್ಮಂದಿರಿಗೆ ಸ್ವಲ್ಪ ಇರಿಸು ಮುರಿಸು ಜೊತೆಗೆ ಡಬ್ಬಲ್ ಪ್ರೀತಿ. ಸದಾ ಟಿವಿ ರಿಮೋಟ್‌ಗೆ, ಅಮ್ಮ ಮಾಡಿದ ಸ್ಪೆಷಲ್ ತಿಂಡಿಗೆ ಜಗಳ ಮಾಡುವ ಅಕ್ಕ ತಮ್ಮಂದಿರು ಅಣ್ಣ ತಂಗಿಯರು ಬೇರೆಯವರರೇನಾದರೂ ತಮ್ಮ ಸುದ್ದಿಗೆ ಬಂದರೆಂದರೆ ತಮ್ಮೊಳಗಿನ ಎಲ್ಲಾ ಸಿಟ್ಟು ಸೆಡು ಮರೆತು ಒಂದಾಗುತ್ತಾರೆ. ಅಣ್ಣ ತಂಗಿ ಅಕ್ಕ ತಮ್ಮ ಎಷ್ಟೇ ಜಗಳವಾಡಲಿ ಆದರೆ ಮದುವೆಯಾಗಿ ತಂಗಿ ಅಥವಾ ಅಕ್ಕ ಮನೆಯಿಂದ ಹೊರಟು ಹೋಗುತ್ತಾರೆ ಎಂಬ ಸ್ಥಿತಿ ಬಂದಾಗ ಎಂತಹಾ ಅಣ್ಣನೂ ಕೂಡ ಭಾವುಕನಾಗಿ ಕಣ್ಣೀರಿಡಲು ಶುರು ಮಾಡುತ್ತಾನೆ. ಇದು ಒಡಹುಟ್ಟಿದವರ ಪ್ರೀತಿ. ಇದಕ್ಕೆ ಯಾರೂ ಹೊರತಲ್ಲ, ಸೆಲೆಬ್ರಿಟಿಗಳಾದರೂ ಸರಿಯೇ ಸಾಮಾನ್ಯರೂ ಸರಿಯೇ ಅಕ್ಕ ತಂಗಿಯನ್ನು ಮನೆಯಿಂದ ಕಳುಹಿಸಿ ಕೊಡುವ ವೇಳೆ ತುಂಬಾ ಭಾವುಕರಾಗುತ್ತಾರೆ. ಅದೇ ರೀತಿ ಇಲ್ಲಿ ಈಗ ಆರ್‌ಸಿಬಿ ಆಟಗಾರರೊಬ್ಬರು ತನ್ನ ತಂಗಿಯ ಮದ್ವೆ ಮಾಡಿ ಗಂಡನ ಮನೆಗೆ ಕಳುಹಿಸಿಕೊಡುವ ವೇಳೆ ಬಿಕ್ಕಿ ಬಿಕ್ಕಿ ಅತ್ತಿದ್ದು ಅದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆರ್‌ಸಿಬಿ (RCB Team) ತಂಡದ ಐಪಿಎಲ್ ಆಟಗಾರ ಹಾಗೂ ಶ್ರೀಲಂಕಾ ಕ್ರಿಕೆಟ್ ತಂಡದ (Sri Lanka cricket Team) ಆಟಗಾರ ವನಿಂದು ಹಸರಂಗ ತಮ್ಮ ಕಿರಿಯ ಸಹೋದರಿಯ ಮದ್ವೆ ವೇಳೆ ಭಾವುಕರಾಗಿ ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ತನ್ನ ಕಿರಿಯ ಸಹೋದರಿಯನ್ನು ತಬ್ಬಿ ಹಿಡಿದು ವನಿಂದು ಹಸರಂಗ ಬಿಕ್ಕಿ ಬಿಕ್ಕಿ ಅಳುತ್ತಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಚಿಂತೆ ಹೆಚ್ಚಿಸಿದ ಕೆ ಎಲ್ ರಾಹುಲ್ ಫಿಟ್ನೆಸ್..!
