ಕನ್ನಡ ಕಿರುತೆರೆಯ ಪ್ರಸಿದ್ಧ ರಿಯಾಲಿಟಿ ಶೋ ಸರಿಗಮಪ ಕಾರ್ಯಕ್ರಮದ ವೇದಿಕೆ ಹನುಮಂತು ತಂಗಿ ವಿದ್ಯಾಭ್ಯಾಸಕ್ಕೆ ನೆರವಾಗಿದೆ. ಕಾನ್ಫಿಡೆಂಟ್ ಗ್ರೂಪ್ ಹನುಮಂತು ತಂಗಿ ಓದಿಗೆ, ಕೆಲಸಕ್ಕೆ ನೆರವಾಗಲು ಮುಂದಾಗಿದೆ.

ಸರಿಗಮಪ ಸೀಸನ್ 15 ಫ್ಯಾಮಿಲಿ ರೌಂಡ್ ನಲ್ಲಿ ಹನುಮಂತು ಹಾಗೂ ಅವರ ತಂಗಿ 'ಬಡತನದ ಮನಿಯೊಳಗೆ ಹೆಣ್ಣು ಹುಟ್ಟಬಾರದು' ಎಂಬ ಉತ್ತರ ಕರ್ನಾಟಕದ ಜನಪ್ರಿಯ ಗೀತೆ ಹಾಡಿದರು. ಈ ಹಾಡು ಎಲ್ಲರ ಮನ ಮುಟ್ಟುವಂತಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆ್ಯಂಕರ್ ಅನುಶ್ರೀ, ಹನುಮಂತು ತಂಗಿಗೆ ' ಬೆಂಗಳೂರಿನಿಂದ ಮನೆಗೆ ಬಂದಾಗ ಹನುಮಂತು ನಿಮಗೆ ಏನು ತಂದು ಕೊಟ್ಟ' ಎಂದು ಕೇಳಿದ್ದಕ್ಕೆ ಆಕೆ ' 100 ರೂಪಾಯಿ ಕೊಟ್ಟು ಹೋದ ಎಂದು ಹೇಳುತ್ತಾಳೆ. ಆ ಹಣದಲ್ಲಿ ಏನು ಮಾಡಿದ್ರಿ ಎಂದಿದಕ್ಕೆ 'ನೋಟ್ಸ್ ತೆಗೆದುಕೊಂಡೆ ' ಎಂದು ಮುಗ್ಧವಾಗಿ ಹೇಳುತ್ತಾಳೆ. ಇದು ಎಲ್ಲರನ್ನೂ ಭಾವುಕರನ್ನಾಗಿಸಿತು.

ಫ್ಯಾಮಿಲಿ ರೌಂಡ್ ನೋಡಲು ಕಾನ್ಫಿಡೆಂಟ್ ಗ್ರೂಪ್ ಮಾಲಿಕರು ಆಗಮಿಸಿದ್ದರು. ಇವರ ಕಷ್ಟವನ್ನು ಕಂಡ ಅವರು ಆಕೆಯ ವಿದ್ಯಾಭ್ಯಾಸಕ್ಕೆ 50 ಸಾವಿರ ರೂಪಾಯಿ ಹಾಗೂ ಓದು ಮುಗಿದ ನಂತರ ಕೆಲಸವನ್ನು ತಾವೇ ನೀಡುವುದಾಗಿ ಜನರ ಮುಂದೆ ಮಾತು ನೀಡಿದರು.

ಫ್ಯಾಮಿಲಿ ರೌಂಡ್ ನೋಡಲು ಕಾನ್ಫಿಡೆಂಟ್ ಗ್ರೂಪ್ ಮಾಲಿಕರು ಆಗಮಿಸಿದ್ದರು. ಇವರ ಕಷ್ಟವನ್ನು ಕಂಡ ಅವರು ಆಕೆಯ ವಿದ್ಯಾಭ್ಯಾಸಕ್ಕೆ 50 ಸಾವಿರ ರೂಪಾಯಿ ಹಾಗೂ ಓದು ಮುಗಿದ ನಂತರ ಕೆಲಸವನ್ನು ತಾವೇ ನೀಡುವುದಾಗಿ ಜನರ ಮುಂದೆ ಮಾತು ನೀಡಿದರು.