ಕ್ರಿಕೆಟ್ ಬರಹಗಾರ ನಿಬ್ರಾಜ್ ರಂಜಾನ್ ಈ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ತಂಗಿ ಮದ್ವೆ ವೇಳೆ ಕ್ರಿಕೆಟಿಗ ವನಿಂದು ಹಸರಂಗ ಭಾವುಕರಾಗಿ ಅತ್ತರು ಎಂದು ಬರೆದುಕೊಂಡಿದ್ದಾರೆ. ವೀಡಿಯೋದಲ್ಲಿ ತಂಗಿಯನ್ನು ಹಾಗೂ ಭಾವ(ತಂಗಿ ಗಂಡ)ನನ್ನು ತಬ್ಬಿಕೊಂಡು ವನಿಂದು ಹಸರಂಗ ಅಳುತ್ತಿರುವುದನ್ನು ನೋಡಬಹುದು, ಜೊತೆಯಲ್ಲಿರುವವರು ಹಸರಂಗ ಅವರನ್ನು ಸಮಾಧಾನಪಡಿಸುವುದನ್ನು ಕಾಣಬಹುದು. ಹಸರಂಗ ಅವರು ಆಗಸ್ಟ್ 30ರಿಂದ ಪಾಕಿಸ್ತಾನದಲ್ಲಿ ನಡೆಯಲ್ಲಿರುವ ಏಷ್ಯಾಕಪ್‌ನಲ್ಲಿ (Asia cup 2023) ಆಡುವ ಸಾಧ್ಯತೆ ಇಲ್ಲ ಎಂದು ವರದಿ ಆಗಿದೆ. ಹಸರಂಗ ಅವರು ಗಾಯದಿಂದ ಬಳಲುತ್ತಿದ್ದು, ಈ ಹಿನ್ನೆಲೆಯಲ್ಲಿ ಏಷ್ಯಾಕಪ್-2023ರಲ್ಲಿ ಭಾಗಿಯಾಗುವ ಸಾಧ್ಯತೆ ಕಡಿಮೆ ಎಂದು ವರದಿಯಾಗಿದೆ.
2023ರ ಲಂಕಾ ಪ್ರೀಮಿಯರ್ ಲೀಗ್ ವೇಳೆ ಹಸರಂಗ ಅವರು ಸೂಪರ್ ಫಾರ್ಮ್‌ನಲ್ಲಿದ್ದರು. ಅಲ್ಲಿ ಅವರು ಪ್ರತಿನಿಧಿಸಿದ್ದ B-Love Kandy ತಂಡ
ಲಂಕಾ ಪ್ರೀಮಿಯರ್ ಲೀಗ್ ಕಪ್ ಬಾಚಿಕೊಂಡಿತ್ತು. ಶ್ರೀಲಂಕಾದ ಅಲ್ರೌಂಡರ್ ಆಗಿರುವ ಹಸರಂಗ ಅವರು T20 ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಹಾಗೂ ವಿಕೆಟ್ ಕಬಳಿಸಿದ ಆಟಗಾರರಾಗಿ ಹೊರಹೊಮ್ಮಿದ್ದರು. ಇವರು ಇದುವರೆಗೆ ಒಟ್ಟು 26 ಐಪಿಎಲ್ ಪಂದ್ಯಗಳಲ್ಲಿ ಆಡಿದ್ದಾರೆ.
ಏಷ್ಯಾಕಪ್ ಟೂರ್ನಿಗೂ ಮುನ್ನ ಲಂಕಾದ 2 ಸ್ಟಾರ್ ಆಟಗಾರರಿಗೆ ಕೊರೋನಾ ಪಾಸಿಟಿವ್! ಆತಂಕದಲ್ಲಿ ಲಂಕಾ ಪಾಳಯ
ಆಗಸ್ಟ್ 30ರಿಂದ ಪಾಕಿಸ್ತಾನದ ಮುಲ್ತಾನ್‌ನಲ್ಲಿ 2023ರ ಏಷ್ಯಾಕಪ್ ಕ್ರಿಕೆಟ್ ಪಂದ್ಯಾವಳಿ ಆರಂಭವಾಗಲಿದ್ದು, ಪಂದ್ಯಕ್ಕೆ ಮೊದಲು ಶ್ರೀಲಂಕಾ ತಂಡಕ್ಕೆ ಆಘಾತ ಕಾದಿದೆ. ಶ್ರೀಲಂಕಾದ ದುಶಮಂತ ಚಮೀರಾ ಹಾಗೂ ವನಿಂದು ಹಸರಂಗ ಗಾಯಾಳುಗಳಾಗಿದ್ದು, ಕುಸಾಲ್ ಪೆರೇರಾ (Kusal Perera), ಅವಿಷ್ಕಾ ಫೆರ್ನಾಂಡೋ ( Avishka Fernando) ಅವರು ಕೋವಿಡ್ ಪಾಸಿಟಿವ್‌ಗೆ (COVID Positive) ಒಳಗಾಗಿದ್ದಾರೆ. ಹೀಗಾಗಿ ಪ್ರಮುಖ ಆಟಗಾರರಿಲ್ಲದೇ ಶ್ರೀಲಂಕಾ ತಂಡ ಕಷ್ಟದಲ್ಲಿದೆ.